Site icon Vistara News

Child Death : ಲಸಿಕೆ ಹಾಕಿಸಿದ ಬೆನ್ನಲ್ಲೇ ಒಂದುವರೆ ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯ?

Child Death Vaccination

ರಾಮನಗರ: ಕೇವಲ ಒಂದೂವರೆ ತಿಂಗಳ ಪುಟ್ಟ ಮಗುವೊಂದು (one and half Month old Child dead) ಲಸಿಕೆ ಹಾಕಿಸಿದ ಬಳಿಕ ಮೃತಪಟ್ಟ ಘಟನೆ (Child death) ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ (Medical negligence alleged) ಈ ಸಾವು ಸಂಭವಿಸಿದೆ ಎಂದು ಪೋಷಕರು ಆಕ್ಷೇಪಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೊದಲ ಬಾರಿಗೆ ಲಸಿಕೆ (death after Vaccination) ಹಾಕಿಸಿದ ಬಳಿಕ ದುರಂತ ನಡೆದಿದೆ. ಮೋಹನ್ – ಸ್ಫೂರ್ತಿ ದಂಪತಿಯ ಒಂದೂವರೆ ತಿಂಗಳ ಗಂಡು ಮಗುವಿಗೆ ಮಂಗಳವಾರ ಬೆಳಗ್ಗೆ ದೊಡ್ಡಮಳೂರು ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಿಸಲಾಗಿತ್ತು. ಮಕ್ಕಳಿಗೆ ಒಂದುವರೆ ತಿಂಗಳಿಗೆ ಮೊದಲ ವ್ಯಾಕ್ಸಿನ್‌ ಹಾಕಲಾಗುತ್ತದೆ. ಮೂರು ಲಸಿಕೆಗಳನ್ನು ಏಕಕಾಲದಲ್ಲಿ ನೀಡಲಾಗುತ್ತದೆ. ಹಾಗೆ ವ್ಯಾಕ್ಸಿನ್‌ ನೀಡಿದ ಬಳಿಕ ಮಗು ಸಾವನ್ನಪ್ಪಿದೆ.

ವೈದ್ಯರು ಮಗುವಿಗೆ ಸೂಕ್ತ ಆರೋಗ್ಯ ತಪಾಸಣೆ ಮಾಡದೇ ವ್ಯಾಕ್ಸಿನ್ ನೀಡಿದ್ದರಿಂದಲೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಮಗುವನ್ನು ಕಳೆದುಕೊಂಡ ಮನೆಯಲ್ಲಿ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

ಕುಟುಂಬಸ್ಥರ ಆರೋಪದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮಗುವನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ : Child death : ಪ್ರಿಸ್ಕೂಲ್‌ನ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಮಗು ಸಾವು

ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲೂ ಒಂದು ಮಗು ಮೃತಪಟ್ಟಿತ್ತು

ಲಸಿಕೆ ಪಡೆದ ಬಳಿಕ ಮಕ್ಕಳು ಸಾವನ್ನಪ್ಪುವ ಘಟನೆಗಳು ಅಲ್ಲಲ್ಲಿ ಆಗಾಗ ನಡೆದಿದೆ. ಹುಬ್ಬಳ್ಳಿಯ ಉಣಕಲ್‌ನಲ್ಲಿ ಕಳೆದ ಡಿಸೆಂಬರ್‌ 21ರಂದು ಧ್ರುವ ಎನ್ನುವ ಬಾಲಕ ಕೂಡಾ ಇದೇ ರೀತಿ ಮೃತಪಟ್ಟಿದ್ದ. ಡಿಸೆಂಬರ್‌ 20ರಂದು ಲಸಿಕೆ ನೀಡಲಾಗಿದ್ದು, ಡಿಸೆಂಬರ್‌ 21ರಂದು ಏಕಾಏಕಿಯಾಗಿ ಮಗು ಮೃತಪಟ್ಟಿದೆ. ಧ್ರುವ ಉಣಕಲ್‌ನಲ್ಲಿರುವ ಅಜ್ಜಿ ಮನೆಯಲ್ಲಿದ್ದು ಅಲ್ಲೇ ಲಸಿಕೆ ನೀಡಲಾಗಿತ್ತು. ಐದು ಲಸಿಕೆಗಳ ಪೈಕಿ ಮೂರನ್ನು ಇಂಜೆಕ್ಷನ್‌ ಮೂಲಕ ಮತ್ತು ಎರಡನ್ನು ಬಾಯಿ ಮೂಲಕ ನೀಡಲಾಗಿತ್ತು.

ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದ ಧ್ರುವ

ಲಸಿಕೆ ಹಾಕಿಸಿದ ಬಳಿಕ ಜ್ವರ ಬರಬಹುದು, ಜ್ವರ ಬಂದರೆ ಈ ಮಾತ್ರೆಯನ್ನು ನಾಲ್ಕು ಭಾಗ ಮಾಡಿ ಒಂದು ಭಾಗ ಕೊಡಿ ಎಂದು ಸೂಚಿಸಲಾಗಿತ್ತು. ಅದರಂತೆಯೇ ಮಗುವಿಗೆ ಜ್ವರ ಬಂದಿತ್ತು. ಮನೆಯವರು ಮೂರು ಹೊತ್ತು ಕಾಲುಭಾಗ ಮಾತ್ರೆಯನ್ನು ನೀಡಿದ್ದರು. ಲಸಿಕೆ ಹಾಕಿಸಿದ ನಂತರದಲ್ಲಿ ತೀವ್ರ ಜ್ವರ ಹಾಗೂ ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಗು ಗುರುವಾರ ಬೆಳಗ್ಗೆ ಸುಧಾರಿಸಿತ್ತು ಎನ್ನಲಾಗಿದೆ. ಆದರೆ, ಮಧ್ಯಾಹ್ನ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದೆ. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗು ಪ್ರಜ್ಞೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆಸ್ಪತ್ರೆಗೆ ಹೋದಾಗ ಮಗು ಕೊನೆಯುಸಿರೆಳೆದಿತ್ತು. ಆದರೆ, ವೈದ್ಯರು ಮಗುವಿನ ಸಾವಿಗೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Exit mobile version