ಮಂಗಳೂರು: ಹಿಂದು ಕಾರ್ಯಕರ್ತನ ಹತ್ಯೆಯಾಗಿ (Praveen Nettaru) ಹನ್ನೆರಡು ಗಂಟೆಗಳೇ ಕಳೆದಿದ್ದರೂ ಬಿಜೆಪಿ ಪ್ರಮುಖ ಮುಖಂಡರು ಬಾರದ ಕಾರಣ ಹಿಂದು ಸಂಘಟನೆಗಳು, ಬಿಜೆಪಿ ಕಾರ್ಯಕರ್ತರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೇ ವೇಳೆ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಪ್ರವೀಣ್ ಹುಟ್ಟೂರು ಬೆಳ್ಳಾರೆಯತ್ತ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಶೀಘ್ರವೇ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಸೂಚಿಸಿದ್ದರು. ಸುನಿಲ್ ಕುಮಾರ್ ಅವರು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಿ ಅಲ್ಲಿಂದ ಬೆಳ್ಳಾರೆಗೆ ಬರಲಿದ್ದಾರೆ. ಸುಳ್ಯ ತಾಲೂಕಿನ ನೆಟ್ಟಾರಿನಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ಮೇಲೆ ಮಂಗಳವಾರ ರಾತ್ರಿ ೯ ಗಂಟೆಯ ಹೊತ್ತಿಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮಂಗಳವಾರ ರಾತ್ರಿ ಕೊಲೆ ನಡೆದಿದ್ದರೂ ಬುಧವಾರ ಬೆಳಗ್ಗೆ ೯ ಗಂಟೆವರೆಗೂ ಹಿರಿಯ ಬಿಜೆಪಿ ನಾಯಕರು ಸ್ಥಳಕ್ಕಾಗಲೀ, ಆಸ್ಪತ್ರೆಗಾಗಲೀ ಬಂದಿಲ್ಲದಿರುವುದು ಕುಟುಂಬ ಸಹಿತ, ಹಿಂದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Praveen Nettaru Murder| ಬೆಳಗಿನವರೆಗೂ ಬಾರದ ಬಿಜೆಪಿ ನಾಯಕರು, ಬಂಧುಗಳ ಆಕ್ರೋಶ