ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮೌಲ್ವಿ ಸೇರಿ ಇಬ್ಬರ ಬಂಧನವಾಗಿದೆ. ನಗರದಲ್ಲಿ ಮೇ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕುರಾನ್ ಪಠಿಸಲು ಹೋಗುತ್ತಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಮೌಲ್ವಿ ಮತ್ತು ಬಾಲಕಿಯ ಸಹೋದರನನ್ನು ಬಂಧಿಸಲಾಗಿದೆ.
ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿ ಅಣ್ಣ ಬಂಧಿತ ಆರೋಪಿಗಳು. ಕಳೆದ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಬಾಲಕಿ ಹೋಗುತ್ತಿದ್ದಳು. ಮೊದಲು ಬಾಲಕಿಗೆ ಗಾಳಿ ಸೋಕಿದೆ ಪೂಜೆ ಮಾಡಬೇಕು ಎಂದು ಹಜರತ್ ಮೌಲ್ವಿ ಹೇಳಿದ್ದ. ನಂತರ ಮಸೀದಿಯಲ್ಲಿ ಪೂಜೆ ಬೇಡ ಅಂತ ಬಾಲಕಿಯ ಮನೆಯಲ್ಲೇ ಪೂಜೆ ನಡೆಸಲು ತಿಳಿಸಿದ್ದ. ಬಾಲಕಿಗೆ ದೆವ್ವ ಮೆಟ್ಟಿದೆ, ದೈಹಿಕ ಸುಖ ಕೊಟ್ರೆ ದೂರವಾಗುತ್ತೆ ಎಂದು ನಂಬಿಸಿ ಬಾಲಕಿ ಸಹೋದರನಿಗೂ ಲೈಂಗಿಕ ದೌರ್ಜನ್ಯ ಮಾಡುವಂತೆ ಮೌಲ್ವಿ ಪ್ರೇರಣೆ ನೀಡಿದ್ದಾನೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಫ್‌ಐಆರ್ ದಾಖಲು
ಈ ಬಗ್ಗೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಬಾಲಕಿ ಮೇಲೆ ಮೌಲ್ವಿಯಿಂದ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಕುರಿತು ಆಸ್ಪತ್ರೆಯಿಂದ ಮಹಿಳಾ ಠಾಣೆಗೆ ಮಾಹಿತಿ ಸಿಕ್ಕಿದೆ. ಮಹಿಳಾ ಠಾಣೆ ಪೊಲೀಸರಿಂದ ಎಫ್ಐಆರ್ ದಾಖಲಾಗಿದೆ.
ಪಾಠ ಹೇಳಲು ಬರುತ್ತಿದ್ದ ಮೌಲ್ವಿ ಪೂಜೆ ನೆಪಪೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಗೆ ಆರೋಗ್ಯ ಸಮಸ್ಯೆ ಇದೆ ಅಂತ ನೆಪ ಹೇಳಿ ಲೈಂಗಿಕ ಕಿರುಕುಳ ನೀಡಲಾಗಿದೆ. ಮೌಲ್ವಿಯಿಂದ ಬಾಲಕಿಯ ಸಹೋದರನ ಬ್ರೇನ್ ವಾಶ್ ಮಾಡಿದ್ದು, ಆತನಿಗೂ ಲೈಂಗಿಕ ದೌರ್ಜನ್ಯ ಎಸಗುವಂತೆ ಪ್ರೇರಣೆ ನೀಡಲಾಗಿದೆ.
ಇದನ್ನೂ ಓದಿ | Moral Policing: ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ
ಬಾಲಕಿಯ ತಾಯಿ ಈ ಕುರಿತು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರಿಂದ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ
ಶಿವಮೊಗ್ಗ: ಮುಸ್ಲಿಂ ಸಹೋದ್ಯೋಗಿಯನ್ನು (Muslim colleague) ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ (Hindu youth) ಮೇಲೆ ಹಲ್ಲೆ (Assault Case) ಮಾಡಿದ ಘಟನೆ ಶಿವಮೊಗ್ಗ (Shivamogga news) ನಗರದ ಆರ್‌ಎಂಎಲ್ ನಗರದ ಸಮೀಪ ನಡೆದಿದೆ. ಪ್ರಕರಣ (moral policing) ತುಸು ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ನಂದನ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಂದನ್, ಅನ್ಯ ಕೋಮಿನ ಸಹೋದ್ಯೋಗಿಯನ್ನು ಕೆಲಸದ ನಿಮಿತ್ತ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 20ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ನಂದನ್‌ನನ್ನು ತಡೆದು ಥಳಿಸಿದ್ದರು.
ನಮ್ಮ ಸಮುದಾಯದ ಹುಡುಗಿಯನ್ನು ಯಾಕೆ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಅಕ್ಷೇಪಿಸಿ ಯುವಕರ ಗುಂಪು ಥಳಿಸಿದೆ. ಹಲ್ಲೆಯಲ್ಲಿ ನಂದನ್ ಕಣ್ಣು, ಕಿವಿ ಮತ್ತು ಬಾಯಿಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ನಂದನ್ ಆರೋಗ್ಯ ವಿಚಾರಿಸಿದರು. ನಂದನ್‌ಗೆ ಧೈರ್ಯ ಹೇಳಿ, ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.
ಇದನ್ನೂ ಓದಿ: Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು
ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕಾಂಗ್ರೆಸ್ ಆಡಳಿತವನ್ನು ಆಕ್ಷೇಪಿಸಿದ್ದಾರೆ. “ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಕಾಂಗ್ರೆಸ್ ಅಭದ್ರತೆಯ ಸ್ಥಿತಿಗೆ ತಳ್ಳುತ್ತಿದೆ. ಸರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೋಲಿಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುವೆ” ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.