Site icon Vistara News

PM in Karnataka: ಬಿಜೆಪಿ ಅಭ್ಯರ್ಥಿಗಳದು ಮೊದಲ ಚುನಾವಣೆ, ಅವರದು ಕೊನೆ ಚುನಾವಣೆ; ಸಿದ್ದುಗೇ ಹೇಳಿದ್ರಾ ಮೋದಿ?

pm-in-karnataka: BJP is Joshful, Congress in tired, Says PM Narendra Modi

pm-in-karnataka: BJP is Joshful, Congress in tired, Says PM Narendra Modi

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ನಾವು ಈ ಬಾರಿ ಐವತ್ತಕ್ಕಿಂತಲೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್‌ ನೀಡಿದ್ದೇವೆ. ಹಾಗಾಗಿ ನಮ್ಮ ತಂಡ ಫುಲ್‌ ಜೋಶ್‌ನಲ್ಲಿದೆ. ಆದರೆ, ನಮ್ಮ ಪ್ರತಿಪಕ್ಷಗಳಲ್ಲಿ ಹೆಚ್ಚಿನವರು ಸೋತು ಸುಸ್ತಾಗಿದ್ದಾರೆ. ಅವರಿಗೆ ಇದೆಲ್ಲ ಕೊನೆಯ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗೇಲಿ ಮಾಡಿದ್ದಾರೆ.

ವಿಜಯುಪುರದ ಸೈನಿಕ ಶಾಲೆಯ ಆವರಣದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳಲ್ಲಿ ಹೆಚ್ಚಿನವರು ಇದು ನನ್ನ ಕೊನೆಯ ಚುನಾವಣೆ ಎನ್ನುವ ಭಾವನಾತ್ಮಕ ಅಂಶದ ಮೂಲಕ ಮತ ಕೇಳುತ್ತಿದ್ದಾರೆ. ನಮ್ಮದು ಜೋಶ್‌ ತುಂಬಿದ ಹುಡುಗರ ಚುನಾವಣೆ, ಅವರದು ಸೋತು ಸುಸ್ತಾದರ ಚುನಾವಣೆ ಎಂದರು. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಈ ಬಾರಿ ಕೊನೆಯ ಚುನಾವಣೆ ಎಂದು ಘೋಷಿಸಿ ಮತ ಕೇಳುತ್ತಿರುವುದನ್ನು ಮೋದಿ ಪ್ರಶ್ನೆ ಮಾಡಿದರಾ ಎಂಬ ಪ್ರಶ್ನೆ ಎದುರಾಗಿದೆ.

ಬಿಜೆಪಿ ಬಳಿ ರಾಜ್ಯವನ್ನು ಮುಂದೇನು ಮಾಡಬೇಕು ಎನ್ನುವ ರೋಡ್‌ ಮ್ಯಾಪ್‌ ಇದೆ. ಆದರೆ, ಪ್ರತಿಪಕ್ಷಗಳ ಕೈಯಲ್ಲಿ ಯಾವ ಪ್ಲ್ಯಾನ್‌ ಕೂಡಾ ಇಲ್ಲ. ಅವರೆಲ್ಲ ಬಸವಳಿದಿದ್ದಾರೆ, ಬಿಜೆಪಿಯಲ್ಲಿ ಮಾತ್ರ ಜೋಶ್‌ ತುಂಬಿದೆ ಎಂದು ಹೇಳಿದರು ನರೇಂದ್ರ ಮೋದಿ.

ನಮ್ಮ ನಿರ್ಧಾರಗಳೆಲ್ಲವೂ ಬಸವೇಶ್ವರರದಿಂದ ಪ್ರೇರಿತ ಎಂದ ಬೊಮ್ಮಾಯಿ

ಭಗವಾನ್‌ ಬಸವೇಶ್ವರರು ಕಾಯಕ ಮತ್ತು ಸೇವೆಯ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಅವರು ಕಲಿಸಿಕೊಟ್ಟಿದ್ದನ್ನು ಪಾಲಿಸಿದ್ದೇವೆ. ಸಬ್‌ ಕಾ ಸಾಥ್‌ ಮತ್ತು ಸಬ್‌ ಕಾ ವಿಕಾಸ್‌ ಕೂಡಾ ಬಸವಣ್ಣನ ಪ್ರಭಾವದಿಂದಲೇ ಹುಟ್ಟಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಡವರು, ದಲಿತರು, ವಂಚಿತರು, ಮಹಿಳಾ, ಆದಿವಾಸಿಗಳು, ಹಿಂದುಳಿದವರಿಗೆ ಬಿಜೆಪಿ ಸರಕಾರ ಪ್ರಾಧಾನ್ಯತೆ ನೀಡಿದೆ. ವಂಚಿತ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಶಕ್ತಿ ನೀಡಿದೆ. ಅನ್ನ, ಆಶ್ರಯ, ಅಕ್ಷರಗಳಿಗೆ ಹೆಚ್ಚು ಒತ್ತು ನೀಡಿದೆ. ಇದುವೇ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಅಂದರು ನರೇಂದ್ರ ಮೋದಿ.

ಬಂಜಾರಾ, ಲಂಬಾಣಿಗಳ ಪರ ನಿಂತ ನರೇಂದ್ರ ಮೋದಿ

ರಾಜ್ಯದಲ್ಲಿ ಹೊಸ ಮೀಸಲಾತಿ ನೀತಿ ಬಂದಿದ್ದರಿಂದ ಸಿಟ್ಟಿಗೆದ್ದಿರುವ ಬಂಜಾರಾ ಸಮುದಾಯವನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಮೋದಿ ನಡೆಸಿದರು.

ʻʻಕೆಲವು ದಿನಗಳ ಹಿಂದೆ ಕಲಬುರಗಿಗೆ ಬಂದಿದ್ದೆ. ಬಂಜಾರಾ ಜನರಿಗೆ ಹೊಸ ಜೀವನ ನೀಡುವ ಭಾಗ್ಯ ಸಿಕ್ಕಿತು. ಅವರಿಗೆ ಹಕ್ಕು ಪತ್ರ ನೀಡುವ ಮೂಲಕ ಅವರಿಗೆ ಆತ್ಮವಿಶ್ವಾಸ ನೀಡಿದ್ದೆ. ಅವರ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುವುದಿಲ್ಲ ಎಂಬ ಧೈರ್ಯ ಅವರಿಗೆ ಬಂದಿದೆ. ಕಾಂಗ್ರೆಸ್‌ ಅವಧಿಯಲ್ಲಿ ಲಂಬಾಣಿ, ಬಂಜಾರಾ ಸಮುದಾಯಗಳಿಗೆ ಯಾವತ್ತಾದರೂ ಸಹಾಯ ಮಾಡಿದೆಯಾ?ʼʼ ಎಂದು ನರೇಂದ್ರ ಮೋದಿ ಕೇಳಿದರು.

ʻʻಕಾಂಗ್ರೆಸ್‌ನವರು ಬಸವಣ್ಣನ ಯಾವುದೇ ತತ್ವ ಪಾಲನೆ ಮಾಡಲಿಲ್ಲ. ಅಂಬೇಡ್ಕರ್‌ ಅವರನ್ನು ವಿರೋಧ ಮಾಡುತ್ತಲೇ ಬಂತು. ದಲಿತರನ್ನು ಆಧರಿಸಲಿಲ್ಲʼʼ ಎಂದು ಹೇಳಿದ ಮೋದಿ ಅವರು, ʻʻನನಗೆ ಭಗವಾನ್‌ ಬಸವೇಶ್ವರರ ಸಂದೇಶವನ್ನು ಜಗತ್ತಿಗೆ ಸಾರಲು ಅವಕಾಶ ಸಿಕ್ಕಿದ್ದು ಸೌಭಾಗ್ಯ. ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ ಮಾಡಲು ನನಗೆ ಅವಕಾಶ ಸಿಕ್ಕಿತುʼʼ ಎಂದು ಹೆಮ್ಮೆಯಿಂದ ಹೇಳಿದರು.

ಇದನ್ನೂ ಓದಿ : Modi in Karnataka : ಕಾಂಗ್ರೆಸ್‌ ಕಾಲದಲ್ಲಿ ಇದ್ದಿದ್ದು 85% ಸರ್ಕಾರ; 40% ಕಮಿಷನ್‌ಗೆ ಮೋದಿ ತಿರುಗೇಟು

Exit mobile version