Site icon Vistara News

ಪ್ರಶ್ನೆ ಪ್ರತಿಕೆ ಸೋರಿಕೆ ಪ್ರಕರಣ: ಆರೋಪಿ ಸೌಮ್ಯಾ ಬಂಧನ

ಬೆಂಗಳೂರು: ಸಹಾಯಕ ಪ್ರಾದ್ಯಾಪಕ ಹುದ್ದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರೋಪಿ ಸೌಮ್ಯಳನ್ನು ಮಲ್ಲೇಶ್ವರ ಪೊಲೀಸರು ಮೈಸೂರಿನಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗೆ ನಡೆದ ಭೂಗೋಳ ವಿಜ್ಞಾನ ಪರೀಕ್ಷೆಯ ಸುಮಾರು 18 ಪ್ರಶ್ನೆಗಳು ಸೌಮ್ಯ ಮೊಬೈಲ್ ಸಂಖ್ಯೆಯಿಂದ ವಿವಿಧ ಮೊಬೈಲ್‍ಗಳಿಗೆ ವಾಟ್ಸ್​ಆ್ಯಪ್‍ ಮೂಲಕ ಕಳಿಸಲಾಗಿತ್ತು. ಮಾರ್ಚ್ 14ರಂದು ಭೂಗೋಳ ವಿಜ್ಞಾನ ವಿಷಯದ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬೆಳಗ್ಗೆ 8.30ಕ್ಕೆ ವಾಟ್ಸ್​ಆ್ಯಪ್‍ ಮೂಲಕ 8-31ನಿಮಿಷಕ್ಕೆ ಆಕೆಯ ಮೊಬೈಲ್ ನಿಂದ ಕೈ ಬರಹದ ಪ್ರಶ್ನೆ ರವಾನೆ ಆಗಿದೆ. ಈ ದೂರಿನ ಸತ್ಯ ತಿಳಿಯಲು ತನಿಖೆ ನಡೆಸುವಂತೆ ದೂರು ನೀಡಲಾಗಿತ್ತು.

ಬೆಳಗ್ಗೆ 08-30 ರ ವೇಳೆಗೆ ಒಂದು ಪ್ರತ್ಯೇಕ ಮೊಬೈಲ್ ಸಂಖ್ಯೆಯಿಂದ ಪ್ರಶ್ನೆಗಳನ್ನು ಬೇರೆ ಬೇರೆ ನಂಬರ್‌ನ ವಾಟ್ಸಾಪ್‌ಗಳಿಗೆ ಕಳಸಲಾಯಿತು. ಈ ರೀತಿ ಕಳುಹಿಸಲಾದ 18 ಪ್ರಶ್ನೆಗಳು ಅದೇದಿನ ನಡೆದ ಪರೀಕ್ಷೆಯಲ್ಲಿ ಯಥಾವತ್ತಾಗಿ ಬಂದಿದ್ದವು. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟವಾಗಿದೆ. ಸೌಮ್ಯ ಬಳಿ ಇದ್ದ ಪ್ರಶ್ನೆಗಳು ಸೀರಿಯಲ್ ಆಗಿ ಇರಲಿಲ್ಲ. 18 ಪ್ರಶ್ನೆಗಳಲ್ಲಿ 11 ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿದ್ದವು. ಪ್ರಶ್ನೆಗಳು ಕೈ ಬರಹದಲ್ಲಿ ಇದ್ದಿದ್ದರಿಂದ ಅಷ್ಟು ಬೇಗ ಬರೆದುಕೊಳ್ಳಲು ಸಹ ಸಾಧ್ಯವಿಲ್ಲ ಪ್ರಶ್ನೆ ಪತ್ರಿಕೆ ತೀರಾ ಕಷ್ಟದ್ದಾಗಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೆಚ್ಚು ಸಮಯ ಬೇಕಾಗುತ್ತದೆ. ಆದ್ಧರಿಂದ ಪರೀಕ್ಷೆ ನಡೆಯುವ ಮುನ್ನವೇ ಸಹಾಯಕ ಪ್ರಾದ್ಯಾಪಕ ಹುದ್ದೆಗಳ ಭರ್ತಿಗೆ ₹40 ಲಕ್ಷ ಡೀಲ್ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪ ಮಾಡಿರುವುದು ಕೇಳಿ ಬಂದಿತ್ತು.

ಇದನ್ನೂ ಓದಿ| ಉಡುಪಿಯಲ್ಲಿ ಗ್ರಾ.ಪಂ. ಪಿಡಿಒ ಅಮಾನತು; ಅಧಿಕಾರಿಗಳ ಸಂಘದ ವಿರೋಧ

ಇದರ ಹಿಂದೆಯೇ ಇದೀಗ ಸಹಾಯಕ ಪ್ರಾಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನೂ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಅಭ್ಯರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಾಕ್ಷಿ ಸಮೇತ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಸಲ್ಲಿಸಿದ್ದರು. ಆದರೆ, ಈವರೆಗೆ ಪ್ರಾಧಿಕಾರದಿಂದ ಸಕರಾತ್ಮಕ ಸ್ಪಂದನೆ ಸಿಗದಿದ್ದ ಕಾರಣ, ಬೇಸತ್ತ ಅಭ್ಯರ್ಥಿಗಳು ನ್ಯಾಯ ಒದಗಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಇದಲ್ಲದೆ ಇಂದೂ ಕೂಡ ಹಲವರ ವಿಚಾರಣೆಗೆ ನೋಟಿಸ್ ಕಳಿಸಿದ್ದಾರೆ.

Exit mobile version