ಬೆಂಗಳೂರು, ಕರ್ನಾಟಕ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳಿಗೆ ಠಕ್ಕರ್ ಕೊಡುವ ರೀತಿಯಲ್ಲಿ ಬಿಜೆಪಿ ತನ್ನ ಪ್ರಜಾ ಪ್ರಣಾಳಿಕೆಯನ್ನು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಬಿಪಿಎಲ್ ಪಡಿತರದಾರರಿಗೆ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು, ಮಾಸಿಕ 5 ಕೆಜಿ ಸಿರಿಧಾನ್ಯ ನೀಡುವ ಭರವಸೆಯನ್ನು ನೀಡಲಾಗಿದೆ. ಇದರ ಜತೆಗೆ, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ(NRC) ಜಾರಿ ಮಾಡುವ ಬಗ್ಗೆಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈಗಾಗಲೇ ನಮ್ಮ ಕ್ಲಿನಿಕ್ಗಳನ್ನು ಸ್ಥಾಪಿಸಿದ್ದರೂ, ಮತ್ತೆ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ(Karnataka Election BJP Manifesto).
ಬಿಜೆಪಿಯ ಪ್ರಣಾಳಿಕೆ ಬಿಡುಗಡೆ
ಬಿಜೆಪಿಯ ಬಿಡುಗಡೆ ಮಾಡಿರುವ ಪ್ರಜಾ ಪ್ರಣಾಳಿಕೆಯ ಹೈಲೆಟ್ಸ್ ಇಲ್ಲಿದೆ…
- ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ್ ಚತುರ್ಥಿ, ದೀಪಾವಳಿಗೆ ತಲಾ ಒಂದರಂತೆ 3 ಸಿಲಿಂಡರ್ ಉಚಿತವಾಗಿ ನೀಡಲಾಗುವುದು.
- ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ
- ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು. ಪ್ರತಿ ತಿಂಗಳು 5 ಕೆ ಜಿ ಸಿರಿಧಾನ್ಯ ವಿತರಣೆ
- ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
- 10 ಲಕ್ಷ ವಸತಿ ನಿವೇಶನ ಹಂಚಿಕೆ, ಪ್ರತಿ ವರ್ಷ 2 ಲಕ್ಷ ಮನೆ ನಿರ್ಮಾಣ
- ಒನಕೆ ಒಬವ್ವ ಸಾಮಾಜಿಕ ನ್ಯಾಯನಿಧಿ ಎಸ್ಸಿ, ಎಸ್ಟಿ ಜನಾಂಗದ ಮಹಿಳೆಯರಿಗೆ 5 ವರ್ಷ ಅವಧಿಗೆ ಸ್ಥಿರ ಠೇಣಿಗೆ 10 ಸಾವಿರ ತಾಳೆಯಾಗುವ ಠೇವಣಿ
- ಐಎಎಸ್/ಕೆಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ತರಬೇತಿಗಾಗಿ ಪ್ರೋತ್ಸಾಹವನ್ನು ನೀಡಲಾಗುವುದು.
- ನಮ್ಮ ಕ್ಲಿನ್ ಸ್ಥಾಪನೆ. ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಸೌಲಭ್ಯ
- ಪ್ರತಿ ಜಿಲ್ಲೆಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಮಾದರಿಯಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ
- ಮಿಷನ್ ಒಡೆಯರ್ಗಾಗಿ 3 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ. 15 ನದಿಗಳು ಮತ್ತು 500 ಕೆರೆಗಳ ಹೂಳು ತೆಗೆಯಲಾಗುವುದು.
- ಕನ್ನಡ ಚಿತ್ರೋದ್ಯಮಕ್ಕೆ ಉದ್ಯಮ ಸ್ಥಾನಮಾನ. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪುನೀತ್ ರಾಜಕುಮಾರ್ ಫಿಲ್ಮ್ ಸಿಟಿ ನಿರ್ಮಾಣ.
- ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ.
- ಬೆಂಗಳೂರು ಹೊರ ವಲಯದಲ್ಲಿ ಇವಿ ಸಿಟಿ ಅಭಿವೃದ್ಧಿ. ಫಾರ್ಮಾಲೂ ಇ ಸರ್ಕೂಟ್ ಅಭಿವೃದ್ಧಿ. ನೋಂದಣಿ ಶುಲ್ಕ ಮ್ತತು ರಸ್ತೆ ತೆರಿಗೆ ವಿನಾಯ್ತಿ. ಮೊದಲ ಸಾವಿರ ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ. ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಸ್ಟೇಷನ್ಗಳ ಸ್ಥಾಪನೆ. ಬಿಎಂಟಿಸಿ ಬಸ್ಗಳನ್ನು ಇವಿ ಬಸ್ಗಳನ್ನಾಗಿ ಪರಿವರ್ತಿಸುವುದು.
- ಕರ್ನಾಟಕದ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಬದ್ಧ
- ಕರ್ನಾಟಕದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ(NRC) ಕೈಗೊಳ್ಳಲಾಗುುದು.
- ಕರ್ನಾಟಕ-ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆ ದಳ(ಕೆ-ಸ್ವಿಫ್ಟ್) ರಚನೆ
- ವಿಧವಾ ಮಾಸಿಕ ವೇತನ 800ನಿಂದ 2 ಸಾವಿರ ರೂ.ವರೆಗೆ ಏರಿಕೆ.
ಬಿಜೆಪಿಯ ಪ್ರಜಾ ಪ್ರಣಾಳಿಕೆ ಇಲ್ಲಿದೆ