Site icon Vistara News

Karnataka Election: ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ; ಕೊನೆಯ ದಿನ ಕಸರತ್ತು

Priyanka Gandhi

Priyanka Gandhi

ಬೆಂಗಳೂರು/ಆನೇಕಲ್:‌ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election) ಪ್ರಚಾರದ ಕೊನೆಯ ಘಟಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಬಂದಿವೆ. ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾದರೂ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ಭಾನುವಾರವೇ ಅಬ್ಬರದ ಪ್ರಚಾರ ಕೊನೆಗೊಳಿಸಿದ್ದಾರೆ. ಅದರಲ್ಲೂ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾನುವಾರ ಸಾಲು ಸಾಲು ಸಮಾವೇಶ, ರ‍್ಯಾಲಿ, ರೋಡ್‌ ಶೋಗಳ ಮೂಲಕ ಜನರ ಮತ ಸೆಳೆಯಲು ಕೊನೆಯ ಹಂತದ ಕಸರತ್ತು ನಡೆಸಿದರು. ಸಹೋದರ-ಸಹೋದರಿಯು ರಾಜ್ಯದ ಹಲವೆಡೆ ಅಬ್ಬರದ ಪ್ರಚಾರ ಕೈಗೊಂಡರು.

ರಾಹುಲ್‌ ಗಾಂಧಿಗೆ ಉತ್ತಮ ಜನಬೆಂಬಲ

ರಾಹುಲ್‌ ಗಾಂಧಿ ಅವರು ಮೊದಲು ಬೆಂಗಳೂರು ನಗರ ಕ್ಷೇತ್ರದ ಆನೇಕಲ್‌ನಲ್ಲಿ ರೋಡ್‌ ಶೋ ಕೈಗೊಂಡರು. ಸಾವಿರಾರು ಜನ ರಾಹುಲ್‌ ಗಾಂಧಿ ಅವರಿಗೆ ಬೆಂಬಲ ನೀಡಿದರು. ಜನ ಹೂವಿನ ಮಳೆ ಸುರಿದರು. ಇದಾದ ಬಳಿಕ ಬೆಂಗಳೂರಿನ ಪುಲಿಕೇಶಿನಗರ ಹಾಗೂ ಶಿವಾಜಿ ನಗರದಲ್ಲಿ ರಾಹುಲ್‌ ಗಾಂಧಿ ಸಮಾವೇಶ ನಡೆಸಿದರು.

ಪ್ರಿಯಾಂಕಾ ಗಾಂಧಿ ಅಬ್ಬರ

ಪ್ರಿಯಾಂಕಾ ಗಾಂಧಿ ಕೂಡ ಕೊನೆಯ ಹಂತದ ಪ್ರಚಾರವನ್ನು ಯಶಸ್ವಿಯಾಗಿ, ಜನಬೆಂಬಲದೊಂದಿಗೆ ಮುಗಿಸಿದರು. ಮೊದಲು ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ಸಮಾವೇಶ ನಡೆಸಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ಕಾಂಗ್ರೆಸ್‌ ಸರ್ಕಾರದ ಗುರಿ, ಉದ್ದೇಶಗಳನ್ನು ಜನರಿಗೆ ಮನವರಿಕೆ ಮಾಡಿದರು. ಬೆಂಗಳೂರಿನ ಮಹದೇವಪುರದಲ್ಲಿ ರೋಡ್‌ ಶೋ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಹಾಗೂ ರೋಡ್‌ ಶೋ ಹಾಗೂ ಶಿವಾಜಿ ನಗರದಲ್ಲಿ ರಾತ್ರಿ ಸಾರ್ವಜನಿಕ ಸಭೆಯ ಮೂಲಕ ಮತಯಾಚನೆ ಮಾಡಿದರು.

ಇದನ್ನೂ ಓದಿ: Karnataka Election 2023: ಅಡಕೆ ಬೆಳೆಗಾರರಿಗೆ ಮೋಡಿ ಮಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಡೆಲಿವರಿ ಕೆಲಸಗಾರರೊಂದಿಗೆ ರಾಹುಲ್‌ ಗಾಂಧಿ ಸಂವಾದ

ರೋಡ್‌ ಶೋ, ಸಮಾವೇಶದ ಮಧ್ಯೆಯೂ ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಐಕಾನಿಕ್ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಅಸಂಘಟಿತ ಡೆಲಿವರಿ ಕಾರ್ಮಿಕರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಡೆಲಿವರಿ‌ ಕೆಲಸಗಾರರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಡೆಲಿವರಿ ಬಾಯ್‌ ಜತೆ ಸ್ಕೂಟರ್‌ನಲ್ಲಿ ತಿರುಗಾಡಿದ್ದು ಗಮನ ಸೆಳೆಯಿತು.

Exit mobile version