Site icon Vistara News

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Actress Ramya

No One Is Above The Law: Actress Ramya On Actor Darshan Case

ಬೆಂಗಳೂರು: ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ (Actress Ramya) ಅವರು ನಟನ ವಿರುದ್ಧ ಆಕ್ರೋಶ ಮುಂದುವರಿಸಿದ್ದಾರೆ. ಈಗ ಮತ್ತೆ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ದರ್ಶನ್‌ಗೆ ಕ್ಲಾಸ್‌ ತೆಗೆದುಕೊಂಡಿರುವ ಅವರು, “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಹೇಳಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉದ್ದೇಶದಿಂದಾಗಿಯೇ ಬ್ಲಾಕ್‌ ಎಂಬ ಆಯ್ಕೆಯನ್ನು ನೀಡಲಾಗಿದೆ. ಅತಿರೇಕದ ಟ್ರೋಲ್‌ ಮಾಡಿದಾಗ ನೀವು ದೂರು ನೀಡಬಹುದು. ಅತಿ ಕೆಟ್ಟ ಭಾಷೆಯನ್ನು ಬಳಸಿ ನನ್ನ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಬೇರೆ ನಟರ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಟ್ರೋಲ್‌ ಮಾಡುವವರು ಬೇರೆಯವರ ಹೆಂಡತಿಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನೇ ಒಂದಷ್ಟು ಟ್ರೋಲಿಗರ ವಿರುದ್ಧ ಕೇಸ್‌ ದಾಖಲಿಸಿದ್ದೇನೆ. ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೀಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ಅವರ ಭವಿಷ್ಯದ ಮೇಲೆಯೇ ಏಕೆ ಕಲ್ಲು ಹಾಕೊಳ್ಳುತ್ತಿದ್ದಾರೆ ಎಂಬುದಾಗಿ ಅನಿಸಿದ್ದಿದೆ” ಎಂದು ರಮ್ಯಾ ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ.

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ

“ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ. ಹಾಗೆಯೇ, ಥ್ಯಾಂಕ್‌ಲೆಸ್‌ ಜಾಬ್‌ ಮಾಡುತ್ತಿರುವ ಪೊಲೀಸರ ಅವಿರತ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಹಾಗೆಯೇ, ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ, ದರ್ಶನ್‌, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಎಂಬ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿದ್ದಾರೆ.

ನಟ ದರ್ಶನ್​ಗೆ ಮರಣದಂಡನೆಯಾಗಲಿ ಎಂಬ ಆಶಯವನ್ನು ಇದಕ್ಕೂ ಮೊದಲು ರಮ್ಯಾ ವ್ಯಕ್ತಪಡಿಸಿದ್ದರು. ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ರಿಪೋಸ್ಟ್ ಮಾಡಿದ್ದರು. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರಿಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ ಅವರು, “ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Actor Darshan: ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು; ದರ್ಶನ್ ವಿರುದ್ಧ ನಟಿ ರಮ್ಯಾ ಮತ್ತೊಂದು ಟ್ವೀಟ್‌!

Exit mobile version