ರಾಮನಗರ: ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಯುವಕನನ್ನು ಕೊಂದು ರಸ್ತೆ ಬದಿ ಬಿಸಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮವಾದ ದೊಡ್ಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಂಜಿತ್ ಕುಮಾರ್ (29) ಕೊಲೆಯಾದವನು.
ರಂಜಿತ್ ಕುಮಾರ್ ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಕೆಲ ಮಾಡುತ್ತಿದ್ದ. ರಂಜಿತ್ ಚಿಕ್ಕಪ್ಪ ನಾಗರಾಜು, ಮಂಗಳಮ್ಮ ಮತ್ತು ಅವರ ಮಗ ಸುನೀಲ್ ಕುಮಾರ್ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಮಧ್ಯರಾತ್ರಿ ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ಗಲಾಟೆ ನಡೆದಿದೆ. ಈ ಮೂವರಿಂದ ಏಕಾಏಕಿ ರಂಜಿತ್ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.
ದುಷ್ಕರ್ಮಿಗಳು ಮನಸೋ ಇಚ್ಛೆ ಹೊಡೆದು ಕೊಂದು ಬಳಿಕ ರಂಜಿತ್ ಮೃತದೇಹವನ್ನು ರಸ್ತೆ ಬದಿಗೆ ಎಳೆದು ಹಾಕಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಡರಾತ್ರಿಯೇ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ವಿಚಾರಣೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್
ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿದ ಲಾರಿ ಚಾಲಕ
ಪಾರ್ಕಿಂಗ್ ಇಲ್ಲ ಮುಂದೆ ಹೋಗಿ ಅಂದಿದ್ದಕ್ಕೆ ಲಾರಿ ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಪಾರ್ಕಿಂಗ್‌ಗೆ ಬೇರೆ ವಿಶ್ರಾಂತಿ ಸ್ಥಳವಿದ್ದರೂ ಟೋಲ್‌ನ ಬಳಿಯೇ ಲಾರಿಗಳ ಪಾರ್ಕಿಂಗ್ ಮಾಡುತ್ತಿದ್ದರು. ಅದನ್ನು ಕೇಳೊಕೆ ಹೋದರೆ ಉತ್ತರಭಾರತದ ಲಾರಿ ಡ್ರೈವರ್‌ನಿಂದ ಟೋಲ್ ಸಿಬ್ಬಂದಿಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ಬಳಿ ಘಟನೆ ನಡೆದಿದೆ.
ಲಾಂಗ್ ತೋರಿಸಿದ್ದಕ್ಕೆ ಸಿಬ್ಬಂದಿ ಲಾರಿ ಏರಿ ಮಾತನಾಡುವ ವೇಳೆ ಏಕಾ ಏಕಿ ಸಿಬ್ಬಂದಿಯನ್ನೆ ಚಾಲಕ ಲಾರಿಯಲ್ಲಿ ಎಳೆದೊಯ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವು ಲಾರಿ ಡ್ರೈವರ್‌ಗಳು ಮದ್ಯ ಸೇವಿಸಿ ಗಾಂಜಾ ಸೇವನೆ ಮಾಡಿ ಮಲಗುತ್ತಾರೆ ಎಂದು ಎಂದು ಟೋಲ್ ಸಿಬ್ಬಂದಿ ಆರೋಪಿಸಿದ್ದಾರೆ. ಕೇಳಲು ಹೋದರೆ ಕೆಲ ಚಾಲಕರು ಲಾಂಗ್ ತೋರಿಸಿ ರೌಡಿಸಂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಿಬ್ಬಂದಿಯನ್ನು ಎಳೆದೊಯ್ದ ಲಾರಿ ಚಾಲಕನನ್ನು ತಡೆದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ಬಳಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ