ಉಡುಪಿ: ರಾಜ್ಯದ ಹಲವು ಕಡೆಗಳಲ್ಲಿ ಪಿಎಫ್‌ಐ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆದಿದ್ದು, ಉಡುಪಿಯಲ್ಲೂ ಒಬ್ಬ ಮುಖಂಡನಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಎನ್ಐಎ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಮುಖಂಡನಿಗಾಗಿ ಪೊಲೀಸರು ಕಾಪು ಮತ್ತು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆತನ ನಂಬರ್ ಲೊಕೇಶನ್ ಉಡುಪಿಯಲ್ಲಿ ಪತ್ತೆಯಾದ ಕಾರಣ ಇಲ್ಲಿ ಹುಡುಕಾಟ ನಡೆದಿದೆ ಎನ್ನಲಾಗಿದೆ.
ರಸ್ತೆ ತಡೆ, ಪ್ರತಿಭಟನೆ
ಈ ನಡುವೆ, ರಾಜ್ಯಾದ್ಯಂತ ಪಿಎಫ್ಐ ಹಾಗೂ ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಹಾಗು ಮುಖಂಡರ ಬಂಧನವನ್ನು ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66 ರ ಕಾಪುವಿನಲ್ಲಿ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಪೊಲೀಸ್ ಅನುಮತಿ ಪಡೆಯದೆ ಹೆದ್ದಾರಿ ತಡೆ ನಡೆಸಿದ ಹಿನ್ನಲೆಯಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷ ಕೆ.ಸಿ ಪೂವಯ್ಯ, ಕಾಪು ಎಸೈ ಶ್ರೀ ಶೈಲ ಮುರಗೋಡ ಹಾಗು ಸಿಬ್ಬಂದಿಗಳು ಹೆಚ್ಚಿನ ಭದ್ರತೆ ನೀಡಿದ್ದಾರೆ.
ಇದನ್ನೂ ಓದಿ | NIA raid | ಎಲ್ಲ ದಾಖಲೆ ಇದ್ದರೂ PFI ಬ್ಯಾನ್‌ಗೆ ಕೇಂದ್ರ ಸರಕಾರ ಮೀನ ಮೇಷ: ಪ್ರಮೋದ್ ಮುತಾಲಿಕ್ ಆಕ್ರೋಶ