ಚಾಮರಾಜನಗರ: ಮಳೆಗಾಲದ ದೃಶ್ಯವೇ (Rain News) ಒಂದು ವೈಭವ. ಈ ಸಂದರ್ಭದಲ್ಲಿ ಹಸಿರಿನ ಮಡಿಲಲ್ಲಿ ಕಂಗೊಳಿಸುವ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಅಂತಹದ್ದೇ ಮನಮೋಹಕ ದೃಶ್ಯವೊಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಗೋಪಾಲಸ್ವಾಮಿ ಬೆಟ್ಟದ ಭಾಗದಲ್ಲಿ ಕಾಣಸಿಗುತ್ತಿದೆ. ಈಗ ಈ ಫೋಟೊಗಳು ವೈರಲ್ ಆಗಿದೆ.
ಹಂಗಳ ಗ್ರಾಮದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ಗೋಪಾಲಸ್ವಾಮಿ ಬೆಟ್ಟದ ಭಾಗದಲ್ಲಿ ಕೆರೆ ತುಂಬಿಹರಿಯುತ್ತಿದೆ. ಕೆಲವೊಂದು ಕಡೆ ಮಳೆ ಸುರಿದು ಅತಿವೃಷ್ಟಿ ಉಂಟಾಗಿ ಸಮಸ್ಯೆಯಾಗಿದೆ. ಆದರೆ, ಈ ಗ್ರಾಮದಲ್ಲಿ ನೀರಿನ ಹರಿವಿನಲ್ಲಿ ಏರಿಕೆ ಕಂಡಿದ್ದು, ದೃಶ್ಯವು ಕಣ್ಮನ ಸೆಳೆಯುತ್ತಿದೆ.
ಕೊಳವೆ ಬಾವಿಗಳು ಬಿಸಿಲಿನಿಂದ ಬತ್ತುಹೋಗಿದ್ದವು. ಈಗ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿದೆ. ಮಳೆ ನೀರಿನಿಂದ ಕೆರೆ ಕೋಡಿ ಬಿದ್ದು ಮತ್ತೊಂದು ಕೆರೆಗೆ ಹರಿದು ಹೋಗುತ್ತಿದ್ದು, ಸಂಕಷ್ಟದಲ್ಲಿದ್ದ ರೈತರು ಸಂತಸದಲ್ಲಿದ್ದಾರೆ.
ಇದನ್ನೂ ಓದಿ| Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!