ರಾಮನಗರ: ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮತ್ತು ಯುವತಿ ರೈಲಿಗೆ ತಲೆ ಕೊಟ್ಟು ಸಾವಿಗೆ (Lovers end life) ಶರಣಾದ ಭೀಕರ ಘಟನೆಯೊಂದು ರಾಮನಗರದ ಕುಂಬಾಪುರ ರೈಲ್ವೆ ಗೇಟ್ ನಲ್ಲಿ (Ramanagara railway gate) ನಡೆದಿದೆ. ಮೂಲತಃ ನೆಲಮಂಗಲದವರಾದ ಹರ್ಷವರ್ಧನ್ (20) – ನವ್ಯಶ್ರೀ (19) ಪ್ರಾಣ ಕಳೆದುಕೊಂಡವರು.
ಬೆಳಗ್ಗೆ 6.30ರ ಹೊತ್ತಿಗೆ ಇವರಿಬ್ಬರೂ ರೈಲಿಗೆ ತಲೆಕೊಟ್ಟು (lovers falls under Moving train) ಆತ್ಮಹತ್ಯೆ. ಮಾಡಿದ್ದಾರೆ. ಇವರು ಪ್ರೇಮಿಗಳು ಎಂದು ಹೇಳಲಾಗುತ್ತಿದ್ದು, ಸಾವಿಗೆ ಯಾಕೆ ಶರಣಾದರು ಎನ್ನುವ ವಿಚಾರ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಒಂದು ಮೂಲದ ಪ್ರಕಾರ, ಇವರಿಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ವಯಸ್ಸಿನಲ್ಲಿ ಪ್ರೀತಿಯ ಗುಂಗಿನಲ್ಲಿ ಬೀಳಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ. ಕೆಲವೊಮ್ಮೆ ಅವರಿಬ್ಬರಿಗೂ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಆದರೆ, ಪ್ರೀತಿಯನ್ನು ಮರೆಯಲು ಸಾಧ್ಯವಾಗದೆ ಅವರಿಬ್ಬರೂ ಸಾಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : Lovers suicide: ಎರಡೇ ದಿನದ ಅಂತರದಲ್ಲಿ ಪ್ರೇಮಿಗಳ ಆತ್ಮಹತ್ಯೆ; Misunderstading ಕಾರಣ!
ಶನಿ ದೇವಸ್ಥಾನಕ್ಕೆ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಬಾಲಕರ ದಾರುಣ ಸಾವು
ತುಮಕೂರು: ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ (Shani Mahatma temple at Pavagada) ಹೊರಟಿದ್ದ ಇಬ್ಬರು ಬಾಲಕರು (Two boys died in accident) ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಮತ್ತು ಬೊಲೆರೊ ಪಿಕಪ್ ನಡುವೆ ಈ ಅಪಘಾತ ಸಂಭವಿಸಿದೆ.
ಆಂಧ್ರಪ್ರದೇಶದ ರೊದ್ದಂ ಮಂಡಲದ ಚಿನ್ನಿಕೊಡಿಪಲ್ಲಿ ಗ್ರಾಮದ ಬಾಲಕರಾದ (three Boys from Andhra pradesh) ಈಶ್ವರ್ (16), ಯಶ್ವಂತ್ (17) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಇನ್ನೊಬ್ಬ ಬಾಲಕ ರಾಮು (16) ಅವರಿಗೂ ತೀವ್ರ ಗಾಯಗಳಾಗಿದ್ದು ಅವನ ಸ್ಥಿತಿಯೂ ಗಂಭೀರವಾಗಿದೆ.
ಈ ವಿದ್ಯಾರ್ಥಿಗಳು ಆಂಧ್ರ ಪ್ರದೇಶದಿಂದ ಪಾವಗಡ ಶನಿ ಮಹಾತ್ಮ ದೇವಸ್ಥಾನಕ್ಕೆ ಹೊರಟಿದ್ದರು. ಪಾವಗಡದ ಶನಿ ಮಹಾತ್ಮೆ ದೇಗುಲಕ್ಕೆ ಶನಿವಾರ ದೊಡ್ಡ ಪ್ರಮಾಣದಲ್ಲಿ ಭಕ್ತರು ಬರುತ್ತಾರೆ. ಈ ನಂಬಿಕೆಯನ್ನು ಯಾರಿಂದಲೋ ತಿಳಿದ ಈ ಮಕ್ಕಳು ಜತೆಯಾಗಿ ಹೊರಟುಬಂದಿದ್ದಾರೆ. ಅವರ ಬೈಕ್ ಪಾವಗಡದ ಕಡಮಲಕುಂಟೆ ಗ್ರಾಮದ ಬಳಿ ಬಂದಾಗ ಬೊಲೆರೊ ಜತೆ ಅಪಘಾತಕ್ಕೀಡಾಯಿತು.
ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿನ ನಿಮಾನ್ಸ್‌ಗೆ ರವಾನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.