Site icon Vistara News

ಮಂಡ್ಯದಲ್ಲಿ ಶುರುವಾಯ್ತು ಪೇಎಂಎಲ್ಎ, ಪೇ ಎಕ್ಸ್‌ ಎಂಎಲ್ಎ ಅಭಿಯಾನ

MANDYA PAY-MLA

ಮಂಡ್ಯ: ರಾಜ್ಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ಬೆನ್ನಲ್ಲೇ ಈಗ ಜಿಲ್ಲೆಯಲ್ಲಿ ಪೇಎಂಎಲ್ಎ, ಪೇ ಎಕ್ಸ್‌ ಎಂಎಲ್ಎ ಅಭಿಯಾನ ಆರಂಭವಾಗಿದೆ.

ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ‌ ಎನ್. ಚೆಲುವರಾಯಸ್ವಾಮಿ ವಿರುದ್ಧ ಪೇಟಿಎಂ ಮಾದರಿಯಲ್ಲಿ ಕ್ಯೂಆರ್‌ ಕೋಡ್‌ ಸೃಷ್ಟಿಸಿ ಪೇಎಂಎಲ್ಎ, ಪೇ ಎಕ್ಸ್‌ ಎಂಎಲ್ಎ ಪೋಸ್ಟರ್‌ ಅಭಿಯಾನವನ್ನು ಆರಂಭ ಮಾಡಲಾಗಿದೆ.

ಶಾಸಕ ಸುರೇಶ್ ಗೌಡ ವಿರುದ್ಧ ೪೦% ಕಮಿಷನ್ ಆರೋಪವನ್ನು ಮಾಡಿ ಕ್ಯೂಆರ್‌ ಕೋಡ್‌ ಸೃಷ್ಟಿಸಲಾಗಿದೆ. 40% ಅನ್ನು ಇಲ್ಲಿ ಸ್ವೀಕರಿಸಲಾಗುತ್ತದೆ ಎಂಬ ಅಡಿ ಬರಹವನ್ನೂ ನೀಡಿ ಪೋಸ್ಟರ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಎನ್‌.ಚೆಲುವರಾಯಸ್ವಾಮಿ ವಿರುದ್ಧವೂ ಪೇ ಎಕ್ಸ್‌ ಎಂಎಲ್ಎ ಪೋಸ್ಟರ್‌ ಸಿದ್ಧಪಡಿಸಲಾಗಿದೆ. ಒಂದು ಮತಕ್ಕೆ 2.5 ಕೋಟಿ ರೂ ಎಂದು ಬರೆಯಲಾಗಿದೆ. ಈಗ ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ ವಿರುದ್ದ ಕಾನೂನು ಕ್ರಮ ಖಚಿತ ಎಂದ ಸಿಎಂ ಬೊಮ್ಮಾಯಿ

Exit mobile version