Site icon Vistara News

Ram Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ

Halal Meat Products

ಬೆಂಗಳೂರು: ಶ್ರೀರಾಮ ನವಮಿ (Ram Navami 2023) ಹಬ್ಬದ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಮಾರ್ಚ್‌ 30ರ ಗುರುವಾರ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಪಾಲಿಕೆಯ ಜಂಟಿ ನಿರ್ದೇಶಕರು (ಪಶುಪಾಲನೆ) ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿಯ ಆದೇಶ ಪ್ರತಿ

ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ, ಶ್ರೀರಾಮ ರಥೋತ್ಸವ

ಶಿರಸಿ: ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ (Sri Rama Navami Utsava) ಹಾಗೂ ಶ್ರೀರಾಮ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ವಿಷ್ಣು ಹರಿಕಾಂತ ತಿಳಿಸಿದರು.

ಶ್ರೀ ಸದ್ಗರು ನಿತ್ಯಾನಂದ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮಾ.29 ಹಾಗೂ 30ರಂದು ಪ್ರತಿದಿನ ಬೆಳಗ್ಗೆ 7 ಗಂಟೆಗೆ ಅಖಂಡ ಶ್ರೀರಾಮ ತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಮಾ.30ರ ಬೆಳಗ್ಗೆ 11.30 ರಿಂದ ಶ್ರೀರಾಮ ನವಮಿ ಉತ್ಸವದಲ್ಲಿ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮಾ.31 ರಂದು ಶ್ರೀರಾಮ ರಥೋತ್ಸವಕ್ಕೆ ಚಾಲನೆ ನಿಡಲಾಗುತ್ತದೆ‌. ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ ನಡೆಯಲಿದ್ದು, ಸಂಜೆ 5.30ಕ್ಕೆ ರಥಾರೋಹಣ ಪೂಜೆ ಹಾಗೂ ರಥಾನಯನ ನೆರವೇರಲಿದೆ” ಎಂದರು.

ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ದೋಷಿ; ಯುಪಿ ಕೋರ್ಟ್

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ರಾಮ ಎಸ್. ಮೊಗೇರ್, ನಿಂಗಪ್ಪ ಕೊಂಡ್ಲಿ, ಪಾಂಡುರಂಗ ಪಾಟೀಲ್, ರವಿ ತಂಡನ್ ಉಪಸ್ಥಿತರಿದ್ದರು.

Exit mobile version