Site icon Vistara News

School Van | ಹುಬ್ಬಳ್ಳಿಯಲ್ಲಿ ಸ್ಕೂಲ್ ವ್ಯಾನ್‌‌ನ ರೇಡಿಯೇಟರ್ ಬ್ಲಾಸ್ಟ್; 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

hubli van blast

ಹುಬ್ಬಳ್ಳಿ: ಸ್ಕೂಲ್ ವ್ಯಾನ್‌‌ನ (School Van) ರೇಡಿಯೇಟರ್ ಸ್ಫೋಟಗೊಂಡ ಪರಿಣಾಮ ಒಳಗಿದ್ದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಬ್ಬಳ್ಳಿಯ ಗೋಕುಲ ರೋಡ್‌ನ ಸೆಂಟ್ರಲ್ ಎಕ್ಸೈಸ್ ಕಾಲೋನಿ ಸಮೀಪ ಘಟನೆ ನಡೆದಿದ್ದು, ಇವರೆಲ್ಲರೂ ಚೇತನಾ ಪಬ್ಲಿಕ್ ಶಾಲೆಗೆ ಸೇರಿದವರಾಗಿದ್ದಾರೆ. ಶಾಲೆಯಿಂದ ಮನೆಗೆ ವಾಪಸ್ ಬಿಡುವಾಗ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲವು ಮಕ್ಕಳ ಹಣೆಗೆ ಏಟಾಗಿದ್ದರೆ, ಮತ್ತೆ ಕೆಲವು ಮಕ್ಕಳ ಕಾಲು, ತೊಡೆ ಭಾಗಗಳು ಸುಟ್ಟಿವೆ. ಎಲ್ಲ ಮಕ್ಕಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

Exit mobile version