ಬೆಂಗಳೂರು : ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ಆರಂಭಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮುತಾಲಿಕ್ ಅಂತಹವರನ್ನು ಒದ್ದು ಒಳಗೆ ಹಾಕದೇ ಹೋದರೆ, ರಾಜ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.
ಬಾದಾಮಿಯ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಇಂತರವರನ್ನ ಒದ್ದು ಒಳಗೆ ಹಾಕದೇ ಇದ್ದಲ್ಲಿ ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಉಳಿಸಲಿಕ್ಕೆ ಕಷ್ಟ ಆಗುತ್ತದೆ. ಸರ್ಕಾರ ಇಂತಹ ವಿಷಯಗಳನ್ನ ಬೆಳೆಯೋದಕ್ಕೆ ಬಿಡಬಾರದು. ಮೌನವಾಗಿ ಒಪ್ಪಿಗೆ ಸೂಚಿಸೋದನ್ನ ಬಿಡುವಂತೆ ಸಿಎಂಗೆ ತಿಳಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ಒಪ್ಪಿಗೆ ಕೊಡಲಿ. ಆ ಪ್ರಕಾರ ಹನುಮಾನ ಚಾಲೀಸಾ ಇವರು ಓದಲಿ. ಅದಕ್ಕೆ ದೊಡ್ಡ ಪ್ರಚಾರ ಬೇಕಿಲ್ಲ. ನಮಗೆ ಸಂಕಷ್ಟ ಅಂದ್ರೆ ನಾವೆಲ್ಲ ಮನೆಯಲ್ಲೆ ಹನುಮಾನ್ ಚಾಲೀಸಾ ಹೇಳಲಿಕ್ಕೆ ಆಗುವುದಿಲ್ಲ.
ಒಂದು ಕಡೆ ಬೆಳೆ ವಿಮೆ ಬಂದಿಲ್ಲ ಎಂದು ರೈತರು ಹೇಳ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ದರ ಏರಿಕೆ ಕುರಿತು ನೀವು ಮಾತನಾಡುವುದಕ್ಕೆ ತಯಾರಿಲ್ಲ. ಇದನ್ನ ಸರಿಪಡಿಸುವ ಕೆಲಸ ಸಂಘಟನೆಗಳ ಪ್ರಥಮ ಆದ್ಯತೆ ಆಗಿರಬೇಕು ಎಂದರು.
ಇದನ್ನೂ ಓದಿ | ಆಜಾನ್ V/s ಭಜನೆ: ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಅಭಿಯಾನ
ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುತಾಲಿಕ್, ಮುಸ್ಲಿಮರು ಹಿಂದೂಗಳ ಹತ್ಯೆಗೆ ಲವ್ ಜಿಹಾದ್, ಅಪ್ರಾಪ್ತರನ್ನೂ ಬಳಕೆ ಮಾಡ್ತಾರೆ. ಇದೆಲ್ಲದಕ್ಕೂ ಕಡಿವಾಣ ಬೀಳಬೇಕು. ಇಲ್ಲವಾದರೆ ಮುಸ್ಲಿಮರನ್ನು ಸಾಮಾಜಿಕ ಆರ್ಥಿಕ ಬಾಯ್ ಕಟ್ ಮಾಡಲಾಗುತ್ತದೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಸಚಿವ ಅಶ್ವತ್ಥನಾರಾಯಣ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಹೆಚ್.ಡಿ. ಕುಮಾರಸ್ವಾಮಿ