Site icon Vistara News

JDS Convention | ದೇವೇಗೌಡರ ತ್ಯಾಗ ನೆನೆದು ಕಣ್ಣೀರಿಟ್ಟ ಎಚ್‌ಡಿಕೆ, ರೇವಣ್ಣ

JDS Convention

ಮಂಡ್ಯ: ನಾಗಮಂಗಲದ ಜೆಡಿಎಸ್‌ ಸಮಾವೇಶದಲ್ಲಿ(JDS Convention) ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಎಚ್‌.ಡಿ.ದೇವೇಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದೆ ಮನೆಯಿಂದಲೇ ಟಿವಿಯಲ್ಲಿ ಸಮಾರಂಭ ವೀಕ್ಷಣೆ ಮಾಡುತ್ತಿದ್ದುದ್ದನ್ನು ಸ್ಮರಿಸಿಕೊಂಡ ಎಚ್‌.ಡಿ. ಕುಮಾರಸ್ವಾಮಿ, ಅವರು ಮಾಡಿದ ತ್ಯಾಗವನ್ನು ನೆನೆದು ಭಾವುಕರಾದರು. ಈ ವೇಳೆ ಅವರನ್ನು ಕಂಡು ರೇವಣ್ಣ, ವೇದಿಕೆಯಲ್ಲಿದ್ದ ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕೂಡ ಕಣ್ಣೀರು ಹಾಕಿದರು.

ಸೋಮನಹಳ್ಳಿ ಅಮ್ಮನ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ 20ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಸಮಾವೇಶವನ್ನು ಮನೆಯಿಂದಲೇ ವೀಕ್ಷಿಸುತ್ತಿದ್ದದ್ದನ್ನು ಎಲ್‌ಇಡಿ ಪರದೆಯಲ್ಲಿ ಕುಮಾರಸ್ವಾಮಿ ನೋಡಿ ಭಾವುಕರಾದರು. ಈ ವೇಳೆ ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಎಚ್‌ಡಿಕೆ ಅವರ ಬೆನ್ನು ತಟ್ಟಿ ಸಮಾಧಾನಪಡಿಸಿದರು.

ಇದನ್ನೂ ಓದಿ | ಮಂಡ್ಯದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ: ಬೃಹತ್‌ ಸಮಾವೇಶಕ್ಕೂ ಮುನ್ನ ಭರ್ಜರಿ ಬಾಡೂಟ

ಮಂಡ್ಯ ಬ್ರೇಕಿಂಗ್…

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ನಾವೇ ಎಂದು ಕೆಲವರು ಹೇಳುತ್ತಾರೆ. ಆದರೆ, ನಾನು ಸಿಎಂ ಆಗಿದ್ದು ನನ್ನ ತಂದೆ ತಾಯಿ ಆಶೀರ್ವಾದ ಹಾಗೂ ನಿಮ್ಮಿಂದ. ದೇವೇಗೌಡರು ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ಇದೆ. ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ನಾನು ಅಳಬಾರದು ಎಂದುಕೊಂಡಿದ್ದೆ. ಆದರೆ, ನಮ್ಮದು ಕಟುಕ ಹೃದಯ ಅಲ್ಲ. ಇದು ನಾಟಕ ಅಲ್ಲ, ಅವರ ಪರಿಸ್ಥಿತಿ ಕಣ್ಣೀರು ತರುತ್ತದೆ. ಅವರು ಇರುವ ಸ್ಥಿತಿ ನೋಡಿದರೆ ನೋವಾಗುತ್ತದೆ ಎಂದರು.

ನಿಖಿಲ್ ಕುಮಾರಸ್ವಾಮಿ ಚುನಾವಣೆ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಮಂಡ್ಯ ಜನರು ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲಿಲ್ಲ. ಬಿಜೆಪಿ, ಕಾಂಗ್ರೆಸ್, ರೈತಸಂಘ, ಕೆಲ ಮಾಧ್ಯಮಗಳು ಸೋಲಿಸಿದ್ದು. ಇವರೆಲ್ಲರೂ ಚಕ್ರವ್ಯೂಹ ರಚಿಸಿ ನಮ್ಮನ್ನು ಸೋಲಿಸಿದರು ಎಂದು ಹೇಳಿದರು.

Exit mobile version