Site icon Vistara News

ಫ್ಯಾಟ್‌ ಸರ್ಜರಿಯ ಇನ್ನೊಂದು ಎಡವಟ್ಟು: ಯುವತಿ ಸೊಂಟದಲ್ಲಿ ಕೀವು, ಗಾಯ

ಸರ್ಜರಿ ಎಫೆಕ್ಟ್‌

ಬೆಂಗಳೂರು: ನಟಿ ಚೇತನ ರಾಜ್ ಸಾವು ಪ್ರಕರಣ ಮಾಸುವ ಮೊದಲೇ ಇನ್ನೊಂದು ಫ್ಯಾಟ್‌ ಸರ್ಜರಿ ಎಡವಟ್ಟಾಗಿರುವ ವಿಚಾರ ಬೆಳಕಿಗೆ ಬಂದಿದೆ.

ದೆಹಲಿ ಮೂಲದ ಯುವತಿ ಅಕಾಂಕ್ಷ ಕಂಪನಿಯಲ್ಲಿ ಎಚ್‌ಆರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಎಂ.ಎಸ್‌. ಪಾಳ್ಯದ ಅವೇಕ್ಷಾ ಆಸ್ಪತ್ರೆಯಲ್ಲಿ ಸರ್ಜರಿ ಪ್ರಕ್ರಿಯೆಯಲ್ಲಿ ಪ್ರೆಸ್ಟಿನ್‌ ಕೇರ್‌ ಮೂಲಕ ಸರ್ಜರಿ ಮಾಡಿಸಿಕೊಂಡಿದ್ದರು. ಸರ್ಜರಿ ಮಾಡಿದ 10 ದಿನದಲ್ಲಿ ಸೈಡ್‌ ಎಫೆಕ್ಟ್‌ ಶುರುವಾಗಿದೆ. ಸರ್ಜರಿಯಾದ ಭಾಗದಲ್ಲಿ ಕೀವು, ಗಾಯವಾಗಿ ನೋವಿನಿಂದ ಒದ್ದಾಡುತ್ತಿದ್ದಾರೆ. ವಿಡಿಯೋ ಮಾಡಿ ಖಾಸಗಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ | ಪತಿಗೆ ಮೊಬೈಲ್‌ ಕೊಡಲು ಹೋದ ಮಹಿಳೆ ಟ್ರ್ಯಾಕ್ಟರ್ ಗೆ ಸಿಲುಕಿ ದಾರುಣ ಸಾವು

ಈ ಕುರಿತು ವಿಡಿಯೋ ಶೇರ್‌ ಮಾಡಿರುವ ಅಕಾಂಕ್ಷ, ಕಾರ್ತಿಕ್‌ ನನಗೆ ಈ ಸ್ಥಿತಿಗೆ ತಂದಿದಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನೀನು ಮಾಡಿದ ಮೋಸವನ್ನು ಎಲ್ಲರಿಗೂ ಹೇಳುತ್ತೇನೆ. ನನ್ನ ದೇಹ ಪೂರ್ತಿ ನೋವಿನಿಂದ ಬಳಲುತ್ತಿದೆ. ತಡೆದುಕೊಳ್ಳಲು ಆಗುತ್ತಿಲ್ಲ. ಅಪ್ಪ ಅಮ್ಮನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಿನ್ನ ಕರ್ಮ ಸುಮ್ಮನೆ ಬಿಡುವುದಿಲ್ಲ ಎಂದು ವೀಡಿಯೋ ಮೂಲಕ ಅಳುತ್ತಾ ಹೇಳಿದ್ದಾರೆ.

ಸರ್ಜರಿ ಆದ ತಕ್ಷಣ ಆಸ್ಪತ್ರೆಗೆ ಏಜೆನ್ಸಿಯಿಂದ ಕರೆ ಬಂದಿದೆ. ಇನ್ನೋರ್ವ ಯುವತಿ ಸರ್ಜರಿ ಮಾಡಿಸಿಕೊಳ್ಳುವರಿದ್ದಾರೆ. ಅವರಿಗೆ ಪಾಸಿಟಿವ್‌ ರೆಸ್ಪಾಂಡ್‌ ಮಾಡಿ. ಎರಡು ಲಕ್ಷ ಆಗುವುದು ಎಂದು ಹೇಳಿ ಮನವೊಲಿಕೆ ಮಾಡಿದ್ದಾರೆ. ಆದರೆ ಅದು ಒಂದು ಲಕ್ಷ ಪ್ಯಾಕೇಜ್‌. ಯಾವುದೇ ಸೈಡ್‌ ಎಫೆಕ್ಟ್‌ ಆಗುವುದಿಲ್ಲ ಎಂದು ಏಜೆನ್ಸಿಯವರು ಮನವೊಲಿಕೆ ಮಾಡಿದ್ದರು ಎಂದು ಆಕಾಂಕ್ಷಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು

Exit mobile version