Site icon Vistara News

Operation python : ಮಲಬದ್ಧತೆಯಿಂದ ನರಳುತ್ತಿದ್ದ ಹೆಬ್ಬಾವನ್ನು ಆಪರೇಷನ್‌ ಮಾಡಿ ರಕ್ಷಿಸಿದ ಲೇಡಿ ಡಾಕ್ಟರ್ಸ್‌!

Indian python rescued in Mangalore by lady doctors

ಮಂಗಳೂರು: ಮಲಬದ್ಧತೆ ಸಮಸ್ಯೆ (Constipation problem) ಬರೀ ಮನುಷ್ಯರಿಗೆ ಮಾತ್ರ ಬರುವುದಲ್ಲ! ಹಾವುಗಳಿಗೂ (Constipation problem to snakes too) ಈ ಸಮಸ್ಯೆ ಬರುತ್ತದೆ ಅಂತ ನಿಮಗೆ ಗೊತ್ತಾ? ಹೆಬ್ಬಾವೊಂದಕ್ಕೆ (Indian Python) ಈ ರೀತಿ ಮಲಬದ್ಧತೆ ಸಮಸ್ಯೆ ಎದುರಾಗಿತ್ತಂತೆ. ಕೊನೆಗೆ ಅದಕ್ಕೆ ಆಪರೇಷನ್‌ (Operation python) ಮಾಡಿ ಸಮಸ್ಯೆ ಪರಿಹಾರ ಮಾಡಲಾಯಿತಂತೆ!

ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಅದರ ಸಂಕಟ ನಿವಾರಣೆ ಮಾಡಿದ್ದು ಒಂದು ಲೇಡಿ ಡಾಕ್ಟರ್ಸ್‌ ಟೀಮ್‌! (Lady Doctors team)

ಕೆಲವು ದಿನಗಳ ಹಿಂದೆ ಮಂಗಳೂರಿನ ಕದ್ರಿಯಲ್ಲಿ (kadri in Mangalore) ಒಂದು ಹೆಬ್ಬಾವು ಪತ್ತೆಯಾಗಿತ್ತು. ಮನುಷ್ಯರು ಅತ್ತಿಂದಿತ್ತ ಹೋದರೂ ಸ್ವಲ್ಪವೂ ಚಲನೆ ಇಲ್ಲದೆ ಅದು ಬಿದ್ದುಕೊಂಡಿತ್ತು. ಅದನ್ನು ನೋಡಿದ ಯಾರೋ ಉರಗ ಪ್ರೇಮಿಗಳಿಗೆ ವಿಷಯ ತಿಳಿಸಿದ್ದರು

ಉರಗ ಪ್ರೇಮಿ ಧೀರಜ್‌ ಗಾಣಿಗ ಅವರು ಬಂದು ನೋಡಿದಾಗ ಹಾವು ಏನೋ ಸಮಸ್ಯೆಯಿಂದ ಬಳಲುತ್ತಿರುವುದು ಕಂಡಿತು. ದೊಡ್ಡ ದೇಹಿಯಾದರೂ, ಎಲ್ಲರನ್ನು ಹೆದರಿಸಬಲ್ಲ ಖದರು ಇದ್ದರೂ ಅಸಹಾಯಕವಾಗಿ ಅದು ಬಿದ್ದುಕೊಂಡಿತ್ತು.

ಉರಗ ಪ್ರೇಮಿ ಧೀರಜ್‌ ಗಾಣಿಗ ಈ ಹಾವನ್ನು ನೋಡಿದಾಗ ಅವರಿಗೆ ಇದಕ್ಕೇನೋ ಹೊಟ್ಟೆ ಸರಿಯಿಲ್ಲ ಎನ್ನುವುದು ಅರ್ಥವಾಯಿತು. ಆಗ ಅವರಿಗೆ ನೆನಪಾಗಿದ್ದು ಮಂಗಳೂರಿನಲ್ಲಿ ಪ್ರಾಣಿಗಳಿಗೆ ಏನೇ ಆರೋಗ್ಯ ಸಮಸ್ಯೆ ಎದುರಾದರೂ ರಕ್ಷಣೆಗೆ ಬರುವ ಲೇಡಿ ಡಾಕ್ಟರ್ಸ್‌ ಟೀಮ್‌.

ಹಾವಿಗೆ ಕಾಳಜಿಯ ಚಿಕಿತ್ಸೆ

ಕೂಡಲೇ ಈ ಹಾವನ್ನು ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ಅವರ ತಂಡ ತನ್ನ ವಶಕ್ಕೆ ಪಡೆಯಿತು.

ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ಟೀಮ್‌ ಹಾವಿನ ಸ್ಕ್ಯಾನ್‌ ನಡೆಸಿತು. ಆಗ ಹಾವಿನ ಹೊಟ್ಟೆಯಲ್ಲಿ ಮಲ ತುಂಬಿಕೊಂಡಿರುವುದು ಪತ್ತೆಯಾಯಿತು.

ಇವರ ಕೈಯಲ್ಲಿ ಹಾವು ನಿರಾಳ

ವಿಪರೀತ ಮಲ ತುಂಬಿಕೊಂಡು ಅದನ್ನು ಹೊರಹಾಕಲಾಗದೆ ಹೊಟ್ಟೆ ಉಬ್ಬರಿಸಿ ಅದು ಸಂಕಟದಲ್ಲಿತ್ತು. ಇದನ್ನು ಗಮನಿಸಿದ ಹುಡುಗಿಯರು ತಮ್ಮ ವೈದ್ಯಕೀಯ ಜಾಣ್ಮೆಯನ್ನು ಮೆರೆದರು. ಕೂಡಲೇ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಹಾವಿನ ಹೊಟ್ಟೆಯೊಳಗೆ ಕೈ ಹಾಕಿದರೂ ಅಸಹ್ಯವಿಲ್ಲ.

ಐವರೂ ವೈದ್ಯರು ಸೇರಿ ಅರಿವಳಿಕೆ ಕೊಟ್ಟು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೆಬ್ಬಾವಿನ ಹೊಟ್ಟೆಯಲ್ಲಿ ತುಂಬಿಕೊಂಡಿದ್ದ ಮಲವನ್ನು ಹೊರತೆಗೆದರು ಮತ್ತು ಹಾಗೇ ಹೊಟ್ಟೆಗೆ ಹೊಲಿಗೆ ಹಾಕಿದರು.

ಇದನ್ನೂ ಓದಿ: Snake belief : ನಾಗರಹಾವಿಗೆ ಡೀಸೆಲ್‌ ಎರಚಿದವನು ಮೈ ಉರಿಯಲ್ಲಿ ಹಾವಿನಂತೆ ಹೊರಳಾಡಿದ!; ಆಶ್ಚರ್ಯವಾದರೂ ನಿಜ!

ಒಂದೆರಡು ದಿನಗಳ ಆರೈಕೆ ಬಳಿಕ ಹಾವು ಚೇತರಿಸಿಕೊಂಡಿತು. ಬಳಿಕ ಹಾವನ್ನು ಅದರ ಆವಾಸ ಸ್ಥಾನಕ್ಕೆ ಬಿಟ್ಟು ಬಿಡಲಾಯಿತು. ಈ ಹೊತ್ತಿನಲ್ಲಿ ಹಾವು ಕೃತಜ್ಞತೆಯಿಂದ ಹೊರಳಿ ನೋಡಿರಬಹುದು ಅಲ್ವೇ?

ಅಂದ ಹಾಗೆ ಈ ಲೇಡಿ ಡಾಕ್ಟರ್ಸ್‌ ಟೀಮ್‌ ಈ ಹಿಂದೆಯೂ ಬ್ಯಾಟರಿ ನುಂಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿತ್ತು. ನಾಯಿಗಳು, ದನ ಕರುಗಳ ಸೇವೆ ಮಾಡಿದ್ದಕ್ಕೆ ಲೆಕ್ಕವೇ ಇಲ್ಲ. ಇವರೇ ಅಲ್ವೇ ದೇವತಾ ಮನುಷ್ಯರು?

Exit mobile version