Site icon Vistara News

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

murder case

ರಾಮನಗರ: ರಾಮನಗರದಲ್ಲಿ ಪೈಶಾಚಿಕ ಕೃತ್ಯವೊಂದು (Ramanagar News) ನಡೆದಿದೆ. ಐಸ್‌ಕ್ರೀಮ್‌ ಕೊಡಿಸುವ ನೆಪದಲ್ಲಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಕಾಮುಕನೊಬ್ಬ ಅತ್ಯಾಚಾರವೇಸಗಿ (Physical Abuse) ಬಳಿಕ ಕೊಂದು (Murder case) ಹಾಕಿದ್ದಾನೆ. ರಾಮನಗರದ ಮಾಗಡಿ ಪಟ್ಟಣದಲ್ಲಿ ಈ ಹೇಯ ಕೃತ್ಯ ನಡೆದಿದೆ.

ಬೆಂಗಳೂರಿನ ಗೌರಿಪಾಳ್ಯದ ನಿವಾಸಿ ಇಮ್ರಾನ್ ಖಾನ್‌ ಎಂಬಾತನಿಂದ ಈ ಕೃತ್ಯ ನಡೆದಿದೆ. ಕಳೆದ ಸೋಮವಾರ ಮಾಗಡಿ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಇಮ್ರಾನ್‌ ಖಾನ್‌, ಬಾಲಕಿ ಮೇಲೆ ಕಣ್ಣಾಕಿದ್ದ. ಐಸ್ ಕ್ರೀಂ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿದ್ದ. ಬಳಿಕ ಅತ್ಯಾಚಾರ ಎಸಗಿ ವಿಷ ಯಾರಿಗೂ ತಿಳಿಯಬಾರೆಂದು ಕೊಂದು ಹಾಕಿ, ಕಾಲ್ಕಿತ್ತಿದ್ದ.

ತಿಪ್ಪಗೊಂಡನಹಳ್ಳಿ ತಪ್ಪಲಿನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿತ್ತು‌. ಕಲಾಸಿಪಾಳ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಇಮ್ರಾನ್ ಖಾನ್‌ನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Attempt Murder case : ಬೆಂಗಳೂರಿನ ಕೋರ್ಟ್‌ ಆವರಣದಲ್ಲೇ ಹರಿದ ನೆತ್ತರು; ವಕೀಲೆಗೆ ಚಾಕು ಹಾಕಿದ ದುಷ್ಟ

ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ

ಆರೋಪಿ ಇಮ್ರಾನ್‌ ಖಾನ್‌ನನ್ನು ಎನ್‌ಕೌಂಟರ್‌ ಮಾಡುವಂತೆ ಕುಟುಂಬಸ್ಥರು ಸೇರಿ ಸಾರ್ವಜನಿಕರು ಪ್ರತಿಭಟಿಸಿದರು. ಮಾಗಡಿ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದ ಸಾವಿರಾರು ಜನರು ಪ್ರತಿಭಟಿಸಿದರು. ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version