Site icon Vistara News

Gas geyser leak : ಗೀಸರ್‌ ಗ್ಯಾಸ್‌ ಸೋರಿಕೆ; ಬಾತ್‌ರೂಮ್‌ನಲ್ಲೇ ತಾಯಿ-ಮಗ ಸಾವು

Gas geyser leak

ರಾಮನಗರ: ಬಾತ್‌ರೂಮ್‌ಗೆ (gas geyser leaks) ಹೋಗಿದ್ದಾಗ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿದ್ದಾರೆ. ರಾಮನಗರದ ಮಾಗಡಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ. ಶೋಭಾ (40), ದಿಲೀಪ್ (17) ಮೃತ ದುರ್ದೈವಿಗಳು.

ದಿಲೀಪ್‌ ಬಿಸಿ ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದ. ಸುಮಾರು ಸಮಯದವರೆಗೂ ಮಗ ಬಾರದೇ ಇದ್ದಾಗ, ಆತನನ್ನು ನೋಡಲು ಬಾತ್‌ರೂಮ್‌ಗೆ ಬಂದ ಶೋಭಾ, ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಇತ್ತ ಅವರಿಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ ಅವರಿಬ್ಬರು ಮೃತಪಟ್ಟಿದ್ದರು. ನಿನ್ನೆ ಭಾನುವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆ-ಗಾಳಿಗೆ ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ

ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

ಕೆಲವರು ತಮ್ಮವರನ್ನು ಹೆದರಿಸುವ ಸಲುವಾಗಿ ಆಗಾಗ ಸಾಯುವುದಾಗಿ ತಮಾಷೆ ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಈ ತಮಾಷೆಯೇ ಘೋರವಾಗಿ ಬಿಟ್ಟಿದೆ. ಬಿಹಾರದ 33 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಬೆದರಿಸುವ ಪ್ರಯತ್ನದಲ್ಲಿ ನೇಣು ಬಿಗಿದು ಆತ್ಮಹತ್ಯೆ(Self Harming) ಮಾಡಿಕೊಳ್ಳುವಂತೆ ನಟಿಸಲು ಹೋಗಿ ದುರಂತವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಗೋಪಾಲಪಟ್ಟಣಂನ ಕೊಟ್ಟಪಲೆಂ ಪ್ರದೇಶದಲ್ಲಿರುವ ಗಣೇಶ್ ನಗರದಲ್ಲಿ ನಡೆದಿದೆ.

ಬಿಹಾರದ 33 ವರ್ಷದ ಸಹಾಯಕ ಲೋಕೋ ಪೈಲಟ್ ಚಂದನ್ ಕುಮಾರ್ ದುರಂತವಾಗಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಕಳೆದ ಐದು ವರ್ಷಗಳಿಂದ ಕುಟುಂಬದ ಜೊತೆ ವಾಸಿಸುತ್ತಿದ್ದ ಚಂದನ್ ಅವರು ಪತ್ನಿ ಲಾಲ್ ಮುನ್ನಿ ಕುಮಾರಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಪೊಲೀಸ್ ವರದಿ ಪ್ರಕಾರ, ಚಂದನ್ ಅವರ ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದ ಕಾರಣ ಈ ವಿಚಾರಕ್ಕೆ ಅವರ ಮತ್ತು ಅವರ ಹೆಂಡತಿಯ ನಡುವೆ ವಾಗ್ವಾದ ಉಂಟಾಯಿತು. ಆರಂಭದಲ್ಲಿ, ಮುನ್ನಿ ಕುಮಾರಿ ಮಕ್ಕಳ ಪರವಾಗಿ ನಿಂತರು. ಇದರಿಂದ ಕೋಪಗೊಂಡ ಚಂದನ್ ಆಕೆಗೆ ಪಾಠ ಕಲಿಸಲು ಮತ್ತು ಕುಟುಂಬದವರನ್ನು ಹೆದರಿಸಲು, ತನ್ನ ಕುತ್ತಿಗೆಗೆ ಸೀರೆಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ ಹುಕ್‍ಗೆ ಕಟ್ಟಿದರು. ದುರದೃಷ್ಟವಶಾತ್, ಸೀರೆ ಆಕಸ್ಮಿಕವಾಗಿ ಬಿಗಿಯಾಗಿ ಇದು ಚಂದನ್ ಸಾವಿಗೆ ಕಾರಣವಾಯಿತು.

ತುಂಬಾ ಸಮಯವಾದರೂ ಆತನ ಮಲಗುವ ಕೋಣೆಯ ಬಾಗಿಲು ತೆರೆಯದ ಕಾರಣ ಮುನ್ನಿ ಕುಮಾರಿ, ನೆರೆಹೊರೆಯವರ ಸಹಾಯದಿಂದ ಅದನ್ನು ಬಲವಂತವಾಗಿ ತೆರೆಸಿದಳು, ಆದರೆ ಅಲ್ಲಿ ಚಂದನ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಪರೀಕ್ಷಿಸಿದಾಗ ಆತ ಈಗಾಗಲೇ ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ದುರಂತ ಘಟನೆಯು ಕುಟುಂಬವನ್ನು ತೀವ್ರ ಆಘಾತ ಮತ್ತು ದುಃಖದಲ್ಲಿ ಮುಳುಗಿಸಿದೆ. ಪತ್ನಿಯೊಂದಿಗೆ ಜಗಳವಾಡಿದ ನಂತರ ಚಂದನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಣ್ಣೆಪು ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version