Site icon Vistara News

Physical Abuse: ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Physical Abuse

ಚಿಕ್ಕಬಳ್ಳಾಪುರ: ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ (Physical Abuse) ಬೆನ್ನಲ್ಲೇ ಅಂತಹುದೇ ಹೀನ ಕೃತ್ಯವೊಂದು ಜಿಲ್ಲೆಯಲ್ಲಿ ನಡೆದಿದೆ. ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ರೋಗಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

ಇರ್ಫಾನ್ (24) ಅತ್ಯಾಚಾರ ಎಸಗಿದ ಆರೋಪಿ. ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಬಳಿ ವೃದ್ಧೆ ಇದ್ದಾಗ, ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿಯನ್ನು ಚಿಂತಾಮಣಿಯ ಹೈದರಾಲಿ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಅಸ್ವಸ್ಥ ವೃದ್ಧೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಕುಮಾರ್ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | Kolkata Doctor Murder Case: ಕೋಲ್ಕತ್ತಾ ವೈದ್ಯೆ ಅತ್ಯಾಚಾರ; ಮತ್ತೆ ನೆನಪಿಗೆ ಬಂದಳು ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್

ʼಗಟ್ಟಿಮೇಳ ನಿಲ್ಸಿʼ ಗಂಡನನ್ನು ತರಾಟೆಗೆ ತೆಗೆದುಕೊಂಡ ಮೊದಲ ಹೆಂಡತಿ, ಮದುವೆ ಮನೆಯಲ್ಲಿ ಗಲಾಟೆ

ಚಿಕ್ಕಬಳ್ಳಾಪುರ: ಗಂಡ (Husband) ಇನ್ನೊಂದು ಮದುವೆ (Marriage) ಆಗುತ್ತಿರುವ ಸಂದರ್ಭದಲ್ಲಿ ಮೊದಲನೇ ಹೆಂಡತಿ (First Wife) ಹಾಗೂ ಆಕೆಯ ಅಕ್ಕ ಮದುವೆ ಮನೆಗೆ ನುಗ್ಗಿ ಗಲಾಟೆ ಎಬ್ಬಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದೆ. ವರ ಮೋಸ (fraud Case) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ನಿವಾಸಿ ರಶ್ಮಿ 2018ರಲ್ಲಿ ವಿವಾಹವಾಗಿದ್ದರು. ವಿಚ್ಛೇದದ ಪಡೆದೇ ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾನೆ. ಈ ಹಂತದಲ್ಲಿ ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಸಂಬಂಧಿಕರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

Exit mobile version