Site icon Vistara News

PFIಗೆ CCB ಶಾಕ್‌ | ಕೆ.ಜಿ. ಹಳ್ಳಿ ಪ್ರಕರಣದ 15ನೇ ಆರೋಪಿ ದಿಲ್ಲಿಯಲ್ಲಿ ಸೆರೆ, ಇನ್ನೂ ನಾಲ್ವರಿಗಾಗಿ ಹುಡುಕಾಟ

nia raids

ಬೆಂಗಳೂರು: ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪಿಎಫ್‌ಐ ವಿರುದ್ಧ ದಾಖಲಾದ ಪ್ರಕರಣದಲ್ಲಿ ಪೊಲೀಸರು ೧೯ ಮಂದಿಯನ್ನು ಬಂಧಿಸಬೇಕಾಗಿತ್ತು. ಹೀಗಾಗಿ ಗುರುವಾರ ಮುಂಜಾನೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿತ್ತು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಕೊಪ್ಪಳ, ದಾವಣಗೆರೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಟ್ಟು ೧೪ ಮಂದಿಯನ್ನಷ್ಟೇ ಬಂಧಿಸಲು ಸಾಧ್ಯವಾಯಿತು. ಐವರು ತಲೆಮರೆಸಿಕೊಂಡಿದ್ದರು. ಈ ನಡುವೆ ಬಂಧಿತ ೧೪ ಮಂದಿಯನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ೧೧ ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಯಿತು.

ಇದರ ನಡುವೆಯೇ ತಲೆಮರೆಸಿಕೊಂಡಿರುವ ಐವರಿಗಾಗಿ ಹುಡುಕಾಟವೂ ನಡೆದಿದೆ. ಅವರಲ್ಲಿ ಒಬ್ಬನನ್ನು ಹೊಸದಿಲ್ಲಿಯಲ್ಲಿ ಬಂಧಿಸಲಾಗಿದೆ. ಹೀಗಾಗಿ ಈಗ ಹುಡುಕಾಟದ ಸಂಖ್ಯೆ ನಾಲ್ಕಕ್ಕೆ ಇಳಿದಿದೆ.

೧೧ ದಿನದ ಕಸ್ಟಡಿಗೆ ನೀಡಲಾದ ೧೪ ಆರೋಪಿಗಳು ಯಾರು?

ಬೆಂಗಳೂರು(೨)
೧. ನಾಸಿರ್‌ ಪಾಷಾ, ಪಿಲ್ಲಾನಾ ಗಾರ್ಡನ್‌, ಬೆಂಗಳೂರು
೨. ಮನ್ಸೂರ್‌ ಅಹಮದ್‌, ಎಚ್‌.ಬಿ.ಆರ್‌. ಲೇಔಟ್‌, ಬೆಂಗಳೂರು

ಕಲಬುರಗಿ ಜಿಲ್ಲೆ(೧)
೩. ಶೇಕ್‌ ಇಜಾಜ್‌ ಅಲಿ, ಮೆಹಬೂಬ್‌ ನಗರ, ಕಲಬುರಗಿ

ಮೈಸೂರು ಜಿಲ್ಲೆ(೧)
೪. ಮೊಹಮ್ಮದ್‌ ಖಲೀಮುಲ್ಲಾ, ಶಾಂತಿನಗರ, ಮೈಸೂರು

ದಕ್ಷಿಣ ಕನ್ನಡ ಜಿಲ್ಲೆ(೬)
೫. ಅಬ್ದುಲ್‌ ಖಾದರ್‌ ಪುತ್ತೂರು, ಸಾಮೆತ್ತಡ್ಕ, ಪುತ್ತೂರು, ದ.ಕನ್ನಡ
೬. ಮೊಹಮ್ಮದ್‌ ತಫ್ಸೀರ್‌, ಕರಿಂಗಾನ, ಬಂಟ್ವಾಳ ತಾಲೂಕು, ದ.ಕನ್ನಡ
೭. ಮೊಹಿಯುದ್ದೀನ್‌, ಹಳೆಯಂಗಡಿ, ಮಂಗಳೂರು, ದ.ಕನ್ನಡ
೮. ನವಾಜ್‌ ಕಾವೂರು, ಕಾವೂರು, ಮಂಗಳೂರು, ದ. ಕನ್ನಡ
೯. ಅಶ್ರಫ್‌, ಜೋಕಟ್ಟೆ, ಮಂಗಳೂರು
೧೦. ಆಯೂಬ್‌ ಕೆ. ಅಗ್ನಾಡಿ, ಗಾಂಧಿ ಪಾರ್ಕ್‌, ಉಪ್ಪಿನಂಗಡಿ, ದ.ಕನ್ನಡ

ಶಿವಮೊಗ್ಗ ಜಿಲ್ಲೆ(೧)
೧೧. ಶಾಹಿದ್‌ ಖಾನ್‌, ಲಷ್ಕರ್‌ ಮೊಹಲ್ಲಾ, ಶಿವಮೊಗ್ಗ

ದಾವಣಗೆರೆ ಜಿಲ್ಲೆ(೨)
೧೨. ಇಮಾನುದ್ದೀನ್‌, ಬಕ್ಕೇಶ್ವರ ಹೈಸ್ಕೂಲ್‌ ಸಮೀಪ, ದಾವಣಗೆರೆ

ಉತ್ತರ ಕನ್ನಡ ಜಿಲ್ಲೆ(೨)
೧೩. ಅಬ್ದುಲ್‌ ಅಜೀಜ್‌ ಅಬ್ದುಲ್‌, ಟಿಪ್ಪು ನಗರ, ಬನವಾಸಿ, ಶಿರಸಿ, ಉ.ಕನ್ನಡ

ಕೊಪ್ಪಳ ಜಿಲ್ಲೆ(೧)
೧೪. ಮೊಹಮ್ಮದ್‌ ಫಯಾಜ್‌, ಕ್ವಿಲಾ ಏರಿಯಾ, ಗಂಗಾವತಿ, ಕೊಪ್ಪಳ ಜಿಲ್ಲೆ

ದಿಲ್ಲಿಯಲ್ಲಿ ಪತ್ತೆಯಾದವರು, ನಾಪತ್ತೆಯಾದವರು
ಐದನೇ ಆರೋಪಿಯಾಗಿ ಗುರುತಿಸಲಾದ ಮೊಹಮ್ಮದ್‌ ಅಶ್ರಫ್‌ ಅಂಕಜಾಲ್‌ (ಕಂಕನಾಡಿ, ಮಂಗಳೂರು) ಎಂಬಾತನನ್ನು ದಿಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ ದಿಲ್ಲಿಯಲ್ಲಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ಅಲ್ಲಿಗೆ ದಾಳಿ ಮಾಡಿ ಸೆರೆಹಿಡಿಯಲಾಯಿತು.

ಇನ್ನೂ ನಾಪತ್ತೆಯಾಗಿರುವವರು
೧. ಮೊಹಮ್ಮದ್‌ ಷರೀಫ್‌, ಪೆರ್ಮುದೆ, ಬಜಪೆ, ಮಂಗಳೂರು
೨. ಅಬ್ದುಲ್‌ ರಜಾಕ್‌ ಕೆಮ್ಮಾರ, ಅತೂರು, ಪುತ್ತೂರು, ದ.ಕನ್ನಡ
೩. ತಾಹಿರ್‌, ಗೌಡ್ರು ಸ್ಟ್ರೀಟ್‌, ಹರಿಹರ, ದಾವಣಗೆರೆ
೪. ಮೌಸಿನ್‌ ಅಬ್ದುಲ್‌ ಶುಕೂರ್‌, ಟಿಪ್ಪು ನಗರ, ಬನವಾಸಿ, ಶಿರಸಿ, ಉ.ಕನ್ನಡ

ಇದನ್ನೂ ಓದಿ| PFIಗೆ CCB ಶಾಕ್‌ | ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಬಂಧಿತರಾದ 14 ಪಿಎಫ್‌ಐ ಮುಖಂಡರಿಗೆ 11 ದಿನ ಪೊಲೀಸ್‌ ಕಸ್ಟಡಿ

Exit mobile version