Site icon Vistara News

NIA raid | ಎಲ್ಲ ದಾಖಲೆ ಇದ್ದರೂ PFI ಬ್ಯಾನ್‌ಗೆ ಕೇಂದ್ರ ಸರಕಾರ ಮೀನ ಮೇಷ: ಪ್ರಮೋದ್‌ ಮುತಾಲಿಕ್‌ ಆಕ್ರೋಶ

Belagavi Shootout

ಧಾರವಾಡ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ಹಲವಾರು ದೇಶದ್ರೋಹಿ ಕೆಲಸಗಳಲ್ಲಿ ಭಾಗವಹಿಸಿರುವ ಬಗ್ಗೆ ಸಾಕಷ್ಟು ದಾಖಲೆ ಇದ್ದರೂ ಕೇಂದ್ರ ಸರಕಾರ ಅದನ್ನು ನಿಷೇಧಿಸಲು ಮೀನಾಮೇಷ ಮಾಡುತ್ತಿದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪಿ ಎಪ್ ಐ ಬ್ಯಾನ್ ಮಾಡಬೇಕು ಅಂತ ಹೋರಾಟ ಮಾಡುತ್ತಾ ಬಂದಿದ್ದೇವೆ,

ದೇಶ ಮತ್ತು ರಾಜ್ಯದಲ್ಲಿ ನಡೆದ ಹಲವು ಗಲಭೆ, ಕೊಲೆಗಳಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಭಾಗಿಯಾಗಿರುವ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ಕೇಂದ್ರ ಸರಕಾರಕ್ಕೂ ಮಾಹಿತಿ ಇದೆ. ನಾವು ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಬಹುಕಾಲದಿಂದ ಹೋರಾಟ ಮಾಡುತ್ತಲೇ ಇದ್ದೇವೆ. ಆದರೆ, ಕೇಂದ್ರ ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ಹೇಳಿದರು ಮುತಾಲಿಕ್‌.

ರಾಜ್ಯಾದ್ಯಂತ ಪಿಎಫ್‌ಐ ನಾಯಕರ ಮೇಲೆ ಎನ್‌ಐಎ ದಾಳಿ ಮಾಡಿದೆ. ಅಲ್ಲಿ ಲಕ್ಷಾಂತರ ರೂ. ಹಣವೂ ಸಿಕ್ಕಿರುವ ಮಾಹಿತಿ ಇದೆ. ಈ ಸಂಘಟನೆಗಳು ನೂರಕ್ಕೆ ನೂರರಷ್ಟು ದೇಶದ್ರೋಹಿ ಕೆಲಸ ಮಾಡುತ್ತಿರುವುದು ನಿಜ. ಹಿಜಾಬ್ ಪ್ರಕರಣದಲ್ಲೂ ಅವರಿದ್ದಾರೆ. ರುದ್ರೇಶ್‌, ಪ್ರವೀಣ್‌ ನೆಟ್ಟಾರ್‌ ಸೇರಿದಂತೆ ಹಿಂದೂ ನಾಯಕರ ಕೊಲೆಯಲ್ಲಿ ಈ ಸಂಘಟನೆಗಳ ಕಾರ್ಯಕರ್ತರೇ ಭಾಗಿಯಾಗಿದ್ದಾರೆ. ಸಂಘಟನೆ ಹೆಸರು ಎಫ್‌ಐಆರ್‌ನಲ್ಲೂ ದಾಖಲಾಗಿದೆ. ಇಷ್ಟೆಲ್ಲಾ ದಾಖಲೆ ಇದ್ದರೂ ಬ್ಯಾನ್ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು ಮುತಾಲಿಕ್‌.

ಬಿಹಾರದ ಪುಲ್ವಾಮಾ ಷರೀಫ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿಗೇ ಪ್ಲ್ಯಾನ್‌ ಮಾಡಿದ್ದರು. ೨೦೪೭ರ ಹೊತ್ತಿಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಘೋಷಿಸಿಕೊಂಡಿದ್ದಾರೆ. ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿದ್ದಕ್ಕೆ ದಾಖಲೆ ಇದೆ. ಹೀಗೆಲ್ಲ ಮಾಡುವ ಸಂಘಟನೆಯ ಸದಸ್ಯರನ್ನು ಬಂಧಿಸಿ ಶಾಶ್ವತವಾಗಿ ಜೈಲಿಗಟ್ಟಬೇಕು ಎಂದು ಹೇಳಿದ ಮುತಾಲಿಕ್‌, ಇವರು ದೇಶದ್ರೋಹ ಕೆಲಸ ಮಾಡಿ ಅರೆಸ್ಟ್‌ ಆಗ್ತಾರೆ. ಆದರೆ, ಜಾಮೀನು ಮೇಲೆ ಹೊರಗಡೆ ಬರ್ತಾರೆ ಎಂದು ಹೇಳಿದರು.

ಬ್ಯಾನ್‌ ಪಿಎಫ್‌ಐ, ಸೇವ್‌ ಇಂಡಿಯಾ
ʻʻಮುಂದಿನ ತಿಂಗಳಿನಿಂದ ಎಲ್ಲ ಹಿಂದೂ ಸಂಘಟನೆಗಳನ್ನು ಸೇರಿಸಿಕೊಂಡು ಬ್ಯಾನ್ ಪಿಎಫ್ಐ, ಸೇವ್ ಇಂಡಿಯಾ ಹೋರಾಟ ಮಾಡುತ್ತೇವೆʼʼ ಎಂದು ಘೋಷಿಸಿದರು ಪ್ರಮೋದ್‌ ಮುತಾಲಿಕ್‌.

ʻʻರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಆಗಾಗ ಅಲ್ಲಿ ಇಲ್ಲಿ ದಾಳಿ ಮಾಡೋದು ಬಂಧಿಸುವುದನ್ನು ನಿಲ್ಲಿಸಿ, ಸಂಘಟನೆಯನ್ನು ನಿಷೇಧಿಸಿ.. ಎಲ್ಲವೂ ಬಂದ್‌ ಆಗುತ್ತದೆʼʼ ಎಂದು ಹೇಳಿದರು ಮುತಾಲಿಕ್‌.

ಇದನ್ನೂ ಓದಿ | NIA Raid | ನಾವ್ಯಾರಿಗೂ ಹೆದರೋಲ್ಲ, ಶರಣಾಗೋದೂ ಇಲ್ಲ; ಎನ್ಐಎ ದಾಳಿ ಬೆನ್ನಲ್ಲೇ ಪಿಎಫ್​ಐ ಹೇಳಿಕೆ ಬಿಡುಗಡೆ

Exit mobile version