Site icon Vistara News

Praveen Nettaru | ಸದ್ಯಕ್ಕಿಲ್ಲ ಎನ್‌ಐಎ ತನಿಖೆ; ಸಿಎಂ ಬಸವರಾಜ ಬೊಮ್ಮಾಯಿ

CM basavaraja bommai

ಬೆಂಗಳೂರು: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಆದರೆ, ಸದ್ಯಕ್ಕೆ ಎನ್‌ಐಎ ತನಿಖೆ ಬಗ್ಗೆ ತೀರ್ಮಾನಿಸಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರವೀಣ್‌ ಹತ್ಯೆ ಪ್ರಕರಣವನ್ನು ಎನ್‌ಐಎಗೆ ಕೊಡಲು ಕೆಲ ಷರತ್ತುಗಳು ಇವೆ. ಆದರೆ, ಪ್ರಾಥಮಿಕ ತನಿಖೆ ಆಧರಿಸಿ ಮುಂದೆ ಎನ್ಐಎ ಬಗ್ಗೆ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಯಾರೇ ಇರಲಿ ಬಿಡುವುದಿಲ್ಲ

ಮೃತ ಪ್ರವೀಣ್‌ ಹತ್ಯೆ ಬಗ್ಗೆ ಕ್ರಮಕೈಗೊಳ್ಳಲು ಆದೇಶ ಮಾಡಲಾಗಿದ್ದು, ಈಗಾಗಲೇ ಕಾರ್ಯಾಚರಣೆ ನಡೆಯುತ್ತಿದೆ. ಡಿಜಿ ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಈ ಘಟನೆ ಹಿಂದೆ ಯಾರೇ ಇದ್ದರು ಅವರನ್ನು ಸದೆಬಡೆಯುತ್ತವೆ ಎಂದ ಸಿಎಂ, ಯಾರು ಆವೇಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ಸಮಾಜದಲ್ಲಿ ಹಿಂಸೆ ಮಾಡಿ ದುಷ್ಕೃತ್ಯ ಎಸಗುವವರನ್ನು ದಮನ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದಿದ್ದಾರೆ.

ನೆರೆಯ ಕೇರಳ ಡಿಜಿಪಿಯೊಂದಿಗೂ ಸಂಪರ್ಕ

ಮಂಗಳೂರು ಹಾಗೂ ಕಾಸರಗೋಡು ಎಸ್‌ಪಿ ಜತೆಗೆ ಮಾತುಕತೆ ನಡೆಸಿದ್ದು, ನಮ್ಮ ರಾಜ್ಯದ ಡಿಜಿಪಿ ನೆರೆಯ ಕೇರಳ ಡಿಜಿಪಿ ಅವರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಸಿಎಂ ಬೊಮ್ಮಾಯಿ ಹೇಳಿದರು. ಆರೋಪಿಗಳ ಬೆನ್ನತ್ತಿರುವ ತಂಡವು ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.

Exit mobile version