ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder) ಸಾಕ್ಷ್ಯ ನಾಶ ಮಾಡಲು ಆರೋಪಿಗಳಿಗೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ನೆರವು ನೀಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಸಬ್ ಇನ್ಸ್‌ಪೆಕ್ಟರ್ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕೇರಳ ಪ್ರವಾಸದಲ್ಲಿದ್ದ ಪಶ್ಚಿಮ ವಿಭಾಗದ ಸಬ್ ಇನ್ಸ್ ಪೆಕ್ಟರ್‌ಗೆ ಆರೋಪಿಗಳು ಕೊಲೆ ಮಾಡಿರುವ ಮಾಹಿತಿ ನೀಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್‌ಗೆ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಮಾಲೀಕ ವಿನಯ್ ಆಪ್ತನಾಗಿದ್ದ. ಹೀಗಾಗಿ ಆರೋಪಿಗಳು ಕೊಲೆ ಮಾಡಿರುವುದಾಗಿ ಹೇಳಿದಾಗ ಶರಣಾಗುವಂತೆ ಸಬ್ ಇನ್ಸ್‌ಪೆಕ್ಟರ್ ಸೂಚಿಸಿದ್ದರು ಎನ್ನಲಾಗಿದೆ. ನಂತರದ ಬೆಳವಣಿಗೆಗಳಲ್ಲಿ ಶವ ಸಾಗಿಸುವ ಬಗ್ಗೆಯೂ ಸಲಹೆ ನೀಡಿರುವ ಆರೋಪವಿದೆ.
ಆರೋಪ ಕೇಳಿಬಂದಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಅನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Electric shock : ನೇರಳೆ ಮರವೇರಿದ ಬಾಲಕನಿಗೆ ಕರೆಂಟ್ ಶಾಕ್; ಕೆಳಗೆ ಬಿದ್ದೊಡನೆ ಹಾರಿಹೋಯ್ತು ಪ್ರಾಣಪಕ್ಷಿ
ಬಾಸ್ ಅಂತ ಯಾಕ್ ಬಕೆಟ್ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!
ಯಾದಗಿರಿ: ನಟ ದರ್ಶನ್ (Actor Darshan) ಅಭಿಮಾನಿಯೊಬ್ಬ ಪಂಚರ್ ಅಂಗಡಿ ಯುವಕನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಯಾದಗಿರಿಯ ಅಭಿ ಎಂಬಾತನಿಗೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಜು ಜೀವ ಬೆದರಿಕೆ ಹಾಕಿದ್ದಾನೆ.
ಅಭಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದ. ಬಾಸ್ ಬಾಸ್ ಎಂದು ಬಕೇಟ್ ಯಾಕೆ ಹಿಡಿತಿರಿ. ನಿಮ್ಮ ತಂದೆ-ತಾಯಿಗೆ ಬಕೆಟ್ ಹಿಡಿಯಿರಿ ಎಂದು ಸ್ಟೇಟಸ್ ಹಾಕಿದ್ದ. ಇದನ್ನೂ ಗಮನಿಸಿದ ರಾಜು, ಅಭಿಗೆ ಫೋನ್ ಕಾಲ್ ಮಾಡಿ ಜೀವಂತ ಸುಡುವುದಾಗಿ ಬೆದರಿಸಿದ್ದಾನೆ. ಬಾಸ್ ಬಗ್ಗೆ ಮಾತಾಡಿದರೆ ಖಾಲಿ ಆಗುತ್ಯಾ ನೀನು, ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತದೆ.
ಇದನ್ನೂ ಓದಿ: Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್ ಕುಟುಂಬಸ್ಥರು
ಕೂಡಲೇ ಬಾಸ್‌ಗೆ ಕ್ಷಮೆ ಕೇಳಿ ವಿಡಿಯೊ ಮಾಡಿ ಹಾಕು, ಈ ಹಿಂದೆ ಮಾಡಿರುವ ವಿಡಿಯೋ ಡಿಲೀಟ್ ಮಾಡು ಎಂದು ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಜು ಬೆದರಿಕೆ ಹಾಕಿದ್ದಾನೆ. ಇತ್ತ ಅಭಿ ನಾನೇಕೆ ಕ್ಷಮೆ ಕೇಳಬೇಕು, ನಾನು ಡಿ ಬಾಸ್ ಅಂತೇನು ಹಾಕಿಲ್ಲ. ಮತ್ಯಾಕೆ ಡಿಲೀಟ್ ಮಾಡಬೇಕು ಎಂದು ಪ್ರಶ್ನೆಸಿದ್ದಾನೆ. ಬಾಸ್ ಅಂದ್ರೂ, ಡಿ ಬಾಸ್ ಅಂದ್ರೂ ಒಂದೇ, ಕೂಡಲೇ ವಿಡಿಯೊ ಡಿಲೀಟ್ ಮಾಡು ಎಂದು ರಾಜು ಒತ್ತಾಯಿಸಿದ್ದಾರೆ. ಬೆದರಿಕೆ ಹಾಕಿದ್ದ ಆಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಯಾದಗಿರಿ ನಗರ ಠಾಣೆ ಪೊಲೀಸರು ರಾಜು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.