Site icon Vistara News

Chandrayaana 3 : ಚಂದ್ರಯಾನ 3ಗೆ ಜೈಹೋ, ದೇವರಿಗೆ ಮೊರೆ ಹೋದ ಜನರಿಂದ ವಿಶೇಷ ಪೂಜೆ, ಪ್ರಾರ್ಥನೆ

Chandrayaana Pooje

ಬೆಂಗಳೂರು: ಬುಧವಾರ (ಆಗಸ್ಟ್‌ 23) ಸಂಜೆ 6:04ಕ್ಕೆ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಚರಿತ್ರಾರ್ಹ ಘಟನೆ ನಡೆಯಲಿದೆ (Chandrayaana 3). ಭಾರತದ ವಿಕ್ರಮ್‌ ಲ್ಯಾಂಡರ್‌ (Vikram Lander) ಚಂದ್ರನ ಅಂಗಳದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಚಂದ್ರಯಾನ 3 ಸಾಹಸ ಯಶಸ್ವಿಯಾಗಲಿದೆ ಎಂದು ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆಗಳು (Pooja at Temple) ನಡೆಯುತ್ತಿವೆ. ಕಳೆದ ಬಾರಿ ಚಂದ್ರಯಾನ 2 ವೇಳೆ ಕೊನೆಯ ಹಂತದಲ್ಲಿ ವಿಘ್ನ ಎದುರಾಗಿತ್ತು. ಅಂಥ ವಿಘ್ನಗಳು ಈ ಬಾರಿ ಯಾವುದೂ ಬಾರದಿರಲಿ ಎಂದು ಜನರು ಪ್ರಾರ್ಥನೆ ಮಾಡುತ್ತಾ ಶುಭ ಹಾರೈಸುತ್ತಿದ್ದಾರೆ.

ಗದಗದ ಅರಶಿನಗೋಡಿಯಲ್ಲಿ ಹನುಮಂತನಿಗೆ ಅಭಿಷೇಕ

Chandrayana pooje at mantralaya

ಗದಗ: ಚಂದ್ರಯಾನ-3 ಯಶಸ್ವಿಗಾಗಿ ಗದಗ ಜಿಲ್ಲೆ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದ ಹನುಮಂತ ದೇವರಿಗೆ ಸ್ಥಳೀಯರು ಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಸಿದರು.

ಯಾದಗಿರಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

Chandrayana pooje at mantralaya

ಯಾದಗಿರಿ: ನಗರದ ಚಿತ್ತಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಆಂಜನೇಯ, ಈಶ್ವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.

ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ನೇತೃತ್ವದಲ್ಲಿ ಪ್ರಗತಿಪರ ಚಿಂತಕರಿಂದ ಪೂಜೆ ಸಲ್ಲಿಸಲಾಯಿತು. ವಿಜ್ಞಾನಿಗಳು ಕಳೆದ ಬಾರಿಯ ನೋವು ಅನುಭವಿಸಬಾರದು, ಈ ಬಾಯ ಪ್ರಯತ್ನ ಯಶಸ್ವಿ ಆಗಲಿ. ನಮ್ಮ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ, ಚಂದ್ರಯಾನಕ್ಕೆ ಯಾವುದೇ ಅಡೆತಡೆಯಾಗದೆ ಸೇಫ್ ಆಗಿ ಲ್ಯಾಂಡ್ ಆಗಲಿ ಅಂತಾ ಭಕ್ತಿಯಿಂದ ಪ್ರಾರ್ಥನೆ ಮಾಡಲಾಯಿತು.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಳಗಾವಿ: ಚಂದ್ರನ ಮೇಲೆ ಲ್ಯಾಂಡರ್‌ನ್ನು ಇಳಿಸುವ ಇಸ್ರೋ ಸಾಹಸ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪಾರ್ಥನೆ, ಮಹಾರುದ್ರಾಭೀಷೇಕ ನಡೆಸಲಾಯಿತು.

ಮಹಿಳೆಯರು ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ‌ ಶ್ಲೋಕ ಹಾಡಿ ಪ್ರಾರ್ಥನೆ ಸಲ್ಲಿಸಿದರು.

ಕಲಬುರಗಿಯ ಸನ್ನತಿ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಪೂಜೆ

Chandrayana pooje at mantralaya

ಕಲಬುರಗಿ: ಇಲ್ಲಿನ ಸನ್ನತಿ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಚಂದ್ರಯಾನ ಸಕ್ಸಸ್ ಲ್ಯಾಂಡಿಂಗ್ ಆಗಲು ಪಾರಾಯಣ ಮಾಡಲಾಯಿತು. ಶ್ರೀ ಸೂಕ್ತ ಪಾರಾಯಣ ಮಾಡಿ ಅರ್ಚಕರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾಶಿ ವಿಶ್ವನಾಥ ದೇವರ ಮೊರೆ ಹೋದ ರಾಯಚೂರಿನ ಪುಟಾಣಿಗಳು

ರಾಯಚೂರು: ಚಂದ್ರಯಾನ 3 ಸಕ್ಸಸ್‌ಗಾಗಿ ಕಾಶಿ ವಿಶ್ವನಾಥೇಶ್ವರ ದೇವರ ಮೊರೆ ಹೋಗಿದ್ದಾರೆ ರಾಯಚೂರಿನ ಪುಟಾಣಿ ಮಕ್ಕಳು. ನಗರದ ಎನ್ ಐ ಜಿ ಕಾಲೊನಿಯಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ಆರಂಭವಾಗಿದ್ದು, ದೇವರ ಮುಂದೆ ಮಕ್ಕಳು ಭಜನೆ, ಶ್ಲೋಕ ಪಠಣ ನಡೆಸುತ್ತಿದ್ದಾರೆ. ಪುಟಾಣಿ ಮಕ್ಕಳ ಪ್ರಾರ್ಥನೆಗೆ ಹೆತ್ತವರು ಸಾಥ್‌ ನೀಡಿದ್ದಾರೆ.

ʻʻಚಂದ್ರಯಾನ 3 ಯಶಸ್ವಿಯಾಗಲಿ ಎಂದು ಅಭಿಷೇಕ ಮಾಡ್ತಿದ್ದೀವಿ. ದೇವರ ಮುಂದೆ ಭಜನೆ ಶ್ಲೋಕಗಳನ್ನ ಹೇಳಿದ್ವಿ. ಚಂದ್ರಯಾನ 3 ಸಕ್ಸಸ್ ಆದ್ರೆ ನಮಗೆ ಚಂದ್ರನನ್ನು ಹತ್ತಿರದಿಂದ ನೋಡಲು ಸಿಗುತ್ತೆ. ನಮಗೆ ಇವತ್ತು ತುಂಬಾ ಖುಷಿಯಾಗ್ತಾ ಇದೆ. ಚಂದ್ರಯಾನ 3 ಸಕ್ಸಸ್ ಆಗಬೇಕು ಅಂತʼʼ ಎಂದು ಪುಟಾಣಿ ಮಕ್ಕಳು ಹೇಳಿದರು.

ʻʻನಾವು ಚಂದಮಾಮ ಬಾ ಅಂತ ಕರೆಯುತ್ತೇವೆ. ನಮಗೆ ಚಂದಮಾಮ ಅಂದ್ರೆ ಬಹಳ ಇಷ್ಟ. ಅದಕ್ಕೆ ದೇವರಿಗೆ ನಾವು ಪೂಜೆಯನ್ನ ಮಾಡಿದ್ವಿ. ಚಂದ್ರಯಾನ ಸಕ್ಸಸ್ ಆಗ್ಲಿ ಅಂತ ಬೇಡಿಕೊಂಡಿದ್ದೀವಿ. ನಾವು ಗುರುವಿಗೆ ಹನುವಂತ ಶ್ಲೋಕವನ್ನು ಹೇಳಿದ್ದೀವಿʼʼ ಎಂದರು.

ಇದನ್ನೂ ಓದಿ: Chandrayaan- 3 : ಚಂದ್ರಯಾನ ಕುತೂಹಲಿಗಳು ತಿಳಿಯಲೇಬೇಕಾದ ಸಂಗತಿಗಳಿವು; ವಿಜ್ಞಾನಿ ಗುರುಪ್ರಸಾದ್‌ Exclusive Details​

ಚಂದ್ರಯಾನ-3 ಯಶಸ್ವಿಗಾಗಿ ಕಲಬುರಗಿಯಲ್ಲಿ ಪೂಜೆ

Chandrayana pooje at mantralaya

ಕಲಬುರಗಿ: ಚಂದ್ರಯಾನ ಯಶಸ್ವಿಯಾಗಲೆಂದು ಹಾರೈಸಿ ಕಲಬುರಗಿಯ ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆ ನಿವಾಸಿಗಳು ವಾಯು ಪುತ್ರನ ಮೊರೆಹೋದರು. ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದ ನಿವಾಸಿಗಳು ಚಂದ್ರಯಾನ-3 ಸಕ್ಸಸ್ ಗಾಗಿ ಶುಭ ಹಾರೈಸಿದರು.

ಮಂತ್ರಾಲಯ ಸನ್ನಿಧಿಯಲ್ಲಿ ಚಂದ್ರಯಾನ 3 ಯಶಸ್ಸಿಗೆ ಪೂಜೆ

Chandrayana pooje at mantralaya

ಮೈಸೂರು ಬಿಜೆಪಿ ಸದಸ್ಯರು ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ನಡೆಯಿತು. ಪೂಜೆಗಾಗಿ ಮೈಸೂರಿನಿಂದ ತೆರಳಿರುವ 82 ಜನರ ಬಿಜೆಪಿ ನಿಯೋಗವು ವಿಜ್ಞಾನಿಗಳ ಶ್ರಮಕ್ಕೆ ಫಲ ನೀಡುವಂತೆ ಬೇಡಿಕೊಂಡಿತು. ವಿಜ್ಞಾನಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿದರು.

Exit mobile version