Site icon Vistara News

POCSO Case : ಶಾಲಾ ಮಕ್ಕಳನ್ನೇ ಲೈಂಗಿಕ ತೀಟೆಗೆ ಬಳಸಿಕೊಂಡ ಮುಖ್ಯ ಶಿಕ್ಷಕ; ಧೂರ್ತನ ಅಮಾನತು

Physical Harassment Children

ಮೈಸೂರು: ನಂಜನಗೂಡು ತಾಲೂಕಿನ ದಾಸನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನೊಬ್ಬ (School Head Master) ತನ್ನ ಶಾಲೆಯ ಅಪ್ರಾಪ್ತ ಮಕ್ಕಳನ್ನೇ ಲೈಂಗಿಕ ತೀಟೆಗೆ (Sexual Harassment) ಬಳಸಿಕೊಳ್ಳುತ್ತಿದ್ದ ಆಘಾತಕಾರಿ ಘಟನೆ (POCSO Case) ನಡೆದಿದೆ. ಇದರ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಪ್ರಕಾಶ್ ಎಂಬಾತನನ್ನು ಸೇವೆಯಿಂದ ಅಮಾನತು (Suspended from Service) ಮಾಡಲಾಗಿದೆ.

ಶಾಲಾ ಮಕ್ಕಳಿಗೆ ಪ್ರಭಾರ ಮುಖ್ಯ ಶಿಕ್ಷಕರಿಂದಲೇ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಶಿಕ್ಷಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕ ಪಿ.ಪ್ರಕಾಶ್ ಎಂಬಾತ ಶಾಲಾ ಮಕ್ಕಳಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದರು. ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು ಎಂದು ಮಕ್ಕಳು ತಿಳಿಸಿದ ಹಿನ್ನೆಲೆಯಲ್ಲಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ ಶಿವಲಿಂಗಯ್ಯ ದಿಢೀರ್ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿದ್ದರು.

ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಕವಲಂದೆ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಅಪ್ರಾಪ್ತ ಶಾಲಾ ಮಕ್ಕಳಿಗೆ ಮೇಲ್ನೋಟಕ್ಕೆ ಕಿರುಕುಳ ನೀಡುತ್ತಿರುವುದು ದೃಢಪಟ್ಟಿದೆ. ಪ್ರಭಾರ ಮುಖ್ಯ ಶಿಕ್ಷಕ ಪಿ.ಪ್ರಕಾಶ್ ಎಂಬ ಶಿಕ್ಷಕನನ್ನು ಅಮಾನತು ಆದೇಶ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Pocso Case: ಬಾಲಕಿ ಮೇಲೆ ಒಂದು ವರ್ಷದಿಂದ ಅತ್ಯಾಚಾರ, ಐವರ ಬಂಧನ

Physical Harassment : ಬುದ್ಧಿಮಾಂದ್ಯ ಮಗಳನ್ನೇ ನಿರಂತರ ರೇಪ್‌ ಮಾಡಿದ ಪಾಪಿ ತಂದೆ

ಬೆಳಗಾವಿ: ಧೂರ್ತ ತಂದೆಯೊಬ್ಬ ತನ್ನ ಬುದ್ಧಿಮಾಂದ್ಯ ಮಗಳ (Mentally retarded daughter) ಮೇಲೆಯೇ ನಿರಂತರ ಅತ್ಯಾಚಾರ (Rape by father) ಮಾಡಿ ಆಕೆಯ ಮಗುವಿಗೂ ತಂದೆಯಾಗಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಪೊಲೀಸರು ಪಾಪಿ ತಂದೆಯನ್ನು (Father Arrested) ಬಂಧಿಸಿದ್ದಾರೆ. ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕವಷ್ಟೇ ಈ ಭಯಾನಕ ಘಟನೆ (Physical Harassment) ಬೆಳಕಿಗೆ ಬಂದಿದೆ.

ಬುದ್ಧಿಮಾಂದ್ಯ ಯುವತಿಯ ತಾಯಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಂದೆ ಮತ್ತು ಈ ಮಗಳು ಮಾತ್ರ ವಾಸಿಸುತ್ತಿದ್ದರು. ತಂದೆ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಧೂರ್ತ ಅಪ್ಪ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ್ದ. ಯಾರೂ ಇಲ್ಲದ, ಏನೆಂದು ಅರ್ಥ ಮಾಡಿಕೊಳ್ಳಲಾಗದ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ಮಾಡಿದ್ದಾನೆ.

ಈ ನಡುವೆ, ಸಂತ್ರಸ್ತ ಯುವತಿಯ ಹೊಟ್ಟೆ ದೊಡ್ಡದಾಗುತ್ತಿರುವುದು ಕೆಲವರ ಗಮನಕ್ಕೆ ಬದಿತ್ತು. ಅವರು ಆಶಾ ಕಾರ್ಯಕರ್ತೆಯರಿಗೆ ವಿಷಯ ತಿಳಿಸಿದರು. ಸಂತ್ರಸ್ತೆ ಗರ್ಭಿಣಿ ಎಂದು ಆಶಾ ಕಾರ್ಯಕರ್ತೆಯರು ಖಚಿತಪಡಿಸಿದಾಗ, ಪೊಲೀಸರಿಗೆ ದೂರು ನೀಡಲಾಗಿದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಬುದ್ಧಿಮಾಂದ್ಯ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ನಡುವೆ, ಧೂರ್ತ ಅಪ್ಪ ಆಕೆಯ ಗರ್ಭಕ್ಕೆ ತಾನು ಕಾರಣನಲ್ಲ ಎಂದು ವಾದ ಮಾಡಿದ್ದ. ಹೀಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಆಗ ಅಪ್ಪನೇ ಮಗಳನ್ನು ಬಸಿರು ಮಾಡಿದ ಧೂರ್ತ ಎನ್ನುವುದು ತಿಳಿದುಬಂತು.

ಎನ್‌ಜಿಒ ದೂರಿನ ಮೇರೆಗೆ ತನಿಖೆ ನಡೆಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಸ್ಎಸ್ ಸಿದ್ದರಾಮಪ್ಪ ತಿಳಿಸಿದ್ದಾರೆ. ಮತ್ತು ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Exit mobile version