ರಾಯಚೂರು : ಸಹಾಯಕ ಕೃಷಿ ನಿರ್ದೇಶಕಿಯ (Raichur News) ದರ್ಪ ಪ್ರದರ್ಶನದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಜತೆ ದುರ್ವರ್ತನೆ ತೋರಿದ ಆರೋಪದಡಿ ಸಹಾಯಕ ನಿರ್ದೇಶಕಿ ಪ್ರಿಯಾಂಕರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಹಿಂದೆ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕರ ದೌಲತ್ತಿನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಸತ್ತಿದ್ದರು. ಕಛೇರಿಗೆ ಎಂಟ್ರಿ ನೀಡುವಾಗಲೇ ನಿರ್ದೇಶಕಿಯ ಶಿಷ್ಟಾಚಾರಗಳು ಶುರುವಾಗುತ್ತಿತ್ತು. ಕಛೇರಿ ಗೇಟ್‌ನಲ್ಲಿ ಹಾರ್ನ್ ಹಾಕಿ ತಕ್ಷಣ ಎಚ್ಚರಿಸುತ್ತಿದ್ದ ಲೇಡಿ, ಆಫೀಸ್ ಸಿಬ್ಬಂದಿ ಡೋರ್ ಓಪನ್ ಮಾಡಿದ ಬಳಿಕವೇ ನಿರ್ದೇಶಕಿ ಕೆಳಗೆ ಇಳಿಯುತ್ತಿದ್ದರು.
ಇದನ್ನೂ ಓದಿ | ವಿಸ್ತಾರ TOP 10 NEWS | ಸಿದ್ದು ವಿರುದ್ಧದ ಪ್ರತಿಭಟನೆಯಿಂದ ಸಿದ್ದಿವಿನಾಯಕನ ಪ್ರತಿಷ್ಠಾಪನೆವರೆಗಿನ ಸುದ್ದಿಗಳಿವು
ಒಂದು ವೇಳೆ ಡೋರ್ ಓಪನ್ ಮಾಡುವಲ್ಲಿ ವಿಳಂಬವಾದರೆ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈ ವಿಡಿಯೊ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಿರ್ದೇಶಕಿ ವಿರುದ್ಧ ಕ್ರಮ ಕೈಗೊಂಡು ಲೇಡಿಯನ್ನು ಅಮಾನತುಗೊಳಿಸಲಾಗಿದೆ. ಶಿಸ್ತು ಪ್ರಾಧಿಕಾರ ಹಾಗೂ ಕೃಷಿ ಆಯುಕ್ತ ಶರತ್.ಬಿ ಅವರಿಂದ ಆದೇಶ ಹೊರಡಿಸಿದೆ.
ಆದೇಶ ಪ್ರತಿಯಲ್ಲಿ ಏನಿದೆ?
ಆದೇಶ ಪ್ರತಿಯಲ್ಲಿ ಹಳೆ ಕೇಸ್ ಬಗ್ಗೆ ಉಲ್ಲೇಖವಾಗಿದೆ. ಈ ಹಿಂದೆ ದೇವದುರ್ಗ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿಯಾಗಿದ್ದರು ಪ್ರಿಯಾಂಕ. ಆಗ 19 ಡಿಸಿ ಬಿಲ್ ಗಳಲ್ಲಿ 4.6 ಲಕ್ಷ ರೂ. ಅಕ್ರಮ ಎಸಗಿದ್ದ ಆರೋಪ ಇತ್ತು. ಆ ಕೇಸ್‌ನಲ್ಲಿ ಇಲಾಖೆ ತನಿಖೆ ನಡೆಯುತ್ತಿದ್ದು, ತನಿಖೆ ವೇಳೆ ಪ್ರಿಯಾಂಕಾ ಅವರು ಗೈರು ಆರೋಪ ಕೇಳಿ ಬಂದಿತ್ತು. ಹಿರಿಯ ಅಧಿಕಾರಿಗಳ ಜತೆಗೂ ಉದ್ಧಟತನ ಪ್ರದರ್ಶಿಸಿರುವ ಬಗ್ಗೆಯೂ ಉಲ್ಲೇಖವಾಗಿದೆ.
ಇದನ್ನೂ ಓದಿ | ಶಿವರಾಜ್ ಪಾಟೀಲ್ ಮೂರ್ಖ ಎಂದ ಕಾಂಗ್ರೆಸ್, ಅವರು ಲೆಕ್ಕಕ್ಕಿಲ್ಲ ಎಂದ ಬಿಜೆಪಿ