Site icon Vistara News

Karnataka Election: ನಿಮ್ಮ ಲೂಟಿ ಅತಿಯಾಗಿದೆ, ರಾಜ್ಯ ಬಿಟ್ಟು ಹೊರಡಿ: ಮತದಾರರ ಮೂಲಕ ಬಿಜೆಪಿಗೆ ಪ್ರಿಯಾಂಕಾ ಏಟು

Priyanka Gandhi attacks BJP over corruption Karnataka Election updates

ಇಂಡಿ (ಬಾಗಲಕೋಟೆ): ಮತದಾರರೇ, ನೀವು ಪ್ರತಿ ಬಾರಿ ಚುನಾವಣೆ (Karnataka Election) ಬಂದಾಗ ಬಿಜೆಪಿಗೆ ಪ್ರಶ್ನೆಯನ್ನು ಕೇಳುವುದಿಲ್ಲ. ಜಾತಿಯತೆ ಮಾಡಿ ಚುನಾವಣೆ ಗೆಲ್ಲುತ್ತೇವೆ ಎಂದು ಅಂದುಕೊಂಡಿರುವ ಅವರೇಕೆ ಅಭಿವೃದ್ಧಿ ಮಾಡುತ್ತಾರೆ? ನಿಮ್ಮ ಮತವನ್ನು ನಿಮ್ಮ ವಿಕಾಸಕ್ಕಾಗಿ ಬಳಸಿಕೊಳ್ಳಬೇಕು. “ನಿಮ್ಮ ಲೂಟಿ ಅತಿಯಾಗಿದೆ, ರಾಜ್ಯ ಬಿಟ್ಟು ಹೊರಡಿ” ಎಂದು ಬಿಜೆಪಿಯವರಿಗೆ ಈ ಬಾರಿ ಹೇಳಿಬಿಡಿ ಎಂದು ಮತದಾರರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಕಿವಿಮಾತು ಹೇಳಿದರು.

ಅವರು ಇಂಡಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಬಿಜೆಪಿಯಿಂದಾಗಿ ಗ್ಯಾಸ್, ಪೆಟ್ರೋಲ್, ಯೂರಿಯಾ ಸೇರಿದಂತೆ ಎಲ್ಲ ಬೆಲೆಗಳು ಏರಿಕೆಯಾಗುತ್ತಿವೆ. ಆರಂಭದಲ್ಲಿಯೇ ನಿಮಗೆ ತಪ್ಪಾಗಿರುವಂತಹ ಸರ್ಕಾರ ಸಿಕ್ಕಿದೆ. ಶುರುವಿನಿಂದಲೇ ಇವರು ಲೂಟಿಗೆ ಇಳಿದಿದ್ದಾರೆ. ಕಳೆದ‌ ಮೂರೂವರೆ ವರ್ಷಗಳಿಂದ ಏನೂ ಅಭಿವೃದ್ಧಿ ಆಗಿಲ್ಲ. ಸರ್ವಶ್ರೇಷ್ಠ, ವಿಕಾಸ ಪುರುಷ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕರೆಯುತ್ತಾರೆ. ಆದರೆ, ಅವರ ಕಡೆಯಿಂದ ಏನನ್ನೂ ಮಾಡಲಾಗಿಲ್ಲ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರ್ನಾಟಕ ವಿಕಾಸ ಮಾಡುವುದು ತಮ್ಮ ಕನಸಿದೆ ಎಂದು ಹೇಳುತ್ತಾರೆ. ಆದರೆ, ಅದನ್ನು ನನಸು ಮಾಡುವುದಕ್ಕೆ ಏಕೆ ಸಾಧ್ಯವಾಗಿಲ್ಲ? ಏಕೆಂದರೆ, ಮೋದಿಯವರೇ, ನಿಮ್ಮ ಬಿಜೆಪಿ ಸರ್ಕಾರ 40 ಪರ್ಸೆಂಟ್ ಲೂಟಿ ಮಾಡುತ್ತಿದೆ. ನೀವು ಕಣ್ಣು ಮುಚ್ಚಿ ಕನಸು ಕಂಡರೆ ಏನು ಪ್ರಯೋಜನ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: Modi In Karnataka: ‘ಕರಾವಳಿ’ಯಲ್ಲಿ ಮೋದಿ ‘ಅಲೆ’; ಇಲ್ಲಿವೆ ಮನಮೋಹಕ ಫೋಟೊಗಳು

ಭ್ರಷ್ಟಾಚಾರ ಮಾಡುವ ಯಾರನ್ನೂ ಮೋದಿ ತಡೆಯಲಿಲ್ಲ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು, ಕರ್ನಾಟಕವನ್ನು ಲೂಟಿ ಹೊಡೆಯಲಾಗಿದೆ. ಆಸ್ಪತ್ರೆ, ರಸ್ತೆ, ಅಭಿವೃದ್ಧಿ ಯಾಕೆ ಮಾಡಲಿಲ್ಲ? ಮೂರು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದ್ದೀರಿ. ನೀವು ಲೂಟಿ ಮಾಡಿದ ಹಣದಲ್ಲಿ 2250 ಕಿಲೊ ಮೀಟರ್ ರಸ್ತೆ ಮಾಡಬಹುದು, 30 ಸಾವಿರ ಸ್ಮಾರ್ಟ್ ಕ್ಲಾಸ್ ಮಾಡಬಹುದು, 30 ಲಕ್ಷ ಮನೆಯನ್ನು ನಿರ್ಮಾಣ ಮಾಡಬಹುದಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ

ಬೆಂಗಳೂರಿನಂತ ದೊಡ್ಡ ಸಿಟಿಯಿಂದ ಎಷ್ಟೋ ಕಂಪನಿಗಳು ಹೊರಹೋಗಿವೆ. ಇವರ ಲೂಟಿಯಿಂದಾಗಿ ಕಂಪನಿಗಳು ರಾಜ್ಯವನ್ನು ಬಿಟ್ಟು ಹೋಗಿವೆ. ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ, ಯಾರಿಗೂ ನೌಕರಿ ಸಿಕ್ಕಿಲ್ಲ. ರೈತರಿಗೆ ಅನುಕೂಲ ಆಗಿಲ್ಲ, ಇವರು ಯಾವುದೇ ಕೆಲಸ ಮಾಡಿಲ್ಲ. ದೊಡ್ಡ ದೊಡ್ಡ ಬಿಸಿನೆಸ್‌ಗಳನ್ನು ತಮ್ಮ ಆಪ್ತರಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಕೊಟ್ಟಿದೆ. 18 ಲಕ್ಷ ರೈತರಿಗೆ ಛತ್ತಿಸಘಡದಲ್ಲಿ ಅನುಕೂಲ ಆಗಿದೆ. ನೀವು ಜಾಗೃತಿ ಆಗದಿದ್ದರೆ ಜೀವನಪೂರ್ತಿ ಅವರು ಭ್ರಷ್ಟಾಚಾರ ಮಾಡ್ತಾರೆ. ನೀವು ಜಾಗೃತರಾಗಿ, ಬದಲಾವಣೆ ತನ್ನಿ. ನಿಮಗಾಗಿ‌ ನೀವು ಅಭಿವೃದ್ಧಿ ಆಗಿ ಎಂದು ಪ್ರಿಯಾಂಕಾ ಗಾಂಧಿ ಕರೆ ನೀಡಿದರು.

ಹಲವು ಕಡೆ ಐಟಿ ಅಭಿವೃದ್ಧಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 200 ಯುನಿಟ್, ತಲಾ 10 ಕೆಜಿ‌ ಗುಣಮಟ್ಟದ ಅಕ್ಕಿ, ಯುವನಿಧಿ, ಗೃಹಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡಲಾಗುವುದು. ಆಟೋ, ಟ್ಯಾಕ್ಸಿ ಚಾಲಕರ ಅಭಿವೃದ್ದಿಗೆ ಶ್ರಮಿಸಲಾಗುವುದು. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಕಾರ್ಖಾನೆ ಮಾಡುವ ಮೂಲಕ ದೊಡ್ಡ ಹಬ್ ಮಾಡಲಾಗುವುದು. ಹಲವು ವಿಧಾನಸಭಾ ಕ್ರೇತ್ರಗಳಲ್ಲಿ 10 ಕೋಟಿ ವೆಚ್ಚದಲ್ಲಿ ಸಣ್ಣಪುಟ್ಟ ಬಿಸಿನೆಸ್ ಮಾಡಲು ಅನುಕೂಲ‌ ಕಲ್ಪಿಸಲಾಗುವುದು. ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಚಿತ್ರದುರ್ಗ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಐಟಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Karnataka Election: ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ; ಡಿ.ಕೆ.ಶಿವಕುಮಾರ್ ಪ್ರಶ್ನೆ

ನಿಮ್ಮ‌ ಅಭಿವೃದ್ಧಿಯನ್ನು ನಮಗೆ ಬಿಡಿ

371 ಜೆ ವಿಧಿ ಜಾರಿಗಾಗಿ ಸೋನಿಯಾಗಾಂಧಿ, ಮನಮೋಹನ್ ಸಿಂಗ್, ‌ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಶ್ರಮಿಸಿದ್ದಾರೆ. ಮೂರೂವರೆ ವರ್ಷಗಳಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಮುಖ್ಯಮಂತ್ರಿಯಾದವರು ಯಾವುದೇ ಗಮನ ಹರಿಸುತ್ತಿಲ್ಲ. ಕಲ್ಯಾಣ ಕರ್ನಾಟಕದಲ್ಲಿ 16 ಸಾವಿರ ಶಿಕ್ಷಕರ ಕೊರತೆ ಇದೆ. 40 ಸಾವಿರ ನೌಕರಿ ಹುದ್ದೆಗಳು ಖಾಲಿ‌ ಇವೆ. ಕರ್ನಾಟಕದ ಸ್ಥಿತಿ ಅಧೋಗತಿಗೆ ಹೋಗಿದೆ. ಇಂತಹ ಸ್ಥಿತಿಯನ್ನು ನೀವು ಬದಲು ಮಾಡಬಹುದು. ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಕೊಡಿ. ನಿಮ್ಮ‌ ಅಭಿವೃದ್ಧಿಯನ್ನು ನಮಗೆ ಬಿಡಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಇದೇ ವೇಳೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರ ನೀಡಿ ಪ್ರಿಯಾಂಕಾ ಗಾಂಧಿ ಅವರನ್ನು ಸನ್ಮಾನಿಸಲಾಯಿತು.

Exit mobile version