Site icon Vistara News

Women Murder | ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

Women Murder

ರಾಮನಗರ : ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ (ಸೆ.8) ಅಪರಿಚಿತ ಮಹಿಳೆಯ ಶವ (Women Murder) ಪತ್ತೆಯಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಜಯಪುರ ಬಳಿ ಬೆಳ್ಳಂಬೆಳಗ್ಗೆ ಈ ಕೃತ್ಯ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಕೊಲೆ ಮಾಡಿ ಹೆದ್ದಾರಿಯಲ್ಲಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯೂ ಸಾವಿರಾರು ವಾಹನಗಳು ಓಡಾಡುವ ಈ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೀಗೆ ಶವ ಎಸೆದುಹೋಗಿರುವ ಕೃತ್ಯ ಸ್ಥಳೀಯರನ್ನೂ ಬೆಚ್ಚಿ ಬೀಳಿಸಿದೆ ಮಾತ್ರವಲ್ಲದೆ, ಪೊಲೀಸರಿಗೂ ತನಿಖೆಗೆ ಸವಾಲೆಸೆದಂತಿದೆ.

ಇದನ್ನೂ ಓದಿ | ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಮೇವಿನ ವಿಚಾರದಲ್ಲಿ ಕೊಲೆ ಮಾಡಿ ಎಸೆದಿರುವ ಶಂಕೆ

Exit mobile version