Site icon Vistara News

Accidents in Bangalore | ಅಪಘಾತಗಳ ನಗರವಾಗ್ತಿದೆ ಸಿಲಿಕಾನ್‌ ಸಿಟಿ, 4 ತಿಂಗಳಲ್ಲಿ 231 ಜನರ ಸಾವು

ಆ್ಯಕ್ಸಿಡೆಂಟ್

ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನೇ ದಿನೆ ಆ್ಯಕ್ಸಿಡೆಂಟ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಎಪ್ರಿಲ್‌ ತಿಂಗಳಲ್ಲಿ ನಡೆದ ಒಟ್ಟು ಆ್ಯಕ್ಸಿಡೆಂಟ್ ಸಂಖ್ಯೆ 1212. ಗುಂಡಿ ತುಂಬಿದ ರಸ್ತೆಗಳು, ಅಜಾಗರೂಕ ಚಾಲನೆ ಸೇರಿದಂತೆ ಹತ್ತಾರು ಕಾರಣಗಳಿಗಾಗಿ ತಿಂಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಈ ಅವಧಿಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ  ಅಪಘಾತಗಳಲ್ಲಿ 231 ಜನ ಸಾವೀಗೀಡಾಗಿದ್ದಾರೆ. 1055 ಜನ ಅಪಘಾತದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಈಗಾಗಲೇ ಸಂಚಾರ ಪೂರ್ವ ವಿಭಾಗದಲ್ಲಿ ಹೆಚ್ಚು ಆ್ಯಕ್ಸಿಡೆಂಟ್‌ಗಳು ಆಗಿದ್ದು ಒಟ್ಟು 79 ಭೀಕರ ಅಪಘಾತಗಳಾಗಿವೆ. ಅದರಲ್ಲಿ 80 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ | ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ: ಶಾಲಾ ಬಸ್‌ ಗುದ್ದಿ ಬಾಲಕಿ ದುರ್ಮರಣ

ಸಂಚಾರ ಪಶ್ಚಿಮ ವಿಭಾಗದಲ್ಲಿ 95 ಭೀಕರ ಅಪಘಾತಗಳಲ್ಲಿ 97 ಮಂದಿ ಸಾವಿಗೀಡಾಗಿದ್ದಾರೆ. ಸಂಚಾರ ಉತ್ತರ ವಿಭಾಗದಲ್ಲಿ 50 ಅಪಘಾತಗಳಲ್ಲಿ 54 ಮಂದಿ ಸಾವನಪ್ಪಿದ್ದಾರೆ.

ಗುರುವಾರವಷ್ಟೇ ಸಿಲಿಕಾನ್‌ ಸಿಟಿಯಲ್ಲಿ ಹಾರೋಹಳ್ಳಿಯ ನಿವಾಸಿಯಾಗಿರುವ 16 ವರ್ಷದ ಕೀರ್ತನ ಶಾಲಾ ಬಸ್ ಹರಿದು ಸಾವನಪ್ಪಿದ್ದಳು. ಇನ್ನೊಂದೆಡೆ ಟಿಪ್ಪರ್‌ ರಿವರ್ಸ್‌ ತೆಗೆಯುವಾಗ ಡಿಕ್ಕಿಯಾಗಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದ. ಹೀಗೆ ಬೆಂಗಳೂರಿನಲ್ಲಿ ದಿನೇ ದಿನೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸರಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ.

ಇದನ್ನೂ ಓದಿ | ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಇಬ್ಬರ ಸಾವು

Exit mobile version