Site icon Vistara News

ರಾಜಕೀಯದಲ್ಲಿ QR ಕೋಡ್‌ ಕದನ: ಕಾಂಗ್ರೆಸ್‌ನ ʼPay CMʼಗೆ ಉತ್ತರವಾಗಿ ಭಾರತ್‌ ಜೋಡೊ ಪೋಸ್ಟರ್‌ ಹರಿಬಿಟ್ಟ BJP

bjp poster qr code

ಬೆಂಗಳೂರು: ರಾಜ್ಯ ಸರ್ಕಾರ ವಿರುದ್ಧ ಪೋಸ್ಟರ್‌ ಕದನ ಆರಂಭಿಸಿದ್ದ ಕಾಂಗ್ರೆಸ್‌ ಪೇ ಸಿಎಂ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ, ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಅಭಿಯಾನವನ್ನು ಟೀಕಿಸಿ ಸಾಮಾಜಿಕ ಜಾಲತಾಣ ಪೋಸ್ಟರ್‌ ಹರಿಬಿಟ್ಟಿದೆ.

ಬಿಜೆಪಿಯ ಸಾಮಾಜಿಯ ಜಾಲತಾಣ ಖಾತೆಯ ಮೂಲಕ, ಭಾರತ್‌ ಜೋಡೊ ಯಾತ್ರೆಯ ಸಮಯದಲ್ಲಿ ಕೇರಳದಲ್ಲಿ ನಡೆದಿದ್ದ ಘಟನೆಯನ್ನು ಉಲ್ಲೇಖಿಸಿದೆ.

ಭಾರತ್‌ ಜೋಡೊ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ ಮಾರುವವರನ್ನು ಕಾಂಗ್ರೆಸ್‌ ಕಾರ್ಯಕರ್ತರು ದೋಚಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್‌ ಗಾಂಧಿ ಅವರ ಫೋಟೋ ಹಾಕಿ, ಕ್ಯುಆರ್‌ ಕೋಡ್‌ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ? ಎಂದು ಟೀಕೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್‌ ಬಿಟ್ಟರೆ, ವಾಟ್ಸ್‌ಅಪ್‌ ಮೂಲಕ ಅನೇಕ ಪೋಸ್ಟರ್‌ಗಳನ್ನು ಬಿಜೆಪಿ ವಲಯದಲ್ಲಿ ಹಂಚಲಾಗುತ್ತಿದೆ. ಭಾರತ್‌ ಜೋಡೊ ಯಾತ್ರೆಗೆ ಹಣ ದೋಚಲು ಪೇಟಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಜತೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರೂ ಕಮಿಷನ್‌ ವಿಚಾರದಲ್ಲಿ ಮಾತನಾಡುತ್ತಿರುವಂತಡ ಪೋಸ್ಟರ್‌ ಡಿಸೈನ್‌ ಮಾಡಲಾಗಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಫೋಟೊ ಬಳಸಿ, ಬರ್ನಾಲ್‌ ಬ್ರದರ್ಸ್‌ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಫೊಟೊ ಬಳಸಲಾಗಿದೆ. ಈ ಮೂಲಕ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೋಸ್ಟರ್‌ ಜಗಳ ತಾರಕಕ್ಕೇರಿದೆ.

ಇದನ್ನೂ ಓದಿ | PAY CM ಅಭಿಯಾನ ಆರಂಭಿಸಿದ ಕಾಂಗ್ರೆಸ್‌: QR ಕೋಡ್‌ಗೆ ಸಿಟ್ಟಿಗೆದ್ದ ಬಿಜೆಪಿ

Exit mobile version