Site icon Vistara News

Physical abuse : 7 ವರ್ಷದ ಮಗಳ ಜತೆ ಅಶ್ಲೀಲವಾಗಿ ವರ್ತಿಸುವ ವಿಕೃತ ಅಪ್ಪ; ಸರಿಯಾಗಿ ತನಿಖೆ ನಡೆಸಲು ಹೈ ಆದೇಶ

Sexual abuse by father

high court Lambasts Investigation office in sexual abuse case by a father

ಬೆಂಗಳೂರು: ತನ್ನ ಏಳು ವರ್ಷದ ಮಗಳ ಜತೆಗೇ ಅಪ್ಪನೊಬ್ಬ ವಿಕೃತವಾಗಿ ವರ್ತಿಸುವ (Perverted father), ಅಶ್ಲೀಲವಾಗಿ ನಡೆದುಕೊಳ್ಳುವ (sexual harrassment) ಹೇಯ ಘಟನೆಯೊಂದರ ಬಗ್ಗೆ ಸರಿಯಾದ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್‌ ಆದೇಶ ನೀಡಿದೆ. ಈ ಘಟನೆ 2022ರಲ್ಲಿ ನಡೆದಿದ್ದು (Physical abuse), ಪೊಲೀಸರಿಗೆ ದೂರು ನೀಡಿ ತನಿಖೆ ಆರಂಭವಾಗಿದ್ದು, ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್‌ (Karnataka High court) ಗರಂ ಆಗಿದೆ. ಹೀಗಾಗಿ ತನಿಖಾಧಿಕಾರಿಯನ್ನೇ (Investigating officer) ಬದಲಿಸುವಂತೆ ಪೊಲೀಸ್‌ ಆಯುಕ್ತರಿಗೆ (Police Commssioner) ಸೂಚನೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಈ ನಿರ್ದೇಶನವನ್ನು ನೀಡಿದೆ.

ಏನಿದು ವಿಕೃತ ಅಪ್ಪನ ಅಶ್ಲೀಲ ನಡವಳಿಕೆ?

ಅವರಿಬ್ಬರಿಗೆ ಮದುವೆಯಾಗಿದ್ದು 2014ರಲ್ಲಿ. ಅವರ ಸಂಬಂಧದಲ್ಲಿ ಒಂದು ಹೆಣ್ಣು ಮಗುವಿದೆ. ಈಗ ಅದಕ್ಕೆ ಎಂಟು ವರ್ಷ. ಆ ಮಗುವಿನ ಜತೆ ಅಪ್ಪ ವಿಕೃತವಾಗಿ, ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಸ್ವತಃ ಮಗುವಿನ ತಾಯಿ 2022ರ ಆಗಸ್ಟ್‌ 24ರಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗಂಡನ ವಿರುದ್ಧ ಪತ್ನಿ ಮಾಡಿದ ಆರೋಪಗಳೇನು?

1. ನನ್ನ ಗಂಡ ನನ್ನ ಮಗಳನ್ನು ನಗ್ನಗೊಳಿಸಿ, ಆಕೆಯೊಂದಿಗೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದರು.
2. ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿದ್ದರು.
3. ಮಗುವಿನ ಸಮ್ಮುಖದಲ್ಲೇ ಲೈಂಗಿಕ ಕ್ರಿಯೆ ನಡೆಸಲು ನನ್ನನ್ನು ಒತ್ತಾಯಿಸುತ್ತಿದ್ದರು.
4. ಮಗು ಬಳಸುತ್ತಿದ್ದ ಐಪ್ಯಾಡ್‌ನಲ್ಲಿ ಮಕ್ಕಳ ಆಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು.

ಈ ರೀತಿ ವಿಕೃತವಾಗಿ ವರ್ತಿಸುತ್ತಿರುವ ಗಂಡನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪತ್ನಿ ಮನವಿ ಮಾಡಿದ್ದರು. ಅವರ ದೂರನ್ನು ಆಧರಿಸಿ ಪತಿ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆವತ್ತು ನಿಖೆ ನಡೆಸಿದ್ದ ಕೋರಮಂಗಲ ಪೊಲೀಸರು 2022ರ ಅಕ್ಟೋಬರ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಆದರೆ, ಈ ತನಿಖೆಯಲ್ಲಿ ಹಲವಾರು ಲೋಪದೋಷಗಳಿವೆ, ಇನ್ನಷ್ಟು ತನಿಖೆ ನಡೆಸಬೇಕಾಗಿದೆ ಎಂದು ಮಹಿಳೆ ವಿಚಾರಣಾಧೀನ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಆದರೆ, ಕೋರ್ಟ್‌ ಈ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್‌ ತನಿಖಾಧಿಕಾರಿಯನ್ನೇ ಬದಲಿಸಿ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿದೆ.

ಹೈಕೋರ್ಟ್‌ ಕಂಡುಕೊಂಡ ದೋಷಗಳೇನು?

  1. ಕೋರಮಂಗಲ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿನ ಹಲವು ದೋಷಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಗಮನಿಸಿದೆ.
  2. ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿಚಾರಣೆಗೆ ಅಗತ್ಯವಿರುವ ಹಲವು ದಾಖಲೆಗಳನ್ನು ಸಂಗ್ರಹಿಸಿಲ್ಲ.
  3. ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ಸಂಗ್ರಹಿಸಲು ನಿರಾಕರಿಸಿದ್ದು, ತನಿಖೆ ಕಳಪೆಯಾಗಿದೆ.
  4. ಸಂತ್ರಸ್ತೆಯ ಹೇಳಿಕೆಯಲ್ಲಿ ಆರೋಪಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಅಂಶವನ್ನು ಆರೋಪ ಪಟ್ಟಿಯಲ್ಲಿ ಸೇರಿಸಬೇಕಾಗಿತ್ತು. ಆದರೆ, ತನಿಖಾಧಿಕಾರಿಗಳು ಈ ಅಂಶವನ್ನು ಆರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದು, ಉದ್ದೇಶಪೂರ್ವಕವಾಗಿ ಆರೋಪಿಯ ವಿರುದ್ಧ ಆರೋಪ ಮಾಡಲು ನಿರ್ಲಕ್ಷಿಸಿದ್ದಾರೆ.
  5. ವೈದ್ಯರ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ.
  6. ಸಂತ್ರಸ್ತೆಯ ತಾಯಿಯನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಲು ತನಿಖಾಧಿಕಾರಿ ವಿಫಲರಾಗಿದ್ದಾರೆ.
  7. ಅಶ್ಲೀಲ ವಿಡಿಯೋಗಳುಳ್ಳ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್ ವಶಕ್ಕೆ ಪಡೆದಿಲ್ಲ ಹಾಗೂ ಅವುಗಳ ಸಂಬಂಧ ವಿಚಾರಣೆ ನಡೆಸಿಲ್ಲ.
  8. ಐಪ್ಯಾಡ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದ್ದು, ವರದಿ ಈವರೆಗೂ ಲಭ್ಯವಾಗಿಲ್ಲ. ಹೀಗಿದ್ದರೂ, ಅಂತಿಮ ಆರೋಪ ಪಟ್ಟಿ ಸಲ್ಲಿಸಲಾಗಿದೆ.
  9. ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಬಳಕೆಯ ಸ್ಥಳವನ್ನೂ ಉಲ್ಲೇಖಿಸಿಲ್ಲ.
  10. ಆರೋಪಿಯ ವಿಕೃತ ವರ್ತನೆಯ ಬಗ್ಗೆ ಸಂಬಂಧಿಕರ ಹೇಳಿಕೆ ಪಡೆದಿಲ್ಲ.
  11. ಮಗು ಅನುಭವಿಸಿರುವ ಮಾನಸಿಕ ಹಿಂಸೆಗೆ ಸಂಬಂಧಿಸಿದಂತೆ ಮನೋ ವಿಜ್ಞಾನಿಗಳ ಹೇಳಿಕೆಯನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಿಲ್ಲ. ಈ ಎಲ್ಲ ಕಾರಣಗಳಿಂದ ಆರೋಪಪಟ್ಟಿಯು ದೋಷಪೂರಿತವಾಗಿದೆ.

10 ವಾರಗಳ ಒಳಗೆ ಹೊಸ ಚಾರ್ಜ್‌ಶೀಟ್‌ ಸಲ್ಲಿಸಲು ಸೂಚನೆ

ಪ್ರಕರಣದ ತನಿಖೆ ಮತ್ತು ಚಾರ್ಜ್‌ಶೀಟ್‌ನಲ್ಲಿ ಹಲವಾರು ದೋಷಗಳಿವೆ. ಹೀಗಾಗಿ ಈಗಾಗಲೇ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಯಾರಿಯನ್ನು ಹೊರತುಪಡಿಸಿ ಬೇರೆ ತನಿಖಾಧಿಕಾರಿಯನ್ನು ಪೊಲೀಸ್ ಆಯುಕ್ತರು ನೇಮಕ ಮಾಡಬೇಕು. ಆ ತನಿಖಾಧಿಕಾರಿ 10 ವಾರಗಳ ಒಳಗೆ ಹೆಚ್ಚಿನ ತನಿಖೆ ನಡೆಸಿ, ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಸಲ್ಲಿಸಬೇಕು. ಅಲ್ಲಿಯವರೆಗೆ ಈ ಮೊದಲು ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ಕುರಿತು ವಿಚಾರಣಾಧೀನ ನ್ಯಾಯಾಲಯ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್‌ ಸೂಚಿಸಿದೆ.

ಇದನ್ನೂ ಓದಿ: High court : ಹೆಂಡ್ತೀನ ನೋಡ್ಕೊಳ್ಳೋ ಹುಡುಗ್ರಿಗೆ ತಾಯಿನ ಸಲಹಲು ಏನು ಕಷ್ಟ?; ಗಂಡು ಮಕ್ಕಳಿಗೆ ಹೈ ಕ್ಲಾಸ್‌

Exit mobile version