Site icon Vistara News

Ramdurg Election Results: ರಾಮದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ್‌ಗೆ ವಿಜಯದ ಮಾಲೆ

ashok pattan winner the assembly election ramdurg constituency

ಬೆಂಗಳೂರು, ಕರ್ನಾಟಕ: ಬೆಳಗಾವಿ ಜಿಲ್ಲೆಯ ಪ್ರಮುಕ ಕ್ಷೇತ್ರಗಳಲ್ಲಿ ಒಂದಾಗಿರುವ ರಾಮದುರ್ಗ ಕ್ಷೇತ್ರವನ್ನು ಬಿಜೆಪಿಯು ಕಳೆದುಕೊಂಡಿದೆ. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಬದಲಿಗೆ ಬಿಜೆಪಿಯು ಹೊಸ ಮುಖ ಚಿಕ್ಕರೇವಣ್ಣ ಟಿಕೆಟ್ ನೀಡಿತ್ತು. ಕಾಂಗ್ರೆಸ್‌ನ ಅಭ್ಯರ್ಥಿ ಅಶೋಕ್ ಪಟ್ಟಣ ಅವರು 80294 ಮತಗಳನ್ನು ಪಡೆದುಕೊಂಡು 11730 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಅವರ ಬುಟ್ಟಿಗೆ 68564 ಮತಗಳನ್ನು ಪಡೆದುಕೊಂಡಿದ್ದರು. 11730 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದೆ(Ramdurg Election Results).

2023ರ ಅಭ್ಯರ್ಥಿಗಳು ಯಾರು?

ಹಾಲಿ ಶಾಸಕ ಮಹಾದೇವಪ್ಪ ಯಾದವಾಡ್ ಬದಲಿಗೆ ಬಿಜೆಪಿಯು ಹೊಸ ಮುಖ ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡಿತ್ತು. ಅಶೋಕ್ ಪಟ್ಟಣ್ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಜೆಡಿಎಸ್‌ನಿಂದ ಪ್ರಕಾಶ್ ಮುಧೋಳ್ ಕಣದಲ್ಲಿದ್ದರು.

ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ; ಪ್ರದೀಪ್ ಈಶ್ವರ್ ರೋಡ್ ಶೋ, ಎಲ್ಲಿ ಹೋದ್ರು ಸುಧಾಕರ್​?

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ರಾಮದುರ್ಗ ಕೂಡ ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಮದುರ್ಗ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ಇತ್ತೀಚಿನ ಕೆಲವು ಚುನಾಣೆಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಮಹದೇವಪ್ಪ ಯಾದವಾಡ್ ಅವರು 68349 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ಅಶೋಕ್ ಪಟ್ಟಣ ಅವರು 2018ರಲ್ಲಿ ಯಾದವಾಡ್ ವಿರುದ್ಧ 65474 ಮತಗಳನ್ನು ಪಡೆದುಕೊಂಡು ಅಲ್ಪ ಅಂತರದಲ್ಲಿ ಸೋಲು ಕಂಡಿದ್ದರು.

Exit mobile version