Site icon Vistara News

Puneeth Rajkumar | ವಿಡಿಯೊ ಮಾಡಿ ಪುನೀತ್‌ಗೆ ನಿಂದನೆ; ಫ್ಯಾನ್ಸ್‌ಗೆ ಹೆದರಿ ಅಪ್ಪು ಫೋಟೊಗೆ ಪೂಜೆ, ಕ್ಷಮೆಯಾಚನೆ!

Puneeth Rajkumar

ಮೈಸೂರು: ಖ್ಯಾತ ನಟ ಪುನೀತ್‌ ರಾಜಕುಮಾರ್‌ (Puneeth Rajkumar) ಅವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಯುವಕನೊಬ್ಬ ಆ ವಿಡಿಯೊ ಹರಿಬಿಟ್ಟು, ಬಳಿಕ ಕೆನ್ನೆಗೆ ಹೊಡೆದುಕೊಂಡು ಕ್ಷಮೆ ಕೇಳಿದ ಘಟನೆ ತಾಲೂಕಿನ ಲಿಂಗದೇವರ ಕೊಪ್ಪಲಿನಲ್ಲಿ ನಡೆದಿದೆ.

Puneeth Rajkumar

ದರ್ಶನ್‌ ಅಭಿಮಾನಿ ಎಂದು ಹೇಳಿಕೊಳ್ಳುವ ಪುಟ್ಟ ಎಂಬ ಯುವಕನೊಬ್ಬ ನಟ ಪುನೀತ್ ರಾಜಕುಮಾರ್ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೆ, ಅವಹೇಳನಕಾರಿ ಶಬ್ದಗಳನ್ನು ಪ್ರಯೋಗಿಸಿದ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ಸಖತ್‌ ವೈರಲ್‌ ಆಗಿತ್ತು.

ವಿಡಿಯೊ ಮಾಡುವಾಗ ಪುನೀತ್‌ ರಾಜಕುಮಾರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಈ ವೇಳೆ ಆತನ ಸ್ನೇಹಿತರು ಮಾತುಗಳನ್ನು ತಡೆಯಲು ಪ್ರಯತ್ನಪಟ್ಟಿದ್ದಾರೆ. ಆದರೆ ಅವರಿಗೇ ಬೈದ ಯುವಕ ತನ್ನ ಮಾತನ್ನು ಮುಂದುವರಿಸಿ ಅಪ್ಪು ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದ್ದಾನೆ. ಕೊನೆಗೆ ತಾನು ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡು, ಜೈ ಡಿ ಬಾಸ್‌ ಎಂದು ಮಾತುಮುಗಿಸಿದ್ದಾನೆ. ಈತ ಮಾತಿನ ಮಧ್ಯೆ ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಅವರ ತಮ್ಮ ಎಂದೂ ಹೇಳಿಕೊಂಡಿದ್ದಾನೆ.

ಅಪ್ಪು ಅಭಿಮಾನಿಗಳ ತರಾಟೆ
ಪುಟ್ಟನ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪುನೀತ್‌ ಅಭಿಮಾನಿಗಳು ಗರಂ ಆಗಿದ್ದಾರೆ. ಬಳಿಕ ಈತನ ಮೊಬೈಲ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬೈಗುಳಗಳು ಕೇಳಿಬಂದಿವೆ. ಕೆಲವರು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಯುವಕ ತಕ್ಷಣ ತನ್ನ ತಪ್ಪನ್ನು ತಿದ್ದುಕೊಂಡಿದ್ದಾನೆ. ಬಳಿಕ ಪುನೀತ್‌ ರಾಜಕುಮಾರ್‌ ಅವರ ಕ್ಷಮೆ ಕೇಳುವ ಇನ್ನೊಂದು ವಿಡಿಯೊವನ್ನು ಹರಿಬಿಟ್ಟಿದ್ದಾನೆ.

ಅಗರಬತ್ತಿ ಹಚ್ಚಿದ, ಕೆನ್ನೆಗೆ ಹೊಡೆದುಕೊಂಡು ಕ್ಷಮೆ ಕೇಳಿದ
ಇನ್ನೊಂದು ವಿಡಿಯೊದಲ್ಲಿ ಪುನೀತ್‌ ಅವರ ಫೋಟೊವನ್ನು ಟೇಬಲ್‌ ಮೇಲಿಟ್ಟು ಕೈಮುಗಿದು ತನ್ನನ್ನು ಕ್ಷಮಿಸಿ, ಇನ್ನು ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ. ನಿಮಗಾಗಲಿ, ನಿಮ್ಮ ಅಭಿಮಾನಿಗಳಿಗಾಗಲಿ ನೋವು ಮಾಡುವುದಿಲ್ಲ. ಅಚಾನಕ್ಕಾಗಿ ಏನೋ ತಪ್ಪು ಮಾಡಿಬಿಟ್ಟೆ. ಎಲ್ಲ ಕಡೆಯಿಂದ ನನಗೆ ಕರೆಗಳು ಬರುತ್ತಿವೆ. ನನ್ನ ತಂದೆ- ತಾಯಿ ಕೂಡ ಹೆದರಿಕೊಂಡಿದ್ದಾರೆ. ನನಗೆ ಒಂದು ಅವಕಾಶ ಕೊಡಿ. ಮತ್ತೆ ಯಾವತ್ತೂ ಸಹ ಇಂತಹ ತಪ್ಪು ಕೆಲಸ ಮಾಡಲಾರೆ ಎಂದು ಕೆನ್ನೆಗೆ ಹೊಡೆದುಕೊಂಡಿರುವ ಪುಟ್ಟ ಕ್ಷಮೆಯಾಚನೆ ಮಾಡಿದ್ದಾನೆ. ಅಲ್ಲದೆ, ಪುನೀತ್‌ ಫೋಟೊಗೆ ಅಗರಬತ್ತಿ ಹಚ್ಚಿ ಪೂಜೆ ಸಲ್ಲಿಸಿದ್ದಾನೆ.

ಇದನ್ನೂ ಓದಿ | Friend or Boy friend | ಸಂಬಂಧವನ್ನು ತಪ್ಪಾಗಿ ತಿಳಿದು ಯುವತಿಗೆ ಮನೆಯವರ ಕಿರುಕುಳ, ಗೆಳತಿಯ ಬಿಡಲಾರೆ ಎಂದ ಯುವಕ

Exit mobile version