Site icon Vistara News

Self Harming : ನೇಣಿಗೆ ಶರಣಾದ ಮಹಿಳಾ ಪೊಲೀಸ್‌; ಜಗಳದಿಂದ ಬೇಸತ್ತು ಬಾವಿಗೆ ಜಿಗಿದ ದೇವಮ್ಮ

Self Harming Constable Suicide೧

ರಾಮನಗರ: ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಆತ್ಮಹತ್ಯೆ. ಮಾಡಿದ್ದಾರೆ (Self Harming). ಬೆಂಗಳೂರು ನಗರ ವ್ಯಾಪ್ತಿಯ (Bangalore News) ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಕಾನ್‌ಸ್ಟೇಬಲ್‌ ಮಂಜುಶ್ರೀ (27) ಆತ್ಮಹತ್ಯೆ ಮಾಡಿಕೊಂಡವರು.

ಮಂಜುಶ್ರೀ ಅವರು ಹಾರೋಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್‌ ಠಾಣೆ ಕಾನ್‌ಸ್ಟೇಬಲ್‌ ಆಗಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಮಂಜುಶ್ರೀ ಅವರದು ಬಡ ಕುಟುಂಬವಾಗಿದ್ದು, ಉತ್ತಮ ಬದುಕನ್ನು ಅರಸಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿದ್ದರು. ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ. ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ನೊಂದು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ : Murder Case: ಪೊಲೀಸರು ಬಂಧಿಸಿದರೆ ಆತ ಉಳೀತಿದ್ದ! ಕಡೂರು ಕೊಲೆ ಕೇಸ್

ಇನ್ನೊಬ್ಬ ಮಹಿಳೆ ಜತೆ ಜಗಳ: ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ 3 ಮಕ್ಕಳ ತಾಯಿ

ರಾಯಚೂರು: ಕೆಲವೊಮ್ಮೆ ಅತ್ಯಂತ ಸಣ್ಣ ಸಣ್ಣ ಘಟನೆಗಳು ಪ್ರಾಣಕ್ಕೇ ಎರವಾಗುತ್ತವೆ ಎನ್ನುವುದಕ್ಕೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿನಲ್ಲಿ ಇನ್ನೊಬ್ಬ ಮಹಿಳೆಯ ಜತೆ ನಡೆದ ಜಗಳದಿಂದ ಬೇಸತ್ತು ಮಹಿಳೆಯೊಬ್ಬರು ಬಾವಿಗೆ ಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ (Self Harming).

ದೇವದುರ್ಗ ತಾಲ್ಲೂಕಿನ ಹೊನ್ನಟಗಿ ಗ್ರಾಮದಲ್ಲಿ ಘಟನೆ ನಡೆದಿದ್ದು ಲಿಂಗಸೂಗೂರು ಮೂಲದ ಮಹಿಳೆ ದೇವಮ್ಮ (35) ಮೃತಪಟ್ಟವರು. ಗ್ರಾಮದ ಬಸನಗೌಡ ಮಾಲಿ ಪಾಟೀಲ್ ಎಂಬವರ ಜಮೀನು ಕೆಲಸಕ್ಕೆ ಬಂದಿದ್ದ ಮಹಿಳೆ ಅಲ್ಲೇ ಬಾವಿಗೆ ಹಾರಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುವ ವೇಳೆ ದೇವಮ್ಮ ಅವರಿಗೆ ಮತ್ತೊಬ್ಬ ಮಹಿಳೆ ದುರ್ಗಮ್ಮ ಅನ್ನೋರ ಜೊತೆ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು, ಜಮೀನಿನಲ್ಲಿ ಇದ್ದ ಬಾವಿಗೆ ಹಾರಿದ್ದಾರೆ ದೇವಮ್ಮ.

ಜಮೀನಿನ ಕೆಲಸಕ್ಕೆ ಬಂದಾಗ ಮೂವರು ಮಕ್ಕಳನ್ನು ಕೂಡಾ ಕರೆದುಕೊಂಡು ಬಂದಿದ್ದರು. ಅವರು ಶೆಡ್‌ನಲ್ಲಿ ಮೂವರು ಮಕ್ಕಳನ್ನು ಬಿಟ್ಟು ಜಮೀನಿನ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಜಗಳ ನಡೆದು ದೇವಮ್ಮ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಮಹಿಳೆಯರಿಬ್ಬರ ಮಧ್ಯೆ ಯಾವ ವಿಚಾರಕ್ಕೆ ಜಗಳ ನಡೆಯಿತು, ಮಕ್ಕಳನ್ನು ಬಿಟ್ಟು ಬಾವಿಗೆ ಹಾರುವಷ್ಟು ಗಂಭೀರವಾದ ಸಂಗತಿ ಏನಾಯಿತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Exit mobile version