ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಸೇರಿದಂತೆ ಹಲವು ರಾಜ್ಯಗಳ ರಾಜ್ಯೋದಯದ ಸಂದರ್ಭದಲ್ಲಿ ಶುಭ ಹಾರೈಕೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ʼʼಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿʼʼ ಎಂದು ಅವರು ಕನ್ನಡದಲ್ಲಿಯೇ ಹಾರೈಸಿದ್ದಾರೆ.
ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು…
— Narendra Modi (@narendramodi) November 1, 2023
ಕರ್ನಾಟಕ, ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ಹರಿಯಾಣದ ಜನರಿಗೆ ಅವುಗಳ ರಚನೆಯ ದಿನವಾದ ನವೆಂಬರ್ ಒಂದರಂದು ಅವರು ಶುಭಾಶಯಗಳನ್ನು ಕೋರಿದ್ದಾರೆ.
ರಾಜ್ಯ ಮರುಸಂಘಟನೆ ಕಾಯಿದೆ ಜಾರಿಯಾದ ನಂತರ ನವೆಂಬರ್ 1, 1956ರಂದು ಕರ್ನಾಟಕವನ್ನು ಸ್ಥಾಪಿಸಲಾಯಿತು. ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದೇ ರಾಜ್ಯವನ್ನು ರೂಪಿಸಿದಾಗ ಕರ್ನಾಟಕ ರಚನೆಯಾಯಿತು. ಮೂಲತಃ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿದ್ದ ಪ್ರದೇಶವನ್ನು ನವೆಂಬರ್ 1, 1973ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಕೇರಳ 1956ರಲ್ಲಿ ಅಸ್ತಿತ್ವಕ್ಕೆ ಬಂದವು. 1966ರಲ್ಲಿ ಹರಿಯಾಣ ರಚನೆಯಾಯಿತು. 2000ರಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢವನ್ನು ಪ್ರತ್ಯೇಕಿಸಲಾಯಿತು. ನವೆಂಬರ್ 1, 1956ರಂದು ತಿರುವಾಂಕೂರ್, ಕೊಚ್ಚಿನ್ ಮತ್ತು ಮಲಬಾರ್ ಅನ್ನು ಸಂಯೋಜಿಸಿ ಕೇರಳವನ್ನು ರಚಿಸಲಾಯಿತು. ಹೈದರಾಬಾದ್‌ನ ಎಲ್ಲಾ ತೆಲುಗು ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಆಂಧ್ರ ಪ್ರದೇಶವನ್ನು ರಚಿಸಲಾಯಿತು.
ಮಧ್ಯಪ್ರದೇಶ ರಾಜ್ಯವು ಹಿಂದಿನ ಕೇಂದ್ರ ಪ್ರಾಂತ್ಯಗಳಾದ ಸಿಪಿ ಮತ್ತು ಬೇರಾರ್, ಮಧ್ಯ ಭಾರತ್, ವಿಂಧ್ಯ ಪ್ರದೇಶ ಮತ್ತು ಭೋಪಾಲ್ ಅನ್ನು ವಿಲೀನಗೊಳಿಸುವ ಮೂಲಕ ರೂಪುಗೊಂಡಿತು. 1966ರಲ್ಲಿ, ಹರಿಯಾಣ ರಾಜ್ಯವನ್ನು ಪಂಜಾಬ್‌ನಿಂದ ಪ್ರತ್ಯೇಕಿಸಲಾಯಿತು.
ಇದನ್ನೂ ಓದಿ: Karnataka Rajyotsava : ಕರಾಳ ದಿನ ಆಚರಿಸಿ ಉದ್ಧಟತನ ಮೆರೆದ ಎಂಇಎಸ್; ಕೈಕಟ್ಟಿ ಕುಳಿತ ಜಿಲ್ಲಾಡಳಿತ