Ban on slaughter of animals and sale of meat in Bengaluru on March 30 BBMP orderRam Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ - Vistara News

ಕರ್ನಾಟಕ

Ram Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ

BBMP: ಬಿಬಿಎಂಪಿ ವ್ಯಾಪ್ತಿಯಲ್ಲಿ ಶ್ರೀರಾಮ ನವಮಿ ಹಬ್ಬದ (Ram Navami 2023) ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಮಾರ್ಚ್‌ 30ರಂದು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

VISTARANEWS.COM


on

Halal Meat Products
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀರಾಮ ನವಮಿ (Ram Navami 2023) ಹಬ್ಬದ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಮಾರ್ಚ್‌ 30ರ ಗುರುವಾರ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಪಾಲಿಕೆಯ ಜಂಟಿ ನಿರ್ದೇಶಕರು (ಪಶುಪಾಲನೆ) ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿಯ ಆದೇಶ ಪ್ರತಿ

ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ, ಶ್ರೀರಾಮ ರಥೋತ್ಸವ

ಶಿರಸಿ: ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ (Sri Rama Navami Utsava) ಹಾಗೂ ಶ್ರೀರಾಮ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ವಿಷ್ಣು ಹರಿಕಾಂತ ತಿಳಿಸಿದರು.

ಶ್ರೀ ಸದ್ಗರು ನಿತ್ಯಾನಂದ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮಾ.29 ಹಾಗೂ 30ರಂದು ಪ್ರತಿದಿನ ಬೆಳಗ್ಗೆ 7 ಗಂಟೆಗೆ ಅಖಂಡ ಶ್ರೀರಾಮ ತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಮಾ.30ರ ಬೆಳಗ್ಗೆ 11.30 ರಿಂದ ಶ್ರೀರಾಮ ನವಮಿ ಉತ್ಸವದಲ್ಲಿ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮಾ.31 ರಂದು ಶ್ರೀರಾಮ ರಥೋತ್ಸವಕ್ಕೆ ಚಾಲನೆ ನಿಡಲಾಗುತ್ತದೆ‌. ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ ನಡೆಯಲಿದ್ದು, ಸಂಜೆ 5.30ಕ್ಕೆ ರಥಾರೋಹಣ ಪೂಜೆ ಹಾಗೂ ರಥಾನಯನ ನೆರವೇರಲಿದೆ” ಎಂದರು.

ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ದೋಷಿ; ಯುಪಿ ಕೋರ್ಟ್

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ರಾಮ ಎಸ್. ಮೊಗೇರ್, ನಿಂಗಪ್ಪ ಕೊಂಡ್ಲಿ, ಪಾಂಡುರಂಗ ಪಾಟೀಲ್, ರವಿ ತಂಡನ್ ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಇಂದು ಬಿವೈ ರಾಘವೇಂದ್ರ, ಗದ್ದಿಗೌಡರ್‌, ಉಮೇಶ್‌ ಜಾಧವ್ ನಾಮಪತ್ರ; ಬಿಜೆಪಿ ಶಕ್ತಿ ಪ್ರದರ್ಶನ

Lok Sabha Election 2024: ಇಂದು ನಾಮಪತ್ರ ಸಲ್ಲಿಸುವ ಹಿನ್ನೆಲೆ ನಿನ್ನೆ ವಿವಿಧ ದೇವಸ್ಥಾನಗಳಿಗೆ ರಾಘವೇಂದ್ರ ಭೇಟಿ ನೀಡಿದ್ದರು. ಇಂದು 11:45ರ ಸುಮಾರಿಗೆ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

VISTARANEWS.COM


on

Lok Sabha Election 2024 by raghavendra pc gaddigoudar umesh jadhav
Koo

ಶಿವಮೊಗ್ಗ/ಬಾಗಲಕೋಟೆ: ಲೋಕಸಭೆ ಚುನಾವಣೆ (Lok Sabha Election 2024) ಕಣದಲ್ಲಿರುವ ಶಿವಮೊಗ್ಗದ (Shimogga) ಬಿಜೆಪಿ ಅಭ್ಯರ್ಥಿ (BJP Candidate) ಬಿ.ವೈ.ರಾಘವೇಂದ್ರ (BY Raghavendra), ಬಾಗಲಕೋಟೆಯ (Bagalakote) ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ (PC Gaddigoudar) ಹಾಗೂ ಕಲಬುರಗಿಯ ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್ ಇಂದು ತಮ್ಮ ನಾಮಪತ್ರಗಳನ್ನು (Nomination) ಸಲ್ಲಿಸಲಿದ್ದಾರೆ. ಮೂರೂ ಕಡೆ ಬಿಜೆಪಿ ಶಕ್ತಿಪ್ರದರ್ಶನ ನಡೆಯಲಿದೆ.

ಶಿವಮೊಗ್ಗದಲ್ಲಿ ರಾಘವೇಂದ್ರ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ರೋಡ್ ಶೋನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಬಿಜೆಪಿ ಬೃಹತ್ ಮೆರವಣಿಗೆ ನಡೆಸಲಿದೆ. ಮೆರವಣಿಗೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.

ಇಂದು ನಾಮಪತ್ರ ಸಲ್ಲಿಸುವ ಹಿನ್ನೆಲೆ ನಿನ್ನೆ ವಿವಿಧ ದೇವಸ್ಥಾನಗಳಿಗೆ ರಾಘವೇಂದ್ರ ಭೇಟಿ ನೀಡಿದ್ದರು. ಇಂದು 11:45ರ ಸುಮಾರಿಗೆ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ವಿರುದ್ಧ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ಬಂಡಾಯದ ಬಾವುಟ ಹಾರಿಸಿದ್ದು, ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಲವು ಬಿಜೆಪಿ ನಾಯಕರು ಮನವೊಲಿಸಲು ಪ್ರಯತ್ನಿಸಿದ್ದು, ಈಶ್ವರಪ್ಪ ಒಪ್ಪಿಲ್ಲ.

ಗದ್ದಿಗೌಡರ್‌ ಶಕ್ತಿಪ್ರದರ್ಶನ

ಬಾಗಲಕೋಟೆ: ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಬಿಜೆಪಿ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನಗರದ ಬಸವೇಶ್ವರ ಕಾಲೇಜು ಆವರಣದಲ್ಲಿರುವಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಬಿಜೆಪಿ ಮೆರವಣಿಗೆ ಆರಂಭವಾಗಲಿದ್ದು, ಬಸವೇಶ್ವರ ವೃತ್ತ, ರೈಲ್ವೆ ನಿಲ್ದಾಣ, ರೋಟರಿ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಡಿಸಿ ಕಚೇರಿವರೆಗೂ ನಡೆಯಲಿದೆ.

ಬಳಿಕ ಬಾಗಲಕೋಟೆ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಜಾನಕಿ ಕೆ.ಎಮ್. ಅವರಿಗೆ ಪಿ.ಸಿ. ಗದ್ದಿಗೌಡರ್ ನಾಮಪತ್ರ ಸಲ್ಲಿಸಲಿದ್ದಾರೆ. ಕೇಸರಿ ಕಲಿಗಳ ದುಂದುಭಿ ಮೊಳಗಲಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಾಲಚಂದ್ರ ಜಾರಕಿಹೊಳಿ, ದೊಡ್ಡನಗೌಡ ಪಾಟೀಲ್ ಕುಷ್ಟಗಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

ಸತತ ನಾಲ್ಕು ಬಾರಿ ಗೆದ್ದು ಬೀಗಿರುವ ಗದ್ದಿಗೌಡರ್, ಐದನೇ ಬಾರಿ ಮತ್ತೆ ಗೆಲುವಿನ ವಿಶ್ವಾಸದಲ್ಲಿ ಸ್ಪರ್ಧಿಸಿದ್ದಾರೆ. ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಉಮೇಶ್‌ ಜಾಧವ್‌ ನಾಮಪತ್ರ

ಕಲಬುರಗಿ: ಕಲಬುರಗಿಯಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ, ಅರವಿಂದ ಲಿಂಬಾವಳಿ, ವಿ.ರಾಜೀವ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆಯಾಗಲಿದೆ.

ಕಲಬುರ್ಗಿ ನಗರದ ನಗರೇಶ್ವರ ಶಾಲೆಯಿಂದ ಜಗತ ವೃತ್ತದ ವರೆಗೆ ಬಿಜೆಪಿ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಕಚೇರಿಯ ವರೆಗೆ ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಬಳಿಕ ಚುನಾವಣಾಧಿಕಾರಿ ಫೌಜಿಯಾ‌‌ ತರನ್ನುಮ್ ಅವರಿಗೆ ನಾಮಪತ್ರ ಸಲ್ಲಿಕೆಯಾಗಲಿದೆ.

ಇದನ್ನೂ ಓದಿ: Lok Sabha Election 2024: ಜಯ ಘೋಷದ ಮಧ್ಯೆ ಪ್ರಲ್ಹಾದ್‌ ಜೋಶಿ ನಾಮಪತ್ರ ಸಲ್ಲಿಕೆ

Continue Reading

ಕ್ರೈಂ

Children Death: ಅವಳಿ ಮಕ್ಕಳಿಗೆ ಮೃತ್ಯುವಾದ ಐಸ್‌ಕ್ರೀಂ; ಸ್ಮೋಕ್‌ ಬಿಸ್ಕೆಟ್‌ ತಿಂದು ಮಗು ಆಸ್ಪತ್ರೆಪಾಲು

Children Death: ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ತಾಯಿ ಮತ್ತು ಮಕ್ಕಳು ಖರೀದಿಸಿ ತಿಂದಿದ್ದರು. ನಂತರ ಅಸ್ವಸ್ಥರಾಗಿದ್ದರು.

VISTARANEWS.COM


on

twin children death
Koo

ಮಂಡ್ಯ: ಬೇಸಿಗೆಯಲ್ಲಿ ಸ್ವಚ್ಛತೆಯಿಲ್ಲದ ಬೀದಿ ಬದಿಯ ಆಹಾರ (Road side food) ಸೇವಿಸಿ ಅಸ್ಸಸ್ಥಗೊಳ್ಳುವ ಹಾಗೂ ಮೃತಪಡುವ ಪ್ರಕರಣಗಳು ಕಂಡುಬರುತ್ತಿವೆ. ಮಂಡ್ಯ (Mandy news) ಹಾಗೂ ದಾವಣಗೆರೆಯಲ್ಲಿ (Davanagere news) ಇವು ವರದಿಯಾಗಿವೆ. ಐಸ್ ಕ್ರೀಂ (Ice cream) ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಈ ದಾರುಣ ಘಟನೆ ನಡೆದಿದೆ.

ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ತಾಯಿ ಮತ್ತು ಮಕ್ಕಳು ಖರೀದಿಸಿ ತಿಂದಿದ್ದರು. ನಂತರ ಅಸ್ವಸ್ಥರಾಗಿದ್ದರು. ಮಕ್ಕಳು ಮನೆಯಲ್ಲಿ ಸಾವಿಗೀಡಾದರೆ, ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮಕ್ಕಳ ಮೃತ ದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಕೊಡಿಸಲಾಗುತ್ತಿದೆ. ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ನಡೆಯುತ್ತಿದೆ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸ್ಮೋಕ್‌ ಬಿಸ್ಕೆಟ್‌ ತಿಂದು ಮಗು ಅಸ್ವಸ್ಥ

ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾನೆ. ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್‌ನಲ್ಲಿ ಘಟನೆ ನಡೆದಿದೆ. ಮಕ್ಕಳ ಮನರಂಜನೆಗಾಗಿ ನಡೆಯುತ್ತಿರುವ ಎಕ್ಸಿಬಿಷನ್‌ನ ಸ್ಟಾಲ್ ಒಂದರಲ್ಲಿ ಸ್ಮೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಅದನ್ನು ಏಕಾಏಕಿ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ.

ಸ್ಮೋಕ್ ಬಿಸ್ಕೆಟ್ ಸ್ಟಾಲ್ ದೊಡ್ಡವರಿಂದ ಚಿಕ್ಕ‌ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ‌ ಚಿಕ್ಕ ಬಿಸ್ಕೇಟ್ ನೀಡಲಾಗುತ್ತಿತ್ತು. ಹೀಗೆ ಕೊಟ್ಟ ಬಿಸ್ಕೇಟ್ ಅನ್ನು ಮಗು ಒಂದೇ ಸಲ ಬಾಯಿಗೆ ಹಾಕಿಕೊಂಡಿದೆ. ನಂತರ ನುಂಗಲೂ ಆಗದೇ ಉಗಿಯಲೂ ಆಗದೇ ಕಷ್ಟಪಟ್ಟಿದೆ.

ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಘಟನೆಯಿಂದ ಆಕ್ರೋಶಗೊಂಡ ಪೋಷಕರು ಎಕ್ಸಿಬಿಷನ್‌ನಲ್ಲಿ ಹಾಕಲಾಗಿದ್ದ ಸ್ಟಾಲ್ ಅನ್ನು ಕಿತ್ತು ಬಿಸಾಕಿದ್ದಾರೆ. ಇಂತಹ ಸ್ಮೋಕ್ ಬಿಸ್ಕೆಟ್ ಅನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ಹರಿಬಿಟ್ಟಿದ್ದಾರೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.

ಇದನ್ನೂ ಓದಿ: Kids Care: ಪ್ರಯಾಣದ ವೇಳೆ ಮಕ್ಕಳು ಅಸ್ವಸ್ಥರಾಗದಂತೆ ನೋಡಿಕೊಳ್ಳಲು ಹೀಗೆ ಮಾಡಿ

Continue Reading

ಕ್ರೈಂ

Jai Shree Ram slogan: ರಾಮಭಕ್ತರ ಮೇಲೆ ಹಲ್ಲೆ ಮಾಡಿದ 4 ಮಂದಿಯ ಬಂಧನ, ಇಂದು ಬಿಜೆಪಿ ಪ್ರತಿಭಟನೆ

Jai Shree Ram slogan: ಗಾಂಜಾ ನಶೆಯಲ್ಲಿ ಕಾರು ಅಡ್ಡ ಹಾಕಿ ಯುವಕರು ಗಲಾಟೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಯುವಕರು ಗಾಂಜಾ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.

VISTARANEWS.COM


on

jai shree ram assault case
Koo

ಬೆಂಗಳೂರು: ‘ಜೈ ಶ್ರೀರಾಮ್‌’ ಘೋಷಣೆ (Jai Shree Ram slogan) ಕೂಗಿದ್ದಕ್ಕೆ ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣಕ್ಕೆ (Assault Case) ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು (Culprits) ಪೊಲೀಸರು ಬಂಧಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಿಂದು ಯುವಕರ (Hindu youth) ಮೇಲೆ ಬುಧವಾರ ಸಂಜೆ ಹಲ್ಲೆ ಮಾಡಿದ್ದವರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಫರ್ಮಾನ್, ಎ2 ಸಮೀರ್ ಹಾಗೂ ಮತ್ತಿಬ್ಬರನ್ನು ಬಂಧಿಸಲಾಗಿದೆ. ಒಟ್ಟು ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

“ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡ ಮಾಡಲಾಗಿದೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿರೋದು ಗೊತ್ತಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಪ್ರಮುಖ ಆರೋಪಿ ಫರ್ಮಾನ್. ತನಿಖೆ ಮುಂದುವರೆದಿದೆ. ಮತ್ತೆ ಯಾರಾದರೂ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸಲಾಗುತ್ತಿದೆ” ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿಕೆ ನೀಡಿದ್ದಾರೆ.

“ಆರೋಪಿಗಳು ಬೈಕ್‌ನಲ್ಲಿ ಹೋಗುತ್ತಿರಬೇಕಾದರೆ ಕಾರನ್ನ ಗಮನಿಸಿದ್ದಾರೆ. ಕಾರಲ್ಲಿ ಬಾವುಟ ಹಿಡಿದು ಹೋಗ್ತಿರೋದು ನೋಡಿ ವಾಪಸ್ಸು ಬಂದಿದ್ದಾರೆ. ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ರಾ ಯುವಕರು?

ಗಾಂಜಾ ನಶೆಯಲ್ಲಿ ಕಾರು ಅಡ್ಡ ಹಾಕಿ ಯುವಕರು ಗಲಾಟೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಯುವಕರು ಗಾಂಜಾ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.

ಗುರುವಾರ ಬೆಳಗ್ಗೆ ವಿದ್ಯಾರಣ್ಯಪುರ ಠಾಣೆ ಎದುರು ಪ್ರತಿಭಟನೆ

ವಿದ್ಯಾರಣ್ಯಪುರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ, ಹಲ್ಲೆಗೊಳಗಾದ ಯುವಕರ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ. ಈ ವೇಳೆ ಘಟನೆ ಖಂಡಿಸಿ ಗುರುವಾರ (ಏ.18) ಬೆಳಗ್ಗೆ 10 ಗಂಟೆಗೆ ವಿದ್ಯಾರಣ್ಯಪುರ ಪೋಲಿಸ್ ಠಾಣೆ ಮುಂಭಾಗ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಸಂಸದೆ ಹೇಳಿದ್ದಾರೆ.

ಯಾರೇ ಆಗಲಿ ಚುನಾವಣೆ ಸಂದರ್ಭದಲ್ಲಿ ಈ ರೀತಿ ಗಲಭೆ ಹೆಚ್ಚಿಸುವ ಪ್ರಯತ್ನ ಮಾಡಬಾರದು. ಅದೂ ನಮ್ಮ ಕ್ಷೇತ್ರದಲ್ಲಿ‌ ಕೆಲವರ ಕುಮ್ಮಕ್ಕಿನಿಂದ ಗಲಭೆ ಮಾಡಿರಬಹುದು. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಸಹ ಇರಬಹುದು. ಪೊಲೀಸರು ಈ ಪ್ರಕರಣದಲ್ಲಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಕಮೀಷನರ್‌ಗೆ ಮನವಿ ಮಾಡ್ತೀನಿ. ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ಏನಿದು ಪ್ರಕರಣ?

ಬುಧವಾರ ಸಂಜೆ ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ (Jai Shri Ram Slogan) ಕಾರಿನಲ್ಲಿ ಹೋಗುತ್ತಿದ್ದ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದರು. ವಿದ್ಯಾರಣ್ಯಪುರದ ಚಿಕ್ಕ ಬೆಟ್ಟಳ್ಳಿ ಮಸೀದಿ ಬಳಿ ಘಟನೆ ನಡೆದಿತ್ತು. ರಾಮನವಮಿ (Ram Navami) ಹಿನ್ನೆಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಹಿಂದು ಯುವಕರು ಕಾರಿನಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲಾಗಿತ್ತು.

ಶ್ರೀ ರಾಮನವಮಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹಿಂದು ಯುವಕರು ತೆರಳುತ್ತಿದ್ದಾಗ, ಜೈ ಶ್ರೀರಾಮ್ ಎಂದು ಕೂಗಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಮುಸ್ಲಿಂ ಯುವಕರು, “ಜೈ ಶ್ರೀರಾಮ್‌ ಹೇಳಬಾರದು, ಅಲ್ಲಾಹ್ ಅಂತ ಹೇಳಬೇಕು” ಎಂದು ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೈಕ್‌ನಲ್ಲಿ ಬಂದಿದ್ದ ಯುವಕರು, ಜೈ ಶ್ರೀ ರಾಮ್ ಇಲ್ಲಾ… ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿದ್ದರು. ಅಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಇದೇ ವೇಳೆ ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡುತ್ತೀವಾ ಎಂದು ಹಿಂದು ಯುವಕರು ಪ್ರಶ್ನೆ ಮಾಡಿದ್ದರು.

ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು

ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ನೇಹಿತರಾದ ವಿನಾಯಕ ಮತ್ತು ರಾಹುಲ್ ಜತೆ ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದೆ. ಕಾರಿನ ಮುಂದೆ ಶ್ರೀರಾಮನ ಧ್ವಜ ಕಟ್ಟಿದ್ದನ್ನು ನೋಡಿದ ಇಬ್ಬರು ಮುಸ್ಲಿಂ ಯುವಕರು, ನಮ್ಮ ಬಳಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅಲ್ಲಾ ಹು ಅಕ್ಬರ್” ಎಂದು ಕೂಗಬೇಕು ಎಂದು ಒತ್ತಾಯಿಸಿದರು. ನಾವು ಹಾಗೆ ಕೂಗುವುದಿಲ್ಲವೆಂದು ಹೇಳಿದಾಗ, ನಮ್ಮ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ರಾಹುಲ್ ತಲೆಗೆ ಪೆಟ್ಟು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಹೇಗೋ ನಾವು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ | Road Accident: ವಾಟರ್‌ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೈಕ್‌ ಹಿಂಬದಿ ಸವಾರ ಸಾವು; ಬೆಚ್ಚಿ ಬೀಳಿಸುವ ಅಪಘಾತದ ದೃಶ್ಯ!

Continue Reading

ಕರ್ನಾಟಕ

Karnataka Weather: ಇಂದು ದಕ್ಷಿಣ ಕನ್ನಡ, ಬೆಳಗಾವಿ ಸೇರಿ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಮಳೆ!

Karnataka Weather: ಏ.18 ರಿಂದ 20 ಏಪ್ರಿಲ್ ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗುವ (Rain fall) ಸಾಧ್ಯತೆಯಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ಏಪ್ರಿಲ್ 18ರಂದು ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಏಪ್ರಿಲ್ 18 ರಿಂದ 21 ರವರೆಗೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ಜೊತೆಗೆ ಮಾರುತಗಳು ಬಲವಾಗಿ ಬೀಸುವ ಸಾಧ್ಯತೆಯಿದೆ. ಏಪ್ರಿಲ್ 19ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಇದೇ ರೀತಿಯ ಸ್ಥಿತಿ ಇರಲಿದೆ.

ಇದನ್ನೂ ಓದಿ | Karnataka Weather : ರಭಸವಾದ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ; ಇನ್ನೊಂದು ವಾರ ಈ ಜಿಲ್ಲೆಗಳಿಗೆ ಅಲರ್ಟ್‌

ಏ.23ರವರೆಗೆ ಮುಂದುವರಿಯಲಿದೆ ಮಳೆ

ಏ.19ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು & ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮತ್ತು ಬೀದರ್, ಗದಗ, ಕಲಬುರ್ಗಿ, ರಾಯಚೂರು & ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಅದೇ ರೀತಿ ಏ. 20ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಏ. 21ರಂದು ಬೆಳಗಾವಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
22ನೇ ಏಪ್ರಿಲ್ 2024 : ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಏ. 23ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ತಾಪಮಾನದ ಮುನ್ಸೂಚನೆ

ಏ.19 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಗರಿಷ್ಠ ತಾಪಮಾನವು ಕ್ರಮೇಣ 2-3°C ಯಷ್ಟು ಏರುತ್ತದೆ.

ಇದನ್ನೂ ಓದಿ | Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಏ.19ರವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 24 ಗಂಟೆಗಳು ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.
ಮುಂದಿನ 48 ಗಂಟೆಗಳು ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading
Advertisement
Nikhil Siddhartha reveals his son name
ಟಾಲಿವುಡ್3 mins ago

Nikhil Siddhartha: ಮಗನ ಹೆಸರನ್ನು ರಿವೀಲ್‌ ಮಾಡಿದ ʻಕಾರ್ತಿಕೇಯʼ ಸಿನಿಮಾ ಖ್ಯಾತಿಯ ನಟ!

T20 World Cup
ಕ್ರೀಡೆ5 mins ago

T20 World Cup: ಟಿ20 ವಿಶ್ವಕಪ್​ನಲ್ಲಿ ಈ ಆಟಗಾರರಿಗೆ ಅವಕಾಶ ಸಿಗುವುದು ಡೌಟ್​

Fact Check
Fact Check6 mins ago

Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!

Kannada New Movie nalkane ayama movie
ಸ್ಯಾಂಡಲ್ ವುಡ್39 mins ago

Kannada New Movie: ʻಮಾಸ್ಟರ್‌ ಆನಂದ್‌ʼ ಮಗಳ ಮೊದಲ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ!

MS Dhoni
ಕ್ರೀಡೆ40 mins ago

MS Dhoni: ಧೋನಿ ಐಪಿಎಲ್​ ನಿವೃತ್ತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸುರೇಶ್​ ರೈನಾ

Modi Biden
ದೇಶ44 mins ago

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Veera Dheera Sooran Title Teaser OUT
ಕಾಲಿವುಡ್1 hour ago

Veera Dheera Sooran: ಚಿಯಾನ್ ವಿಕ್ರಮ್ 62ನೇ ಸಿನಿಮಾದ ಟೈಟಲ್‌ ಟೀಸರ್‌ ಔಟ್‌!

Lok Sabha Election 2024 by raghavendra pc gaddigoudar umesh jadhav
Lok Sabha Election 20241 hour ago

Lok Sabha Election 2024: ಇಂದು ಬಿವೈ ರಾಘವೇಂದ್ರ, ಗದ್ದಿಗೌಡರ್‌, ಉಮೇಶ್‌ ಜಾಧವ್ ನಾಮಪತ್ರ; ಬಿಜೆಪಿ ಶಕ್ತಿ ಪ್ರದರ್ಶನ

IPL 2024 Points Table
ಕ್ರೀಡೆ1 hour ago

IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

Ram Navami
ದೇಶ1 hour ago

Ram Navami: ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ಸ್ಫೋಟ, ಹಿಂದುಗಳಿಗೆ ಕಲ್ಲೇಟು!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌