ಮೈಸೂರು: ನಾನು ಸಾಯುವವರೆಗೂ ಆರ್‌ಎಸ್‌ಎಸ್ (RSS) ಅನ್ನು ವಿರೋಧ ಮಾಡುತ್ತೇನೆ. ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ ಎಂದು ನಾನು ಈ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಹಿಂದುತ್ವದ (Hindutva) ಹೆಸರಿನಲ್ಲಿ ಆರ್‌ಎಸ್‌ಎಸ್, ಬಿಜೆಪಿ ಮನಸ್ಮೃತಿಯನ್ನು ಜಾರಿಗೆ ತರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.
ತಿ.ನರಸೀಪುರದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನನ್ನು ಮನುಷ್ಯ ವಿರೋಧ ಮಾಡಬೇಕು ಎಂದು ಯಾವ ಧರ್ಮ ಹೇಳುತ್ತದೆ? ಬಿಜೆಪಿಯವರು ಏಕೆ ಮುಸ್ಲಿಂ, ಕ್ರೈಸ್ತರನ್ನು ವಿರೋಧ ಮಾಡುತ್ತಾರೆ? ನಾನು ಹಿಂದು ಧರ್ಮದವನು. ನಮ್ಮೂರ ದೇವರು ಸಿದ್ದರಾಮೇಶ್ವರ. ಆದರೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಅಂತಾನೆ. ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ. ಸೈದ್ಧಾಂತಿಕವಾಗಿ ನಾನು ಆರ್‌ಎಸ್‌ಎಸ್ ಅನ್ನು ವಿರೋಧ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Murder Case: ಸ್ನೇಹಿತನ ಕೊಲೆಗೆ ಟ್ರಿಪ್ ನೆಪ; ಬಲಗೈ ಬಂಟನಿಂದಲೇ ರೌಡಿಶೀಟರ್ ಹತ್ಯೆ
ನಾವೆಲ್ಲ ಸಂವಿಧಾನವನ್ನು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಗೌರವಿಸುತ್ತೇವೆ. ಒಬ್ಬ ವ್ಯಕ್ತಿ – ಒಂದು ಮತವನ್ನು ಅವರು ಜಾರಿ ಮಾಡಿದ್ದಾರೆ. ಆದರೆ, ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಮೂಲಕ ಆರ್‌ಎಸ್‌ಎಸ್ ರಾಜಕಾರಣ ಮಾಡುತ್ತಿದೆ: ಯತೀಂದ್ರ ಸಿದ್ದರಾಮಯ್ಯ
ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಅಂಗ. ಬಿಜೆಪಿ ಮೂಲಕ ಆರ್‌ಎಸ್‌ಎಸ್ ರಾಜಕಾರಣ ಮಾಡುತ್ತಿದೆ. ಆರ್‌ಎಸ್‌ಎಸ್ ಪರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಬಿಜೆಪಿ ಮನುವಾದದ ಪರ ಇರುವಂಥದ್ದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕೇವಲ ವೋಟಿಗಾಗಿ ಮಾತ್ರ ದಲಿತರ ಪರ ಎನ್ನುತ್ತಾರೆ. ಆದರೆ, ಬಿಜೆಪಿ ಯಾವತ್ತೂ ದಲಿತ ಪರ ನಿಲ್ಲಲ್ಲ. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ದೇಶದ ಅಭಿವೃದ್ಧಿ ಅಂದರೆ ರಸ್ತೆಗಳ ಅಭಿವೃದ್ಧಿ ಅಲ್ಲ.
ಸಂವಿಧಾನವನ್ನು ರಕ್ಷಣೆ ಮಾಡಿರುವುದೇ ಆಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: V. Somanna: ಅಶೋಕ್ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?
ಆದರೆ, ಬಿಜೆಪಿ ದಲಿತರ ವೋಟಿಗಾಗಿ ಮೀಸಲಾತಿ ಹೆಚ್ಚಳ ಮಾಡುವ ಮಾತನಾಡುತ್ತದೆ. ಬಿಜೆಪಿ ನಿಧಾನವಾಗಿ ಸಂವಿಧಾನದ ಮೂಲಕವೇ ಸಂವಿಧಾನದ ಶಕ್ತಿಯನ್ನು ಕುಂದಿಸುವ ಕೆಲಸವನ್ನು ಮಾಡುತ್ತಿದೆ. ಸಂವಿಧಾನ ರಕ್ಷಣೆಗಾಗಿ ನೀವೆಲ್ಲರೂ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕೋರಿದರು.