Site icon Vistara News

Pocso case : 7 ವರ್ಷದ ಬಾಲಕಿ ಮೇಲೆ ಆಟೋ ಚಾಲಕನ ದೌರ್ಜನ್ಯ; ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ

harrassment

ರಾಮನಗರ: ವಾಹನ ಚಾಲಕರ ಮೇಲಿನ ನಂಬಿಕೆಯಿಂದ ಪುಟ್ಟ ಪುಟ್ಟ ಮಕ್ಕಳನ್ನು ಅವರ ಜತೆ ಶಾಲೆಗೆ ಕಳುಹಿಸುತ್ತೇವೆ. ಬಹುತೇಕ ಜನರು ಈ ಮಕ್ಕಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಕಾಳಜಿಯಿಂದ ನೋಡಿಕೊಂಡು ರಕ್ಷಣೆ ಮಾಡುತ್ತಾರೆ. ಆದರೆ ಕೆಲವು ದುಷ್ಟರು ಈ ದೇವರಂಥ ಮಕ್ಕಳ ಮೇಲೂ ದೌರ್ಜನ್ಯವೆಸಗಲು ಮುಂದಾಗುತ್ತಾರೆ. ಇಂಥ ಎರಡನೇ ಪ್ರಕಾರ ದುಷ್ಟನೊಬ್ಬನನ್ನು ರಾಮನಗರ ಪೊಲೀಸರು ಬಂಧಿಸಿ, ಪೋಕ್ಸೊ ಕಾಯಿದೆಯಡಿ (Pocso case) ಕೇಸು ದಾಖಲಿಸಿದ್ದಾರೆ.

ರಾಮನಗರದ ಖಾಸಗಿ ಶಾಲೆಯೊಂದರ ಏಳು ವರ್ಷದ ಬಾಲಕಿ ಮೇಲೆ ಆಟೋ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಾಲಕಿಯ ಜತೆ ಮೃಗೀಯವಾಗಿ ವರ್ತಿಸಿದ ಚಾಲಕನನ್ನು ಬಂಧಿಸಲಾಗಿದೆ.

ಬಾಲಕಿಯನ್ನು ಪ್ರತಿ ನಿತ್ಯ ಶಾಲೆಗೆ ಪಿಕಪ್ ಡ್ರಾಪ್ ಮಾಡುತ್ತಿದ್ದ ಆಟೋ ಚಾಲಕನೇ ಈ ಕೃತ್ಯ ನಡೆಸಿದ್ದು ಆತಂಕ ಸೃಷ್ಟಿಸಿದೆ. ಸಂಜೆ ಶಾಲೆಯಿಂದ ಹೊರಟು ಡ್ರಾಪ್ ಮಾಡುವಾಗ ಬಾಲಕಿಯನ್ನು ಕೊನೆಯದಾಗಿ ಡ್ರಾಪ್ ಮಾಡುತ್ತಿದ್ದ ಈತ.

ಅದೊಂದು ದಿನ ಆತ ಶಾಲೆಯಿಂದ ಮನೆಗೆ ಕರೆದೊಯ್ಯುವಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರವನ್ನು ಯಾರಲ್ಲೂ ಹೇಳಬಾರದು ಎಂದು ಬಾಲಕಿಗೆ ಬೆದರಿಕೆ ಬೇರೆ ಹಾಕಿದ್ದ. ಮನೆಯಲ್ಲಿ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ತುಂಬ ಬಾಯಿ ಬಿಡಿಸಿದಾಗ ಈ ಏಳು ವರ್ಷದ ಬಾಲಕಿ ವಿಷಯವನ್ನು ತಿಳಿಸಿದ್ದಾಳೆ. ಇದೀಗ ಬಾಲಕಿಯ ಪೋಷಕರು ಕಾಮುಕ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ರಾಮನಗರ ಮಹಿಳಾ ಠಾಣೆ ಪೊಲೀಸರು ಕಾಮುಕ ಚಾಲಕನನ್ನು ಬಂಧಿಸಿದ್ದಾರೆ.

ನಾಪತ್ತೆಯಾಗಿದ್ದ ಬಾಲಕಿ ಶವ ಬಾವಿಯಲ್ಲಿ ಪತ್ತೆ; ಕೊಂದು ಚೀಲದಲ್ಲಿ ಹಾಕಿ ಬಾವಿಗೆಸೆದ ದುಷ್ಟರು

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಬಾಲಕಿಯನ್ನು ಕೊಂದು (Girl murdered) ಚೀಲದಲ್ಲಿ ಹಾಕಿ ಬಾವಿಗೆ ಎಸೆದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ರೇಖಾ ಸಂಗಪ್ಪ ಯಂಕಂಚಿ ಎಂಬ 11 ವರ್ಷದ ಬಾಲಕಿಯೇ ಕೊಲೆಗೀಡಾದವಳು. ಶಾಲೆಗೆ ಹೋಗುತ್ತಿರುವ ಈ ಬಾಲಕಿ ಮಾರ್ಚ್‌ 15ರ ಬೆಳಗ್ಗೆ 10 ಗಂಟೆಯಿಂದ ನಾಪತ್ತೆಯಾಗಿದ್ದಳು. ಇಡೀ ಊರಿನ ಜನರೆಲ್ಲ ಸೇರಿ ಆಕೆಗಾಗಿ ಹುಡುಕಾಟ ನಡೆಸಿದ್ದರು. ಅದರೆ, ಸಿಕ್ಕಿರಲಿಲ್ಲ.

ಶುಕ್ರವಾರ ಇಲ್ಲಿನ ಬಾವಿಯೊಂದರಲ್ಲಿ ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಆದರೆ, ಈ ಬಾಲಕಿಯನ್ನು ಕೊಲೆ ಮಾಡಿದ್ದು ಯಾರು? ಯಾಕಾಗಿ ಕೊಲೆ ಮಾಡಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕಬೇಕಾಗಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಮಹಿಳೆಯ ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ, ಇನ್ನಿಬ್ಬರನ್ನು ಕೊಂದಿದ್ದ ವಿಕೃತ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ

Exit mobile version