Site icon Vistara News

Rain In Bangalore | ಮಿಥುನ್‌ ಮೃತದೇಹ ಹುಡುಕಲು ಬೋಟ್‌ ಬಳಕೆ, ಹೇಗೆ ನಡೀತಿದೆ ಕಾರ್ಯಾಚರಣೆ?

ಬೋಟ್‌ ಮೂಲಕ ಕಾರ್ಯಾಚರಣೆ

ಬೆಂಗಳೂರು : ಭಾರಿ ಮಳೆಗೆ ಕೆ.ಆರ್‌. ಪುರದ ಗಾಯತ್ರಿ ಬಡಾವಣೆಯ ಯುವಕ ಮಿಥುನ್‌ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಇದೀಗ ಸೀಗೆಹಳ್ಳಿ ಕೆರೆಯಲ್ಲಿ ಎನ್‌ಡಿಆರ್‌ಎಫ್‌ (NDRF) ಹಾಗೂ ಎಸ್‌ಡಿಆರ್‌ಎಫ್‌ (SDRF) ಮತ್ತು ಅಗ್ನಿಶಾಮಕ ಸಿಬ್ಬಂದಿ ಬೋಟ್‌ ಮೂಲಕ ಕೆರೆಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಶಿವಮೊಗ್ಗ ಮೂಲದ ಮಿಥುನ್‌ ಮೃತದೇಹ ಪತ್ತೆ ಮಾಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಸೀಗೆಹಳ್ಳಿ ಕೆರೆಯಲ್ಲಿ ಕಾರ್ಯಾಚರಣೆ

ಇದನ್ನೂ ಓದಿ | ಮಳೆಯ ಅಬ್ಬರ, ಕುಸಿಯಿತು ಶ್ರೀರಂಗಪಟ್ಟಣದ ಐತಿಹಾಸಿಕ ಬುರುಜು!

ನಾಲ್ಕೈದು ಎಕರೆಯ ವಿಸ್ತೀರ್ಣದಲ್ಲಿರುವ ಕೆರೆ ಸಂಪೂರ್ಣ ಕೊಳಚೆಯಾಗಿದ್ದು, ಗಿಡಗಳು ಬೆಳೆದಿವೆ. ಸದ್ಯ ಕೆರೆಗೆ ಮೃತದೇಹ ತೇಲಿ ಬಂದಿರಬಹುದೆಂದು ಶೋಧಕಾರ್ಯ ಮುಂದುವರಿದಿದೆ. ಅಲ್ಲದೆ ರಾಜಕಾಲುವೆಗಳಲ್ಲೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ | ಬೆಂಗಳೂರಲ್ಲಿ ಭಾರಿ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಗೋಡೆ ಕುಸಿದು ಮಹಿಳೆ ಬಲಿ

Exit mobile version