ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿ ಮನೆಯಲ್ಲೇ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ. ಬ್ಯೂಟಿ ಪಾರ್ಲರ್ ನೆಪದಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ (Prostitution Racket) ಮೇಲೆ ಪೋಲಿಸರು ದಾಳಿ ಮಾಡಿ, ಐವರು ಯುವತಿಯರನ್ನು ರಕ್ಷಣೆ ಮಾಡಿ, ಇಬ್ಬರು ವಿಟ ಪುರುಷರನ್ನು ಬಂಧಿಸಿದ್ದಾರೆ.
ಲಲಿತ ಮಹಲ್ ನಗರದಲ್ಲಿರುವ ನಿವೃತ್ತ ಇನ್ಸ್‌ಪೆಕ್ಟರ್ ಜಿ.ಬಿ.ರಂಗಸ್ವಾಮಿ ಅವ ನಿವಾಸದಲ್ಲಿ ದುನಿಯಾ ಫ್ಯಾಮಿಲಿ ಸಲೂನ್ ನಡೆಸಲಾಗುತ್ತಿತ್ತು. ಆರೋಪಿಗಳು ಬ್ಯೂಟಿ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಮಹೇಶ್, ಚೈತ್ರಾ ಈ ದಂಧೆಯ ಕಿಂಗ್‌ಪಿನ್‌ಗಳಾಗಿದ್ದು, ಇವರಿಬ್ಬರ ಮೇಲೆ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ | Actor Darshan: ನಟ ದರ್ಶನ್ ವಿರುದ್ಧ ಕೇಸ್ ದಾಖಲು; ನಾಯಿಗಳು ಕಚ್ಚಿದ್ದಕ್ಕೆ ವೈದ್ಯೆ ದೂರು
ನಿವೃತ್ತ ಪೊಲೀಸ್ ಅಧಿಕಾರಿ, ತಾವು ವಾಸವಿರುವ ಮನೆಯಲ್ಲೇ ಮಾಂಸ ದಂಧೆಗೆ ಅವಕಾಶ ಮಾಡಿಕೊಟ್ಟರೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪೊಲೀಸರು, ಒಡನಾಡಿ ಸೇವಾ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Actor Darshan: ನಟ ದರ್ಶನ್ ವಿರುದ್ಧ ಕೇಸ್ ದಾಖಲು; ನಾಯಿಗಳು ಕಚ್ಚಿದ್ದಕ್ಕೆ ವೈದ್ಯೆ ದೂರು
ಹುಲಿ ದಾಳಿಯಿಂದ ರೈತನಿಗೆ ಗಂಭೀರ ಗಾಯ
ಮೈಸೂರು: ಹುಲಿ ದಾಳಿಯಿಂದ ರೈತನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಕುದುರೆಗುಂಡಿ ಕೆರೆ ಹಿನ್ನೀರಿನ ಪ್ರದೇಶದಲ್ಲಿ ಹುಸುವಿನ ಮೇಲೆ ಹುಲಿ ನಡೆಸಿದೆ. ಈ ವೇಳೆ ಹಸುವನ್ನು ರಕ್ಷಿಸಲು ಯತ್ನಿಸಿದಾಗ ರೈತನ ಮೇಲೆ ಹುಲಿ ಮಾಡಿದೆ.
ಮಹದೇವನಗರ ಗ್ರಾಮದ ವೀರಭದ್ರ ಬೋವಿ ಗಾಯಗೊಂಡವರು. ಬೆನ್ನು, ಮುಖ ಹಾಗೂ ಕೈ ಭಾಗದಲ್ಲಿ ಗಾಯಗಳಾಗಿವೆ. ಹುಲಿ ದಾಳಿಗೆ ತುತ್ತಾಗಿ ತೀವ್ರ ನಿತ್ರಾಣಗೊಂಡಿದ್ದ ರೈತನನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಡಿಯಾಲ ವಿಭಾಗದ ಅರಣ್ಯಾಧಿಕಾರಿಗಳಾದ ಮಹಾಂತೇಶ್ ಕುಮಾರ್, ರಘುನಾಗೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.