Site icon Vistara News

Ram Mandir: ರಾಮಮಂದಿರದ ಮೇಲೆ ಪಾಕಿಸ್ತಾನ ಧ್ವಜ; ಮುಸ್ಲಿಂ ಯುವಕನಿಂದ ಆಕ್ಷೇಪಾರ್ಹ ಪೋಸ್ಟ್

ramammandir

ಗದಗ: ಅಯೋಧ್ಯೆ ರಾಮಮಂದಿರದ (Ram Mandir) ಮೇಲೆ ಪಾಕಿಸ್ತಾನ ಧ್ವಜ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕನೊಬ್ಬ ಆಕ್ಷೇಪಾರ್ಹ ಪೋಸ್ಟ್‌ ಹಾಕಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಅಯೋಧ್ಯೆ ರಾಮಮಂದಿರ ಗೋಪುರದ‌‌ ಮೇಲೆ ಹಸಿರು ಧ್ವಜ ಹಾಕಿ ಯುವಕ ಪೋಸ್ಟ್‌ ಹಾಕಿದ್ದಾನೆ.

ತೌಜುದ್ದೀನ್ ದಫೇದಾರ್ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಯುವಕ. ಮುಸ್ಲಿಂ ಧರ್ಮದ‌ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬರಿ ಮಸೀದಿ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಹೀಗಾಗಿ ತಕ್ಷಣ ತೌಜುದ್ದೀನ್‌ನನ್ನು ಗಜೇಂದ್ರಗಡ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಕೋಮುಗಲಭೆ‌ ಸೃಷ್ಟಿಸಲು ಸಂಚು ಹೂಡಿದ ಯುವಕನ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಹಿಂದು ಸಂಘಟನೆಗಳು ಒತ್ತಾಯಿಸಿವೆ. ಭಜರಂಗದಳ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ‌ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ; ನಾಳೆ ಗೋವಾ ಕ್ಯಾಸಿನೋಗಳು ಬಂದ್!

Exit mobile version