Site icon Vistara News

ರಾಜಕಾಲುವೆಯಲ್ಲಿ ತೇಲಿ ಬಂತು ನವಜಾತ ಶಿಶುಗಳ ಮೃತದೇಹ

ನವಜಾತ ಶಿಶುಗಳ ಮೃತದೇಹ ಪತ್ತೆ

ಬೆಳಗಾವಿ: ಇಲ್ಲಿನ ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ರಾಜಕಾಲುವೆಯಲ್ಲಿ ನವಜಾತ ಶಿಶುಗಳ ಮೃತದೇಹಗಳು ಪತ್ತೆಯಾಗಿವೆ. ೭ ನವಜಾತ ಶಿಶುಗಳ ಮೃತದೇಹವನ್ನು ಗಾಜಿನ ಡಬ್ಬದಲ್ಲಿ ಹಾಕಿ ರಾಜಕಾಲುವೆಗೆ ಯಾರೋ ಎಸೆದು ಹೋಗಿದ್ದಾರೆ.

ಇದನ್ನೂ ಓದಿ | ಹೊಟ್ಟೆ ಊದಿಕೊಂಡಿದ್ದ ನವಜಾತ ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ; ವೈದ್ಯರೇ ಕಂಗಾಲು !

ಯಾರು ಎಸೆದರು ಯಾಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗೆ ಬಾಟಲಿಯೊಳಗೆ ಇದ್ದ ನವಜಾತ ಶಿಶುಗಳ ಮೃತದೇಹ ಇರುವುದು ಗೊತ್ತಾಗುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿದ್ದಾರೆ. ಶಿಶುಗಳ ಮೃತದೇಹ ಕಂಡು ಹೌಹಾರಿರುವ ಮೂಡಲಗಿಯ ಜನ, ಯಾರೋ ಬೇಡದ ಮಗುವೆಂದು ಅಬಾರ್ಷನ್‌ ಮಾಡಿಸಿ ಬೀಸಾಕಿರಬೇಕೆಂದು ಶಂಕಿಸಿದ್ದಾರೆ.

ಮೊದಲು ೪ ಮೃತದೇಹ ಪತ್ತೆಯಾಗಿತ್ತು. ಆದರೆ ಅದರ ಸಂಖ್ಯೆ ೭ಕ್ಕೆ ಏರಿಕೆ ಆಯಿತು. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ವೈದ್ಯರ ಮಹಾ ಪ್ರಮಾದ; ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದಾಗ ಕಣ್ಣುಬಿಟ್ಟ ಶಿಶು !

Exit mobile version