Site icon Vistara News

ಪ್ರವೀಣ್ ನೆಟ್ಟಾರು‌ ಹತ್ಯೆ ಪ್ರಕರಣ; ಆರೋಪಿಗಳ ಸುಳಿವು ನೀಡಿದರೆ ಲಕ್ಷಾಂತರ ರೂಪಾಯಿ ಬಹುಮಾನ

ಪ್ರವೀಣ್ ನೆಟ್ಟಾರು‌

ಮಂಗಳೂರು: ಪ್ರವೀಣ್ ನೆಟ್ಟಾರು‌ ಹತ್ಯೆ ಪ್ರಕರಣ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಶೋಧ ಮುಂದುವರಿಸಿದ್ದು, ತಪ್ಪಿತಸ್ಥರ ಬಂಧನಕ್ಕೆ ಹಳೇ ಪೊಲೀಸ್‌ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ತಲೆಗೆ ಬಹುಮಾನ ಘೋಷಿಸಿದ್ದು, ಸುಳಿವು ನೀಡಿದವರಿಗೆ ಲಕ್ಷಾಂತರ ರೂಪಾಯಿ ನೀಡುವುದಾಗಿ ಎನ್‌ಐಎ ಪ್ರಕಟಿಸಿದೆ.

ಪಿಎಫ್‌ಐ ಕಾರ್ಯಕರ್ತರಾದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳು ದಕ್ಷಿಣ ಕನ್ನಡ ಹಾಗೂ ಒಬ್ಬ ಕೊಡಗು ಮೂಲದವನಾಗಿದ್ದಾನೆ. ಸುಳ್ಯ ತಾಲೂಕು ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಫಾ ತಲೆಗೆ 5 ಲಕ್ಷ ರೂಪಾಯಿ, ಕೊಡಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ನಿವಾಸಿ ತುಫೈಲ್ ಎಂ.ಎಚ್ ತಲೆಗೆ 5 ಲಕ್ಷ ರೂಪಾಯಿ, ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿಯಾದ ಉಮ್ಮರ್ ಫಾರೂಕ್ ತಲೆಗೆ 2 ಲಕ್ಷ ರೂಪಾಯಿ, ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ತಲೆಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ.

ಜುಲೈ 26 ರಂದು ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಪ್ರವೀಣ್‌ನನ್ನು ಕೊಲೆ ಮಾಡಿ ಎಸ್ಕೇಪ್‌ ಆಗಿದ್ದರು. ಆ ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್‌ಐಎಗೆ ವಹಿಸಿತ್ತು. ಕೊಲೆ ನಡೆದು 3 ತಿಂಗಳು ಕಳೆದರೂ ಕೊಲೆಗಡುಕರು ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿ ಎನ್.ಐ.ಎ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಪತ್ನಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಸರಕಾರ, 30,350 ರೂ. ವೇತನ

Exit mobile version