Site icon Vistara News

PSI Scam | ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಮತ್ತೊಬ್ಬ ಅಭ್ಯರ್ಥಿ ಬಂಧನ;‌ 52ಕ್ಕೇರಿದ ಬಂಧಿತರ ಸಂಖ್ಯೆ

PSI Scam

ಕಲಬುರಗಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ‌ (PSI Scam) ನಡೆಸಿದ್ದ ಇನ್ನೊಬ್ಬ ಅಭ್ಯರ್ಥಿಯನ್ನು ಸಿಐಡಿ ತಂಡದವರು ಬಂಧಿಸಿದ್ದಾರೆ. ಈ ಮೂಲಕ ಕಲಬುರಗಿ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಬಂಧಿತ ಸುಪ್ರೀಯಾ ಹುಂಡೆಕಾರ

ಕಲ್ಯಾಣ‌ ಕರ್ನಾಟಕ ಮಹಿಳಾ ಖೋಟಾದಲ್ಲಿ ಮೊದಲ ಸ್ಥಾನ ಪಡೆದಿದ್ದ ಸುಪ್ರಿಯಾ ಹುಂಡೆಕಾರ (26) ಬಂಧಿತ ಅಭ್ಯರ್ಥಿ. ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮೂಲಕ ಪರೀಕ್ಷೆಯಲ್ಲಿ ಸುಪ್ರಿಯಾ ಅಕ್ರಮ ನಡೆಸಿದ್ದಳು ಎಂದು ತಿಳಿದು ಬಂದಿದೆ.

ಈಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ವಿಷಯಗಳು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸಿಐಡಿ ಪೊಲೀಸರು ದಾಖಲಿಸಿದ್ದು, ಈ ಮೂಲಕ ಕಲಬುರಗಿಯಲ್ಲಿ ಬಂಧಿತರ ಸಂಖ್ಯೆ 52ಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿ | Red Fort Attack | ಉಗ್ರನಿಗೆ ಗಲ್ಲು ಶಿಕ್ಷೆ ಕಾಯಂ, ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

Exit mobile version