ಬೆಂಗಳೂರು, ಕರ್ನಾಟಕ: ರಾಯಚೂರು ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ. ಕೈ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿಜೆಪಿ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ವಿರುದ್ಧ 13,801 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ದದ್ದಲ್ ಅವರು ಒಟ್ಟಾರೆ 88694 ಮತಗಳನ್ನು ಪಡೆದುಕೊಂಡರೆ, ಸೋತ ಅಭ್ಯರ್ಥಿ ಹವಾಲ್ದಾರ್ ಪರವಾಗಿ 74893 ಮತಗಳು ಬಂದಿವೆ. ಜೆಡಿಎಸ್ ನರಸಿಂಹ್ ನಾಯಕ್ 4090 ಮತಗಳನ್ನು ಪಡೆದುಕೊಂಡಿದ್ದರು(Raichur Rural Election Results).
2023ರ ಚುನಾವಣೆಯ ಅಭ್ಯರ್ಥಿಗಳು
2018ರ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಬಸನಗೌಡ ದದ್ದಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಬಿಜೆಪಿ ಪಕ್ಷದಿಂದ ತಿಪ್ಪರಾಜ್ ಹವಾಲ್ದಾರ್ ಕಣದಲ್ಲಿದ್ದರೆ, ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹನಾಯಕ್ ಸ್ಪರ್ಧಿಸಿದ್ದರು.
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಕಲ್ಯಾಣ ಕರ್ನಾಟಕದ ರಾಯಚೂರ ಜಿಲ್ಲೆಯಲ್ಲಿ ರಾಯಚೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರವು ವಿಶಿಷ್ಟವಾಗಿದೆ. ಪರಿಶಿಸ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಯಾವಾಗಲೂ ಜಿದ್ದಾಜಿದ್ದಿ ಇರುತ್ತದೆ. 2018ರಲ್ಲಿ ಕಾಂಗ್ರೆಸ್‌ನ ಬಸವರಾಜ್ ದದ್ದಲ್ ಅವರು 66656 ಮತಗಳನ್ನು ಪಡೆದುಕೊಂಡು, ಬಿಜೆಪಿಯ ತಿಪ್ಪರಾಜು ಹವಾಲ್ದಾರ್ ವಿರುದ್ದ 9964 ಮತಗಳ ಅಂತರದಲ್ಲಿ ಗೆದ್ದಿದ್ದರು. ಇನ್ನು ಬಿಜೆಪಿ ಅಭ್ಯರ್ಥಿ 56692 ಮತಗಳನ್ನು ಪಡೆದುಕೊಂಡಿದ್ದರು. ಜೆಡಿಎಸ್‌ನ ರವಿಕುಮಾರ್ ಪಾಟೀಲ್ ಅವರು 34250 ಮತಗಳನ್ನು ತಮ್ಮದಾಗಿಸಿಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.