Site icon Vistara News

Road Accident: ರಾಯಬಾಗದಲ್ಲಿ ಕಾರು-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಐವರ ಸಾವು

Car Accident 2

ಬೆಳಗಾವಿ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಐವರ ಮೃತಪಟ್ಟಿರುವ ಘಟನೆ (Road Accident) ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ಶುಕ್ರವಾರ ನಡೆದಿದೆ. ಬೈಕ್‌ಗೆ ಗುದ್ದಿ ನಂತರ ಮರಕ್ಕೆ ಕಾರು ಡಿಕ್ಕಿಯಾಗಿದ್ದರಿಂದ ಬೈಕ್ ಸವಾರರು ಸೇರಿ ಐವರು ದುರ್ಮರಣ ಹೊಂದಿದ್ದಾರೆ.

ಗುರ್ಲಾಪುರದ ನಿವಾಸಿಗಳಾದ ಮಲ್ಲಿಕಾರ್ಜುನ್ ಮರಾಠೆ(16), ಲಕ್ಷ್ಮೀ ಮರಾಠೆ(19), ಆಕಾಶ ಮರಾಠೆ(14), ನಿಪನಾಳ ಗ್ರಾಮದ ಶ್ರೀಕಾಂತ ಪಡತರಿ(22), ಮುಗಳಖೋಡ ಗ್ರಾಮದ ನಾಗಪ್ಪ ಯಡವನ್ನವರ್(48) ಮೃತರು. ಗುರ್ಲಾಪುರ ಕಡೆಯಿಂದ ಮುಗಳಖೋಡದತ್ತ ಹೊರಟಿದ್ದ ಕಾರು ಮೊದಲು ಬೈಕ್‌ಗೆ ಗುದ್ದಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಇದರಿಂದ ದುರಂತ ನಡೆದಿದ್ದು, ಐವರು ಮೃತರ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.

Car Accident: ಬೆಳಗಾವಿಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿ; ಮೂವರ ದುರ್ಮರಣ, ಮೂವರ ಸ್ಥಿತಿ ಗಂಭೀರ

ಬೆಳಗಾವಿ: ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ದುರಂತ (Car Accident) ಸಂಭವಿಸಿದ್ದು, ಮಹಿಳೆ, ಮಗು ಸೇರಿ ಮೂವರು ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ | Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

ಮುತ್ತು ಸತ್ಯಪ್ಪ ನಾಯ್ಕ (8) ಗೋಪಾಲ ಸತ್ಯಪ್ಪ ನಾಯ್ಕ(45) ಸುಮಿತ್ರಾ ಸಂಗಳಾ (51) ಮೃತರು. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

ಕಲಬುರಗಿ: ಟಂಟಂ ವಾಹನವು ಪಲ್ಟಿಯಾಗಿ ಸ್ಥಳದಲ್ಲೆ (Road Accident) ವೃದ್ಧೆ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಘಟನೆ ನಡೆದಿದೆ. ಕಲ್ಲವ್ವ ಪಾಣೆಗಾರ್ (60) ಮೃತ ದುದೈವಿ.

ಗಂಭೀರವಾಗಿ ಗಾಯಗೊಂಡವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೂಲಿ ಕೆಲಸಕ್ಕೆಂದು ಟಂಟಂವೊಂದರಲ್ಲಿ 15 ಮಂದಿ ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನವು ಪಲ್ಟಿಯಾಗಿದೆ.

ವಾಹನದಡಿ ಸಿಲುಕಿದ ವೃದ್ಧೆ ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದರು. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version