ಬೆಂಗಳೂರು, ಕರ್ನಾಟಕ: ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಬಿಜೆಪಿಯ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ನಿಪ್ಪಾಣಿ ಕ್ಷೇತ್ರದಲ್ಲಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದಾರೆ. 7292 ಮತಗಳ ಅಂತರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಉತ್ತಮ ಪಾಟೀಲ್ ಅವರ ವಿರುದ್ಧ ಜಯವನ್ನು ಸಾಧಿಸಿದ್ದಾರೆ. ಜೊಲ್ಲೆ ಅವರು 73,348 ಮತಗಳನ್ನು ಪಡೆದುಕೊಂಡರೆ, ಎನ್‌ಸಿಪಿಯ 66,056 ಹಾಗೂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕಾಕಾಸಾಹೇಬ್ ಪಾಟೀಲ್ ಅವರಿಗೆ 44,107 ಮತಗಳು ಬಂದಿವೆ(Nippani election Results).
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಬಿಜೆಪಿಯ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್‌ನ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಜೊಲ್ಲೆ ಅವರು 87006 ಮತಗಳನ್ನು ಪಡೆದುಕೊಂಡರೆ, ಪಾಟೀಲ್ 78,500 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಗೆಲುವಿನ ಅಂತರ 8506 ಇತ್ತು. ನಿಪ್ಪಾಣಿ ಕ್ಷೇತ್ರವು ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಜೊಲೆ ಕುಟುಂಬದ ಹಿಡಿತದಲ್ಲಿದೆ.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ